IPL 2021: ಈ ಸಲ ಕಪ್ ನಮ್ದೆ! ಅಭ್ಯಾಸ ಪಂದ್ಯದಲ್ಲಿ ಮಿಂಚಿದ ಆರ್​ಸಿಬಿಯ ಯುವ ಸೇನೆ, ಶೈನ್​ ಆದ ಸೈನಿ, ಭರತ್, ರಜತ್

|

Updated on: Apr 04, 2021 | 12:03 PM

IPL 2021: ಮೊದಲ ಅಭ್ಯಾಸ ಪಂದ್ಯದಲ್ಲಿ ರಜತ್ ಪಾಟಿದಾರ್ ಉತ್ತಮ ಪ್ರದರ್ಶನ ತೋರಿದರು. ರಜತ್ ಪಾಟಿದಾರ್ ಕೇವಲ 35 ಎಸೆತಗಳಿಂದ 53 ರನ್ ಗಳಿಸಿ ತಮ್ಮ ತಂಡವನ್ನು 153 ರನ್ ಗಳಿಸುವಲ್ಲಿ ಯಶಸ್ವಿಯಾದರು.

IPL 2021: ಈ ಸಲ ಕಪ್ ನಮ್ದೆ! ಅಭ್ಯಾಸ ಪಂದ್ಯದಲ್ಲಿ ಮಿಂಚಿದ ಆರ್​ಸಿಬಿಯ ಯುವ ಸೇನೆ, ಶೈನ್​ ಆದ ಸೈನಿ, ಭರತ್, ರಜತ್
ಆರ್​ಸಿಬಿ ಅಭ್ಯಾಸ ಪಂದ್ಯ
Follow us on

ಐಪಿಎಲ್ 2021 ಕ್ಕೆ ತಂಡಗಳ ಸಿದ್ಧತೆಗಳು ಭರದಿಂದ ಸಾಗಿವೆ. ಪ್ರತಿಯೊಂದು ತಂಡವು ತನ್ನದೇ ಆದ ಕಾರ್ಯತಂತ್ರಗಳನ್ನು ತನ್ನದೇ ಆದ ರೀತಿಯಲ್ಲಿ ಕಾರ್ಯಗತಗೊಳಿಸುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂದರೆ ಆರ್‌ಸಿಬಿ ಸಹ ತನ್ನ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಅದನ್ನು ಪರೀಕ್ಷಿಸಲು ಇಂಟ್ರಾ-ಪ್ರಾಕ್ಟೀಸ್ ಪಂದ್ಯವನ್ನು ಆಯೋಜಿಸಿತ್ತು. ಐಪಿಎಲ್​ ಆರಂಭಕ್ಕೂ ಮುನ್ನ ಎಲ್ಲಾ ತಂಡಗಳು ಇದನ್ನು ಮಾಡುತ್ತವೆ. ಆರ್​ಸಿಬಿ ತಮ್ಮ ತಂಡದ ಆಟಗಾರರನ್ನು ಎರಡು ಗುಂಪುಗಳಾಗಿ ವಿಂಗಡಿಸಿ ಅವರ ನಡುವೆ ಪಂದ್ಯ ಆಯೋಜಿಸಿತ್ತು. ಇಂತಹ ಪಂದ್ಯಗಳ ಮೂಲಕ ಆಟಗಾರರ ಸಾಧನೆ ಹೇಗಿತ್ತು ಎಂಬುದನ್ನು ಪರೀಕ್ಷಿಸಲಾಗುತ್ತದೆ.

ಆರ್‌ಸಿಬಿ ತಂಡವು ಎರಡು ಗುಂಪುಗಳಾಗಿ ವಿಭಜನೆ ಮಾಡಿ ಎ ಮತ್ತು ಬಿ ತಂಡಗಳನ್ನು ರಚಿಸಲಾಯಿತು. ಎ ತಂಡದಲ್ಲಿ ಚಹಲ್, ಸೈನಿ, ಕೆ.ಎಸ್.ಭರತ್ ಮತ್ತು ಶಹಬಾಜ್‌ರಂತಹ ಆಟಗಾರರು ಇದ್ದರು. ಟೀಮ್ ಬಿ ಯಲ್ಲಿ ಸಿರಾಜ್, ರಜತ್ ಪಾಟಿದಾರ್, ಸುಯಾಶ್ ಮತ್ತು ಹರ್ಷಲ್ ಪಟೇಲ್ ಅವರಂತಹ ಆಟಗಾರರು ಭಾಗಿಯಾಗಿದ್ದರು.

ರಜತ್ ಪಾಟಿದಾರ್ ಸಖತ್ ಆಟ
ಮೊದಲ ಬ್ಯಾಟಿಂಗ್ ಮಾಡಿದ ಬಿ ತಂಡದಲ್ಲಿ 27 ವರ್ಷದ ರಜತ್ ಪಾಟಿದಾರ್ ಅವರನ್ನು ಫೆಬ್ರವರಿಯಲ್ಲಿ ನಡೆದ ಮಿನಿ ಹರಾಜಿನಲ್ಲಿ ಬಿಡ್ಡಿಂಗ್ ಮಾಡುವ ಮೂಲಕ ಆರ್‌ಸಿಬಿ ಖರೀದಿಸಿತು. ಮೊದಲ ಅಭ್ಯಾಸ ಪಂದ್ಯದಲ್ಲಿ ರಜತ್ ಪಾಟಿದಾರ್ ಉತ್ತಮ ಪ್ರದರ್ಶನ ತೋರಿದರು. ರಜತ್ ಪಾಟಿದಾರ್ ಕೇವಲ 35 ಎಸೆತಗಳಿಂದ 53 ರನ್ ಗಳಿಸಿ ತಮ್ಮ ತಂಡವನ್ನು 153 ರನ್ ಗಳಿಸುವಲ್ಲಿ ಯಶಸ್ವಿಯಾದರು.

ಸೈನಿಗೆ 3 ವಿಕೆಟ್
ಮೊದಲ ಇನ್ನಿಂಗ್‌ನಲ್ಲಿ ಟೀಮ್ ಎ ಯಿಂದ ಸಾಟಿಯಿಲ್ಲದ ಬೌಲಿಂಗ್ ಇತ್ತು. ಯುಜ್ವೇಂದ್ರ ಚಹಲ್ ಕೇವಲ 20 ರನ್‌ಗಳಿಗೆ 4 ಓವರ್‌ಗಳಲ್ಲಿ 2 ವಿಕೆಟ್ ಪಡೆದರು. ಅದೇ ಸಮಯದಲ್ಲಿ ನವದೀಪ್ ಸೈನಿ 4 ಓವರ್‌ಗಳಲ್ಲಿ 40 ರನ್‌ಗಳಿಗೆ 3 ವಿಕೆಟ್ ಪಡೆದರು. ಇದಲ್ಲದೆ, ಹರ್ಷಲ್ ಪಟೇಲ್ ಅವರ ಹೆಸರಿನಲ್ಲಿ 1 ವಿಕೆಟ್ ಸೇರಿತು.

ಹರ್ಷಲ್ ಪಟೇಲ್ ಪಂದ್ಯ ವಿಜೇತ ಇನ್ನಿಂಗ್ಸ್
154 ರನ್​ಗಳ ಗುರಿ ನೀಡಿದ ಟೀಮ್ ಬಿ ಯನ್ನು ಟೀಮ್​ ಎ ಸುಲಭವಾಗಿ ಮಣಿಸಿತು. 200 ಕ್ಕೂ ಹೆಚ್ಚು ಸ್ಟ್ರೈಕ್ ದರದಲ್ಲಿ ಶಹಬಾಜ್ 15 ಎಸೆತಗಳಲ್ಲಿ 39 ರನ್ ಗಳಿಸಿದರೆ, ಕೆಎಸ್ ಭರತ್ 28 ಎಸೆತಗಳಲ್ಲಿ 38 ರನ್ ಗಳಿಸಿದರು. ಈ ಇಬ್ಬರ ಹೊರತಾಗಿ, ಆಲ್‌ರೌಂಡರ್ ಹರ್ಷಲ್ ಪಟೇಲ್ ಕೂಡ 30 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಪಟೇಲ್ ಅವರ ಈ ಇನ್ನಿಂಗ್ಸ್‌ನಲ್ಲಿ ತಂಡ ಎ ಪಂದ್ಯವನ್ನು ಗೆದ್ದುಕೊಂಡಿತು. ಎ ತಂಡವು 6 ವಿಕೆಟ್‌ಗಳನ್ನು ಕಳೆದುಕೊಂಡು 155 ರನ್ ಗಳಿಸಿತು.

ಹರ್ಷಲ್ ಪಂದ್ಯಶ್ರೇಷ್ಠ
30 ವರ್ಷದ ಹರ್ಷಲ್ ಪಟೇಲ್ ಪಂದ್ಯದಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಕಮಾಲ್ ಮಾಡಿದ್ದರು. ಹೀಗಾಗಿ ತಂಡದ ಗೆಲುವಿಗೆ ಸಹಾಯ ಮಾಡಿದ್ದಕ್ಕಾಗಿ ಪಂದ್ಯಶ್ರೇಷ್ಠರಾಗಿ ಆಯ್ಕೆಯಾದರು.

ಇದನ್ನೂ ಓದಿ:IPL 2021: ಐಪಿಎಲ್​ನಲ್ಲಿ ಕೊಹ್ಲಿಗೆ ಕಂಟಕವಾಗಲಿದ್ದಾನೆ ಆರ್​ಸಿಬಿಯ ಈ ಮಾಜಿ ಆಟಗಾರ! ಅಂಕಿ- ಅಂಶವೂ ಅದನ್ನೇ ಹೇಳುತ್ತಿದೆ