ಪಂಜಾಬ್ ಹಾಗೂ ಮುಂಬೈ ನಡುವಿನ ರೋಚಕ ಕದನದಲ್ಲಿ ಪಂಜಾಬ್ ತಂಡ ಎರಡನೇ ಸೂಪರ್ ಓವರ್ನಲ್ಲಿ ಗೇಲ್ ಹಾಗೂ ಮಾಯಾಂಕ್ ಅವರ ಅದ್ಭುತ ಬ್ಯಾಟಿಂಗ್ನಿಂದಾಗಿ ಭರ್ಜರಿ ಜಯ ಸಾದಿಸಿದೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ ಕೆ.ಎಲ್.ರಾಹುಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.
ಏಕಾಂಗಿ ಹೋರಾಟ ನಡೆಸಿದ ಡಿಕಾಕ್ 3 ಬೌಂಡರಿ, 3 ಸಿಕ್ಸರ್ಗಳ ನೆರವಿನಿಂದ 53ರನ್ ಗಳಿಸಿದರು.
2019ರ ವಿಶ್ವಕಪ್ ನಂತ್ರ ಐಸಿಸಿಯ ಸೂಪರ್ ಓವರ್ ಕುರಿತು ಹೊಸ ನಿಯಮ ಜಾರಿಗೆ ತಂದಿದೆ. ಐಸಿಸಿಯ ನೂತನ ನಿಯಮದ ಪ್ರಕಾರ ಸೂಪರ್ ಓವರ್ ಡ್ರಾ ಆದ್ರೂ, ಮತ್ತೊಂದು ಸೂಪರ್ ಓವರ್ ಆಡಿಸಬೇಕಾಗುತ್ತೆ.
ಸೂಪರ್ ಓವರ್ನಲ್ಲಿ ಪೋಲಾರ್ಡ್ ಬಾರಿಸಿದ ಬಾಲನ್ನು ಮಾಯಾಂಕ್ ಅದ್ಭುತ ಫೀಲ್ಡಿಂಗ್ ಮಾಡಿ ಪಂಜಾಬ್ ಗೆಲುವಿಗೆ ಪ್ರಮುಖ ಕಾರಣಕರ್ತರಾದರು.
ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆ.ಎಲ್.ರಾಹುಲ್, ಸತತ ಮೂರನೇ ವರ್ಷವೂ ಕೂಡ ಐಪಿಎಲ್ನಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದಾರೆ. 2018 ರಲ್ಲಿ 659 ರನ್ ಕಲೆಹಾಕಿದ್ದ ರಾಹುಲ್, 2019 ರಲ್ಲೂ 593 ರನ್ ಗಳಿಸಿದ್ರು.
ಐಸಿಸಿ ನಿಯಮದ ಪ್ರಕಾರ ಮೊದಲ ಸೂಪರ್ನಲ್ಲಿ ಕಣಕ್ಕಿಳಿದ ಬ್ಯಾಟ್ಸ್ಮನ್ಗಳು ಮತ್ತೆ ಬ್ಯಾಟಿಂಗ್ ಮಾಡುವಂತಿಲ್ಲ. ಹಾಗೆಯೇ ಮೊದಲ ಸೂಪರ್ ಓವರ್ ಮಾಡಿದ ಬೌಲರ್ ಮತ್ತೊಮ್ಮೆ ಬೌಲಿಂಗ್ ಮಾಡೋಹಾಗಿಲ್ಲ.