IPL 2021: ಮುಂಬೈನಲ್ಲಿ ಕೊರೊನಾ ಅಟ್ಟಹಾಸ! ಐಪಿಎಲ್​ ಸುಗಮವಾಗಿ ನಡೆಯಲು BCCI ಮುಂದಿವೆ ಈ ನಾಲ್ಕು ಆಯ್ಕೆಗಳು

IPL 2021: ಮುಂದಿನ 48 ಗಂಟೆಗಳ ಕಾಲ ನೋಡಿದ ನಂತರವೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

IPL 2021: ಮುಂಬೈನಲ್ಲಿ ಕೊರೊನಾ ಅಟ್ಟಹಾಸ! ಐಪಿಎಲ್​ ಸುಗಮವಾಗಿ ನಡೆಯಲು BCCI ಮುಂದಿವೆ ಈ ನಾಲ್ಕು ಆಯ್ಕೆಗಳು
ಐಪಿಎಲ್ 2021
Follow us
ಪೃಥ್ವಿಶಂಕರ
|

Updated on:Apr 04, 2021 | 2:06 PM

ಭಾರತದಲ್ಲಿ ಕೊರೊನಾದ ಎರಡನೇ ಅಲೆ ಪ್ರಭಾವ ಈಗ ಎಲ್ಲೆಡೆ ಗೋಚರಿಸುತ್ತದೆ. ಐಪಿಎಲ್ ಪ್ರಾರಂಭಿಸಲು ಈಗ ಕೇವಲ ಐದು ದಿನಗಳು ಮಾತ್ರ ಉಳಿದಿವೆ, ಆದರೆ ಇದರ ಪರಿಣಾಮ ಬಹುತೇಕ ಎಲ್ಲ ತಂಡಗಳ ಮೇಲೆ ಕಂಡುಬಂದಿದೆ. ಆರ್‌ಸಿಬಿಯ ದೇವದತ್ ಪಡಿಕ್ಕಲ್, ಡೆಲ್ಲಿ ಕ್ಯಾಪಿಟಲ್ಸ್​ನ ಅಕ್ಷರ್ ಪಟೇಲ್ ಮತ್ತು ವಾಂಖೆಡೆ ಸ್ಟೇಡಿಯಂ ಮೈದಾನದ ಸಿಬ್ಬಂದಿ ಕೋವಿಡ್ ಪಾಸಿಟಿವ್ ಎಂದು ಕಂಡುಬಂದಿದೆ. ಹೀಗಾಗಿ ಮುಂಬೈನಲ್ಲಿ ಪಂದ್ಯ ಆಯೋಜಿಸುವುದರ ಬಗ್ಗೆ ಬಿಸಿಸಿಐ ನಾನಾ ರೀತಿ ಯೋಚಿಸುತ್ತಿದೆ.

ಪ್ರಸ್ತುತ, ಐದು ತಂಡಗಳು ಮುಂಬೈನಲ್ಲಿದ್ದು, ಅಲ್ಲಿ ಕೊರೊನಾದ ಗರಿಷ್ಠ ಪರಿಣಾಮ ಕಾಣುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್, ದೆಹಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತಾ ನೈಡರ್ಸ್ ಮುಂಬೈನಲ್ಲಿ ಆಡಲಿವೆ. ಆದರಿಂದ ಈ ಸಮಯದಲ್ಲಿ ಬಿಸಿಸಿಐ ಇದುವರೆಗೂ ಸಹ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಅಲ್ಲದೆ ಭದ್ರತೆಯ ಕಾರಣದಿಂದಾಗಿ ಮುಂಬೈ ಪಂದ್ಯಗಳನ್ನು ಸ್ಥಳಾಂತರಿಸುವುದನ್ನು ಅಲ್ಲಗಳೆಯುವಂತ್ತಿಲ್ಲ.

ಬಿಸಿಸಿಐ ದೊಡ್ಡ ಕ್ರಮಗಳನ್ನು ತೆಗೆದುಕೊಳ್ಳಬಹುದು ಮೂಲಗಳ ಪ್ರಕಾರ, ಮುಂದಿನ 48 ಗಂಟೆಗಳ ಕಾಲ ನೋಡಿದ ನಂತರವೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲಿಯವರೆಗೆ ಎಲ್ಲಾ ಆಟಗಾರರನ್ನು ಕಟ್ಟುನಿಟ್ಟಾದ ಪ್ರೋಟೋಕಾಲ್ಗಳನ್ನು ಅನುಸರಿಸಲು ಕೇಳಿಕೊಳ್ಳಲಾಗಿದೆ ಮತ್ತು ಬಯೋಬಬಲ್​ನ ಯಾವುದೇ ರೀತಿಯಲ್ಲಿ ಮುರಿಯದಂತೆ ಮನವಿ ಮಾಡಲಾಗಿದೆ. ಜೊತೆಗೆ ಬಿಸಿಸಿಐ ಮುಂದೆ ಹಲವು ಆಯ್ಕೆಗಳಿದ್ದು ಅದನ್ನು ಹೇಗೆ ಕಾರ್ಯರೂಪಕ್ಕೆ ತರಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.

ಮೊದಲನೇ ಆಯ್ಕೆ ಪಂದ್ಯಗಳನ್ನು ಸ್ಥಳಾಂತರಿಸಬಹುದು: ಮುಂಬೈನ ಪರಿಸ್ಥಿತಿ ಕೆಟ್ಟದಾಗಿದ್ದರೆ ಭದ್ರತೆಯ ದೃಷ್ಟಿಯಿಂದಾಗಿ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಬಹುದು. ಲೀಗ್ ಸುತ್ತಿನಲ್ಲಿ ಮುಂಬೈನಲ್ಲಿ 10 ಪಂದ್ಯಗಳು ನಡೆಯಲಿವೆ. ಹೀಗಾಗಿ ಬಿಸಿಸಿಐ, ಮುಂಬೈನಲ್ಲಿ ನಡೆಯುವ ಎಲ್ಲಾ ಪಂದ್ಯಗಳನ್ನು ಹೈದರಾಬಾದ್​ಗೆ ಬದಲಿಸಬಹುದು.

ಎರಡನೇ ಆಯ್ಕೆ ಪ್ರತಿದಿನ ಕೊರೊನಾ ಟೆಸ್ಟ್ – ಬಿಸಿಸಿಐ ದೈನಂದಿನ ಪರೀಕ್ಷೆಯನ್ನು ಕಡ್ಡಾಯಗೊಳಿಸಬಹುದು. ಪ್ರಸ್ತುತ, ಪ್ರತಿ ಮೂರು ದಿನಗಳಿಗೊಮ್ಮೆ ಕೊರೊನಾ ಪರೀಕ್ಷೆಯನ್ನು ನಡೆಸಲಾಗುತ್ತದೆ. ಆದರೆ ಸುರಕ್ಷತೆಯ ಮಟ್ಟವನ್ನು ಹೆಚ್ಚಿಸಲು ಬಿಸಿಸಿಐ ಪ್ರತಿದಿನ ಪರೀಕ್ಷೆಗಳನ್ನು ನಡೆಸಬಹುದು.

ಮೂರನೇ ಆಯ್ಕೆ ಕ್ರೀಡಾಂಗಣ ಸಿಬ್ಬಂದಿಗೆ ಪ್ರತ್ಯೇಕ ಬಯೋಬಬಲ್ – ಬಿಸಿಸಿಐ ಕಾರ್ಯನಿರ್ವಾಹಕ ತಂಡವು ಈಗಾಗಲೇ ಬಯೋಬಬಲ್​ನ ಒಂದು ಭಾಗವಾಗಿದೆ. ಹಾಗೆಯೇ ಕ್ರೀಡಾಂಗಣ ಸಿಬ್ಬಂದಿಗೆ ಬಯೋಬಬಲ್​ ನಿಯಮ ತಯಾರಿಸಬಹುದು.

ನಾಲ್ಕನೇ ಆಯ್ಕೆ ವಿಮಾನ ನಿಲ್ದಾಣದ ಭದ್ರತೆ – ಮೊದಲ ಒಂದು ತಿಂಗಳಲ್ಲಿ ಯಾವುದೇ ತಂಡ ಬೇರೆಡೆಗೆ ಪ್ರಯಾಣಿಸಬೇಕಾಗಿಲ್ಲ. ಆದಾಗ್ಯೂ, ಇದರ ನಂತರ, ಪ್ರಯಾಣದ ಸಮಯದಲ್ಲಿ ಆಟಗಾರರು ಕೊರೊನಾ ಸೋಂಕಿಗೆ ಒಳಗಾಗದಂತೆ ಬಿಸಿಸಿಐ ಕಾಳಜಿ ವಹಿಸಬೇಕಾಗುತ್ತದೆ. ವಿಮಾನ ನಿಲ್ದಾಣದ ಬಗ್ಗೆಯೂ ವಿಶೇಷ ಗಮನ ಹರಿಸಬೇಕಾಗುತ್ತದೆ.

ಇದನ್ನೂ ಓದಿ:IPL 2021: ಕೊರೊನಾ ಕಂಟಕ! ಚೆನ್ನೈಗೆ ಕೈಕೊಟ್ಟ ಆಸಿಸ್​ ವೇಗಿ, ಧೋನಿ ತಂಡಕ್ಕೆ ಬರಲ್ಲ ಎಂದ ಸ್ಟಾನ್ಲೇಕ್, ರೀಸ್ ಟೋಪ್ಲಿ

Published On - 2:05 pm, Sun, 4 April 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ