ಚಹಲ್-ಧನಶ್ರೀ ಮದುವೆ ಮೂವಿ ರಿಲೀಸ್: ಸಖತ್​ ಸ್ಟೆಪ್ಸ್​ ಹಾಕಿದ ಕ್ರಿಕೆಟಿಗರು, ಕಾಮಿಡಿ ಮೂಡ್​ನಲ್ಲಿ ಚಹಲ್.. ವಿಡಿಯೋ ನೋಡಿ

ಧನಶ್ರೀಗೆ ಉಂಗುರು ತೊಡಿಸುವಾಗ ಚಹಲ್ ಹಾಸ್ಯ ಚಟಾಕಿಯೊಂದನ್ನ ಹಾರಿಸಿದ್ದಾರೆ. ನಾವಿಲ್ಲಿ ಏಕೇ ನಿಂತಿದ್ದೀವಿ ಅನ್ನೋದು ಗೊತ್ತಿಲ್ಲ ಹೇಳ್ತೀಯಾ ಅಂತಾ ಧನಶ್ರೀ ಬಳಿ ಕೇಳಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದ್ದಾರೆ.

ಚಹಲ್-ಧನಶ್ರೀ ಮದುವೆ ಮೂವಿ ರಿಲೀಸ್: ಸಖತ್​ ಸ್ಟೆಪ್ಸ್​ ಹಾಕಿದ ಕ್ರಿಕೆಟಿಗರು, ಕಾಮಿಡಿ ಮೂಡ್​ನಲ್ಲಿ ಚಹಲ್.. ವಿಡಿಯೋ ನೋಡಿ
ಮದುವೆ ಸಂಭ್ರಮದಲ್ಲಿ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ
Follow us
ಪೃಥ್ವಿಶಂಕರ
|

Updated on: Apr 04, 2021 | 11:17 AM

ಟೀಮ್ ಇಂಡಿಯಾ ಸ್ಪಿನ್ನರ್ ಯಜ್ವಿಂದರ್ ಚಹಲ್, ತಮ್ಮ ಮನಸ್ಸು ಕದ್ದ ಚೆಲುವೆಯೊಂದಿಗೆ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. ಆದ್ರೀಗ ಚಹಲ್ ಪತ್ನಿ, ಮದುವೆಯ ಸಂಭ್ರಮದ ಕ್ಷಣಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ಟೀಮ್ ಇಂಡಿಯಾ ಕ್ರಿಕೆಟಿಗ ಯಜ್ವಿಂದರ್ ಚಹಲ್, ಧನಶ್ರೀ ವರ್ಮಾ ಜೊತೆಗೆ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. ಸೋಷಿಯಲ್ ಮೀಡಿಯಾದಲ್ಲಿ ಚಹಲ್ ಜೋಡಿಯ ಮದುವೆ ಫೋಟೋಗಳು ಮಾತ್ರ ವೈರಲ್ ಆಗಿತ್ತು.

ಚಹಲ್ ಹಾಸ್ಯ ಚಟಾಕಿ ಆದ್ರೀಗ ಚಹಲ್ ಪತ್ನಿ ಧನಶ್ರೀ ವರ್ಮಾ ತಮ್ಮ ಯ್ಯೂಟ್ಯೂಬ್​ನಲ್ಲಿ, ಮದುವೆಯ ಕಲರ್ ಫುಲ್ ವಿಡಿಯೋವನ್ನ ಅಪ್ಲೋಡ್ ಮಾಡಿದ್ದಾರೆ. ಗುರುಗ್ರಾಂನಲ್ಲಿ ನಡೆದ ಅದ್ದೂರಿ ಮದುವೆಯಲ್ಲಿ ಚಹಲ್ ಮತ್ತು ದನಶ್ರೀ ಕುಟುಂಬದ ಆಪ್ತರಷ್ಟೇ ಪಾಲ್ಗೊಂಡಿದ್ರು. ಧನಶ್ರೀಗೆ ಉಂಗುರು ತೊಡಿಸುವಾಗ ಚಹಲ್ ಹಾಸ್ಯ ಚಟಾಕಿಯೊಂದನ್ನ ಹಾರಿಸಿದ್ದಾರೆ. ನಾವಿಲ್ಲಿ ಏಕೇ ನಿಂತಿದ್ದೀವಿ ಅನ್ನೋದು ಗೊತ್ತಿಲ್ಲ ಹೇಳ್ತೀಯಾ ಅಂತಾ ಧನಶ್ರೀ ಬಳಿ ಕೇಳಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದ್ದಾರೆ.

ಚಹಲ್ ಮದುವೆ ಸಮಯದಲ್ಲಿ ಟೀಮ್ ಇಂಡಿಯಾ ಆಟಗಾರರು ಆಸ್ಟ್ರೇಲಿಯಾ ಪ್ರವಾಸದಲ್ಲಿದ್ರು. ಹೀಗಾಗಿ ಚಹಲ್ ಆಪ್ತ ನಾಯಕ ವಿರಾಟ್ ಕೊಹ್ಲಿಗೆ ಮದುವೆಗೆ ಬರಲು ಸಾಧ್ಯವಾಗಿಲ್ಲ. ಆದ್ರೆ ಶಿಖರ್ ಧವನ್, ಚಹಲ್ ಮದುವೆಗೆ ಅಗಮಿಸಿ ಬಾಂಗ್ರಾ ಸ್ಟೆಪ್ಸ್ ಹಾಕಿ ಎಂಜಾಯ್ ಮಾಡಿದ್ದಾರೆ..

ಪಂಜಾಬಿ ಶೈಲಿಯಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ಚಹಲ್ ದಂಪತಿಯೂ ಭರ್ಜರಿ ಸ್ಟೆಪ್ಸ್ ಹಾಕಿ ಎಂಜಾಯ್ ಮಾಡಿದ್ದಾರೆ. ಧನಶ್ರೀ ವರ್ಮಾ ತಮ್ಮ ಯ್ಯೂಟ್ಯೂಬ್​ಗೆ ಈ ವಿಡಿಯೋವನ್ನ ಅಪ್ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ 16 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಇದನ್ನೂ ಓದಿ:IPL 2021: ಶಿಖರ್ ಧವನ್ – ಚಹಲ್​ ಪತ್ನಿ ಧನಶ್ರೀ ವರ್ಮಾ ಬಾಂಗ್ರಾ ಸ್ಟೆಪ್ಸ್ ಸಖತ್ ಸೌಂಡ್ ಮಾಡ್ತಿದೆ..! ವಿಡಿಯೋ ನೋಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ