IPL 2021: ಕೊರೊನಾ ಕಂಟಕ! ಚೆನ್ನೈಗೆ ಕೈಕೊಟ್ಟ ಆಸಿಸ್​ ವೇಗಿ, ಧೋನಿ ತಂಡಕ್ಕೆ ಬರಲ್ಲ ಎಂದ ಸ್ಟಾನ್ಲೇಕ್, ರೀಸ್ ಟೋಪ್ಲಿ

IPL 2021: ಮುಂಬೈನಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಹೀಗಾಗಿ ಕೊನೆಯ ಕ್ಷಣದಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹ್ಯಾಝಲ್‌ವುಡ್‌ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ.

IPL 2021: ಕೊರೊನಾ ಕಂಟಕ! ಚೆನ್ನೈಗೆ ಕೈಕೊಟ್ಟ ಆಸಿಸ್​ ವೇಗಿ, ಧೋನಿ ತಂಡಕ್ಕೆ ಬರಲ್ಲ ಎಂದ ಸ್ಟಾನ್ಲೇಕ್, ರೀಸ್ ಟೋಪ್ಲಿ
ಸಿಎಸ್​ಕೆ ತಂಡ
Follow us
ಪೃಥ್ವಿಶಂಕರ
|

Updated on: Apr 04, 2021 | 1:05 PM

ಕೊರೊನಾದ ಪರಿಣಾಮವು ಐಪಿಎಲ್ 2021 ರಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅದು ಆಟಗಾರರು ಅಥವಾ ಸಿಬ್ಬಂದಿ ಆಗಿರಲಿ, ಎಲ್ಲರೂ ನಿರಂತರವಾಗಿ ಅದರಿಂದ ಹಾನಿಗೊಳಗಾಗುತ್ತಿದ್ದಾರೆ. ಕೊರೊನಾ ಐಪಿಎಲ್ 14 ನೇ ಆವೃತ್ತಿಯನ್ನು ಸರಾಗವಾಗಿ ನಡೆಯಲು ಬಿಡುವಂತೆ ತೋರುತ್ತಿಲ್ಲ. ಹೀಗಾಗಿ, ಕೊರೊನಾ ಅಡ್ಡಪರಿಣಾಮಗಳು ಈಗ ತಂಡಗಳಲ್ಲಿ ಗೋಚರಿಸುತ್ತಿವೆ. ಉದಾಹರಣೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ತೆಗೆದುಕೊಳ್ಳಿ. ಕೊರೊನಾದ ಕಾರಣದಿಂದಾಗಿ, ಜೋಶ್ ಹ್ಯಾಝಲ್‌ವುಡ್‌ ಬದಲಿಗೆ ಬೇರೊಬ್ಬ ಆಟಗಾರನನ್ನು ತಂಡಕ್ಕೆ ಕರೆತರಲು ಚೆನ್ನೈ ಸಾಕಷ್ಟು ಪ್ರಯಾಸಪಡಬೇಕಾಗಿದೆ.

ಸಿಎಸ್ಕೆ ತಂಡ ಪ್ರಸ್ತುತ ಮುಂಬೈನಲ್ಲಿ ಐಪಿಎಲ್ 2021 ರ ಅಭ್ಯಾಸದಲ್ಲಿ ತೊಡಗಿದೆ. ಆದರೆ ಮುಂಬೈನಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಹೀಗಾಗಿ ಕೊನೆಯ ಕ್ಷಣದಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹ್ಯಾಝಲ್‌ವುಡ್‌ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ. ಆದರಿಂದ ಅವರ ಬದಲಿಗೆ ಬೇರೊಬ್ಬ ವೇಗದ ಬೌಲರ್​ ಅನ್ನು ಹುಡುಕುವುದು ಕಷ್ಟಕರವಾಗಿದೆ ಎಂದು ಹೇಳಲಾಗುತ್ತಿದೆ. ಸಿಎಸ್ಕೆ ತಂಡದ ಆಡಳಿತವು ಕೆಲವು ಆಟಗಾರರನ್ನು ಸಂಪರ್ಕಿಸಿದರೂ ಮುಂಬೈನ ಕೊರೊನಾದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆ ಆಟಗಾರರು ಫ್ರ್ಯಾಂಚೈಸ್ ಸೇರಲು ನಿರಾಕರಿಸಿದ್ದಾರೆ.

ಸ್ಟಾನ್ಲೇಕ್ ಮತ್ತು ಟೋಪ್ಲಿ ನಿರಾಕರಣೆ ಜೋಶ್ ಹ್ಯಾಝಲ್‌ವುಡ್‌ಗೆ ಪರ್ಯಾಯವಾಗಿ ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಮೊದಲು ಆಸ್ಟ್ರೇಲಿಯಾದ ವೇಗಿ ಬಿಲ್ಲಿ ಸ್ಟ್ಯಾನ್‌ಲೇಕ್ ಅವರನ್ನು ಸಂಪರ್ಕಿಸಿತು ಎಂದು ತಿಳಿದುಬಂದಿದೆ. ಆದರೆ ಅವರು ತಂಡದ ಪ್ರಸ್ತಾಪವನ್ನು ತಿರಸ್ಕರಿಸಿದರು. ಇದಲ್ಲದೆ, ಎಡಗೈ ವೇಗದ ಬೌಲರ್ ಇಂಗ್ಲೆಂಡ್‌ನ ರೀಸ್ ಟೋಪ್ಲಿಯನ್ನೂ ಚೆನ್ನೈ ಸೂಪರ್ ಕಿಂಗ್ಸ್ ಸಂಪರ್ಕಿಸಿದರು. ಆದರೆ ಅವರು ಸಹ ಫ್ರ್ಯಾಂಚೈಸ್‌ಗೆ ಸೇರಲು ನಿರಾಕರಿಸಿದರು. ಭಾರತ ಪ್ರವಾಸದ ಸಮಯದಲ್ಲಿ ರೀಸ್ ಟೋಪ್ಲಿ ಇಂಗ್ಲೆಂಡ್‌ನ ವೈಟ್ ಬಾಲ್ ಸರಣಿಯ ಒಂದು ಭಾಗವಾಗಿದ್ದರು. ಈ ಇಬ್ಬರು ಆಟಗಾರರು ಚೆನ್ನೈ ತಂಡ ಸೇರದಿರುವುದಕ್ಕೆ ಕೊರೊನಾ ಕಾರಣ ಎಂದು ನಂಬಲಾಗಿದೆ.

ಹುಡುಕಾಟ ಮುಂದುವರಿಸಿದ ಸಿಎಸ್​ಕೆ ಸಿಎಸ್‌ಕೆಗೆ ಸಂಬಂಧಿಸಿದ ಮೂಲಗಳ ಪ್ರಕಾರ ತಂಡವು ಭರವಸೆಯನ್ನು ಬಿಟ್ಟುಕೊಟ್ಟಿಲ್ಲ ಮತ್ತು ಹ್ಯಾಝಲ್‌ವುಡ್‌ ಪರ್ಯಾಯವಾಗಿ ಬೇರೆ ಆಟಗಾರರ ಹುಡುಕಾಟ ನಡೆಯುತ್ತಿದೆ ಎಂದು ಹೇಳಿದರು. ಈ ಬಾರಿ ತಂಡವು ಹೆಚ್ಚಿನ ಕಾಳಜಿ ವಹಿಸುತ್ತಿದೆ ಮತ್ತು ಕಳೆದ ವರ್ಷದಂತಹ ಯಾವುದೇ ಪರಿಸ್ಥಿತಿಯನ್ನು ತಪ್ಪಿಸಲು ವಿಶೇಷ ಕಾಳಜಿ ವಹಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:IPL 2021: ಈ ಸಲ ಕಪ್ ನಮ್ದೆ! ಅಭ್ಯಾಸ ಪಂದ್ಯದಲ್ಲಿ ಮಿಂಚಿದ ಆರ್​ಸಿಬಿಯ ಯುವ ಸೇನೆ, ಶೈನ್​ ಆದ ಸೈನಿ, ಭರತ್, ರಜತ್

ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ