ಒಡಿಐಗಳಲ್ಲಿ ಕೇವಲ 76ನೇ ಇನ್ನಿಂಗ್ಸ್​ನಲ್ಲಿ 13 ನೇ ಶತಕ ಬಾರಿಸಿ ಕೊಹ್ಲಿ ಮತ್ತು ಆಮ್ಲಾರನ್ನು ಹಿಂದಿಕ್ಕಿದ ಬಾಬರ್ ಆಜಂ

ದಕ್ಷಿಣ ಆಫ್ರಿಕಾದ ಸೆಂಚುರಿಯನ್ ಸೂಪರ್​ ಸ್ಪೋರ್ಟ್ಸ್ ಪಾರ್ಕ್​ನಲ್ಲಿ ಆಡಿದ ತಮ್ಮ 78 ನೇ ಒಂದು ದಿನದ ಪಂದ್ಯದಲ್ಲಿ 104 ಎಸೆತಗಳಲ್ಲಿ 103 ರನ್ ಬಾರಿಸಿ ಪಾಕಿಸ್ತಾನಕ್ಕೆ ಕೊನೆಯ ಓವರಿನ ಕೊನೆಯ ಎಸೆತದಲ್ಲಿ ಗೆಲುವು ಕೊಡಿಸಿದ ಬಾಬರ್ ಅವರ ಇನ್ನಿಂಗ್ಸ್ ಕುರಿತು ಎಲ್ಲೆಡೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.

ಒಡಿಐಗಳಲ್ಲಿ ಕೇವಲ 76ನೇ ಇನ್ನಿಂಗ್ಸ್​ನಲ್ಲಿ 13 ನೇ ಶತಕ ಬಾರಿಸಿ ಕೊಹ್ಲಿ ಮತ್ತು ಆಮ್ಲಾರನ್ನು ಹಿಂದಿಕ್ಕಿದ ಬಾಬರ್ ಆಜಂ
ಬಾಬರ್ ಆಜಂ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Apr 03, 2021 | 11:54 PM

ಪಾಕಿಸ್ತಾನ ಕ್ರಿಕೆಟ್​ ಟೀಮಿನ ನಾಯಕ ಮತ್ತು ವಿಶ್ವದ ಅಗ್ರಮಾನ್ಯ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರೆನಿಸಿಕೊಂಡಿರುವ ಬಾಬರ್ ಆಜಂ ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಸದ್ದು ಮಾಡುವುದನ್ನು ಮುಂದುವರೆಸಿದ್ದಾರೆ. ಶುಕ್ರವಾರದಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರು ಒಂದು ದಿನದ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಬಾಬರ್ ಅಮೋಘ ಶತಕ ಬಾರಿಸಿ ತನ್ನ ತಂಡಕ್ಕೆ ರೋಚಕ ಜಯ ದೊರಕಿಸಿಕೊಟ್ಟರಲ್ಲದೆ ಈ ಆವೃತ್ತಿಯಲ್ಲಿ ಅತಿ ವೇಗವಾಗಿ 13 ಶತಕಗಳನ್ನು ಬಾರಿಸಿದ ಖ್ಯಾತಿಗೆ ಪಾತ್ರರಾದರು.

ಕ್ರಿಕೆಟ್ ಪರಿಣಿತರೆಲ್ಲ ಬಾಬರ್ ಬ್ಯಾಟಿಂಗ್ ಪ್ರತಿಭೆ ಗುಣಗಾನ ಮಾಡುತ್ತಲೇ ಇದ್ದಾರೆ. ಸಾಂಪ್ರದಾಯಿಕ ಕ್ರಿಕೆಟ್​ಗಿಂತ ಸೀಮಿತ ಓವರ್​ಗಳ ಪಂದ್ಯಗಳಲ್ಲಿ ಅವರ ಪ್ರದರ್ಶನ ಅದ್ಭುತವಾಗಿದೆ. ನಿನ್ನೆ ಅಂದರೆ ಶುಕ್ರವಾರದಂದು ಅವರು ಅತ್ಯಂತ ಕಡಿಮೆ ಇನ್ನಿಂಗ್ಸ್​ಗಳಲ್ಲಿ 13 ನೇ ಶತಕ ಬಾರಿಸಿ ದಕ್ಷಿಣ ಆಫ್ರಿಕಾದ ಹಶೀಮ್ ಆಮ್ಲಾ ಮತ್ತು ಭಾರತದ ವಿರಾಟ್​ ಕೊಹ್ಲಿ ಅವರ ದಾಖಲೆಗಳನ್ನು ಉತ್ತಮಪಡಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಸೆಂಚುರಿಯನ್ ಸೂಪರ್​ ಸ್ಪೋರ್ಟ್ಸ್ ಪಾರ್ಕ್​ನಲ್ಲಿ ಆಡಿದ ತಮ್ಮ 78 ನೇ ಒಂದು ದಿನದ ಪಂದ್ಯದಲ್ಲಿ 104 ಎಸೆತಗಳಲ್ಲಿ 103 ರನ್ ಬಾರಿಸಿ ಪಾಕಿಸ್ತಾನಕ್ಕೆ ಕೊನೆಯ ಓವರಿನ ಕೊನೆಯ ಎಸೆತದಲ್ಲಿ ಗೆಲುವು ಕೊಡಿಸಿದ ಬಾಬರ್ ಅವರ ಇನ್ನಿಂಗ್ಸ್ ಕುರಿತು ಎಲ್ಲೆಡೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. 78 ಪಂದ್ಯಗಳನ್ನಾಡಿದ್ದರೂ ಬಾಬರ್ ಕೇವಲ 76 ಇನ್ನಿಂಗ್ಸ್​ಗಳಲ್ಲ್ಲಿ 13 ನೇ ಶತಕ ದಾಖಲಿಸಿದ್ದಾರೆ. ಇದುವರೆಗೆ ಈ ದಾಖಲೆ ಹೊಂದಿದ್ದ ಹಶೀಮ್ ಆಮ್ಲಾ 83ನೇ ಇನ್ನಿಂಗ್ಸ್​ನಲ್ಲಿ ಈ ಸಾಧನೆ ಮಾಡಿದ್ದರೆ, ಕೊಹ್ಲಿ ತನ್ನ 86ನೇ ಇನ್ನಿಂಗ್ಸ್​ನಲ್ಲಿ 13ನೇ ಶತಕ ಬಾರಿಸಿದ್ದರು.

ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಬಾಬರ್ ಅವರ ಸರಾಸರಿ 56 ಮತ್ತು ಟಿ20 ಕ್ರಿಕೆಟ್​ನಲ್ಲಿ 48 ಇದೆ. ಆದರೆ ಟೆಸ್ಟ್ ಕ್ರಿಕೆಟ್​ನಲ್ಲಿ ಮಾತ್ರ ಅವರ ಸರಾಸರಿ 44ರಷ್ಟಿದೆ.

ಒಂದು ದಿನದ ಪಂದ್ಯಗಳಲ್ಲಿ ಕೊಹ್ಲಿಯವರ ಸರಾಸರಿ 59.1 ಇದ್ದರೆ, ಟಿ20 ಕ್ರಿಕೆಟ್​ನಲ್ಲಿ 52.4 ಇದೆ, ಟೆಸ್ಟ್​ಗಳಲ್ಲೂ ಭಾರತದ ನಾಯಕನ ಸರಾಸರಿ 50ಕ್ಕಿಂತ (52.6) ಹೆಚ್ಚಿದೆ. ಕ್ರಿಕೆಟ್​ ಎಲ್ಲ ಆವೃತ್ತಿಗಳಲ್ಲೂ 50 ಕ್ಕಿಂತ ಜಾಸ್ತಿ ಸರಾಸರಿ ಹೊಂದಿರುವ ವಿಶ್ವದ ಏಕೈಕ ಆಟಗಾರ ಕೊಹ್ಲಿ ಆಗಿದ್ದಾರೆ.

ಅಂದಹಾಗೆ, ಆಸ್ಟ್ರೇಲಿಯಾ ಮಹಿಳಾ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಸಹ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ತಮ್ಮ 13ನೇ ಶತಕವನ್ನು 76ನೇ ಇನ್ನಿಂಗ್ಸ್​ನಲ್ಲಿ ಬಾರಿಸಿದ್ದರು.

ನಿನ್ನೆಯ ರೋಮಾಂಚಕ ಜಯದ ನಂತರ ಪಾಕಿಸ್ತಾನ 3ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿಯ ಎರಡನೇ ಪಂದ್ಯ ರವಿವಾರದಂದು ಜೊಹಾನ್ನೆಸ್​ಬರ್ಗ್​ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಸಿರೀಸ್​ ನಂತರ ಎರಡು ರಾಷ್ಟ್ರಗಳು ನಾಲ್ಕು ಟಿ20 ಪಂದ್ಯಗಳನ್ನು ಆಡಲಿವೆ.

ಇದನ್ನೂ ಓದಿ: 2011 Cricket World Cup: ಭಾರತ ವಿಶ್ವಕಪ್​ ಗೆದ್ದು ಇಂದಿಗೆ 10 ವರ್ಷ.. ಒಬ್ಬ ಕ್ಯಾನ್ಸರ್​ ಪೀಡಿತ, ಒಬ್ಬ ಶತಕ ವಂಚಿತ, ಒಬ್ಬ ಸಮರ್ಥ ನಾಯಕನ ಆಟವನ್ನು ನಾವ್ಯಾರು ಮರೆಯುವಂತಿಲ್ಲ!

ಇದನ್ನೂ ಓದಿ: IPL 2021: ಆರ್​ಸಿಬಿ ಮೇಲೆ ಪಂಜಾಬ್​ಗೆ ಸಿಕ್ಕಾಪಟ್ಟೆ ಲವ್.. ಬೆಂಗಳೂರು ತಂಡದ ಜೆರ್ಸಿ ಕಾಪಿ ಹೊಡೆದ ಕಿಂಗ್ಸ್​ಗೆ ಈಗ ಟ್ರೋಲಿಗರ ಕಾಟ!

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್