ಈ ವರ್ಷದ ಐಪಿಎಲ್ -2021 ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ಕ್ರಿಸ್ ಮೋರಿಸ್ಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದರು. ದಕ್ಷಿಣ ಆಫ್ರಿಕಾದ ಈ ಆಲ್‌ರೌಂಡರ್‌ಗೆ ರಾಜಸ್ಥಾನವು 16.25 ಕೋಟಿ ರೂ. ನೀಡಿ ಖರೀದಿಸಿತು. ಇದರೊಂದಿಗೆ ಅವರು ಐಪಿಎಲ್‌ನ ಅತ್ಯಂತ ದುಬಾರಿ ಆಟಗಾರರಾದರು. ಇದು ಅವನ ಮೇಲೆ ಒತ್ತಡವನ್ನು ಹೆಚ್ಚಿಸಿದೆ. ಆದರೆ ಮೋರಿಸ್ ಒಂದು ಪಂದ್ಯವನ್ನು ಹೊರತುಪಡಿಸಿ ಇನ್ನೂ ತನ್ನ ಛಾಪನ್ನು ಐಪಿಎಲ್ನಲ್ಲಿ ಮೂಡಿಸಿಲ್ಲ. ಮೋರಿಸ್‌ಗೆ ನೀಡಿದ ಮೊತ್ತ ತುಂಬಾ ಹೆಚ್ಚು ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ಹೇಳಿದ್ದಾರೆ.
ಮೋರಿಸ್ ಹೆಚ್ಚು ಪರಿಣಾಮಕಾರಿಯಾಗಿಲ್ಲ
ಮೋರಿಸ್ 2013 ರಿಂದ ಐಪಿಎಲ್ ಆಡುತ್ತಿದ್ದಾರೆ. ಈ ಮೊದಲು ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರಿನಲ್ಲಿದ್ದರು. ಆದಾಗ್ಯೂ, ಅವರು ಇಡೀ ಆವೃತ್ತಿಯಲ್ಲಿ ಆಡಲಿಲ್ಲ ಮತ್ತು ಕೇವಲ ಒಂಬತ್ತು ಪಂದ್ಯಗಳನ್ನು ಆಡಿದ್ದಾರೆ. ಈ ಒಂಬತ್ತು ಪಂದ್ಯಗಳಲ್ಲಿ ಅವರು 11 ವಿಕೆಟ್ ಪಡೆದರು ಮತ್ತು ಕೇವಲ 34 ರನ್ ಗಳಿಸಿದ್ದಾರೆ. ಈ ಆವೃತ್ತಿಯಲ್ಲಿ, ರಾಜಸ್ಥಾನ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತು. ಜೊತೆಗೆ ಮೋರಿಸ್ ಇದರೊಂದಿಗೆ ಹೆಚ್ಚಿನ ಭರವಸೆಗಳನ್ನು ಹೊಂದಿದ್ದರು. ಐಪಿಎಲ್‌ನ ಆರಂಭಿಕ ಹಂತದಲ್ಲಿ ಮೋರಿಸ್ ಹೆಚ್ಚು ಪರಿಣಾಮಕಾರಿಯಾಗಿಲ್ಲ. ಅವರು ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಅದ್ಭುತ ಇನ್ನಿಂಗ್ಸ್ ಆಡಿದ್ದರು ಮತ್ತು ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದರೂ, ಈ ಆವೃತ್ತಿಯಲ್ಲಿ ಇಲ್ಲಿಯವರೆಗೆ, ಮೋರಿಸ್ ನಾಲ್ಕು ಪಂದ್ಯಗಳಲ್ಲಿ ಐದು ವಿಕೆಟ್ಗಳನ್ನು ತೆಗೆದಿದ್ದಾರೆ ಮತ್ತು 48 ರನ್ ಗಳಿಸಿದ್ದಾರೆ.
ಮೋರಿಸ್ ಒತ್ತಡದಲ್ಲಿದ್ದಾರೆ
ಮೋರಿಸ್‌ಗೆ ಅಷ್ಟು ಹಣ ನೀಡುವ ಅವಶ್ಯಕತೆ ಇರಲಿಲ್ಲ ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ಹೇಳಿದ್ದಾರೆ. ಜೊತೆಗೆ ಪಡೆದ ಹಣಕ್ಕೆ ಸರಿಯಾದ ನ್ಯಾಯ ಒದಗಿಸಬೇಕೆಂಬ ಒತ್ತಡ ಮೋರಿಸ್ ಮೇಲಿದೆ ಎಂದು ಹೇಳಿದರು. ಇದು ಕೆಟ್ಟದಾಗಿ ಕಾಣಿಸಬಹುದು, ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅವರಿಗೆ ಬಹಳಷ್ಟು ಹಣವನ್ನು ನೀಡಲಾಯಿತು, ನಾನೇ ಆಗಿದ್ದರೆ, ನಾನು ಎಂದಿಗೂ ಅಷ್ಟು ಹಣವನ್ನು ಅವರಿಗೆ ನೀಡುತ್ತಿರಲಿಲ್ಲ. ಅವನು ಅಷ್ಟು ಹಣವನ್ನು ಪಡೆಯಲು ಯೋಗ್ಯನೆಂದು ನಾನು ಭಾವಿಸುವುದಿಲ್ಲ ಎಂದಿದ್ದಾರೆ.
ಅತನ ಆಟ ಕೇವಲ ಎರಡು ಪಂದ್ಯಗಳಿಗೆ ಸೀಮಿತ
ಪ್ರಮುಖವಾಗಿ ಮೋರಿಸ್ ದಕ್ಷಿಣ ಆಫ್ರಿಕಾ ತಂಡಕ್ಕೆ ಮೊದಲ ಆಯ್ಕೆಯಾಗಿಲ್ಲ. ಹಾಗಾಗಿ ನಾವು ಹೆಚ್ಚಿನದನ್ನು ನಿರೀಕ್ಷಿಸುತ್ತಿದ್ದೇವೆ ಎಂದು ನಾನು ಭಾವಿಸುತ್ತೇನೆ. ಅವರು ಸತತವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವ ಆಟಗಾರ ಎಂದು ನಾನು ಭಾವಿಸುವುದಿಲ್ಲ. ನಾನು ಅವರನ್ನು ಗೌರವಿಸುತ್ತ ಈ ವಿಷಯಗಳನ್ನು ಹೇಳುತ್ತಿದ್ದೇನೆ. ಅವರು ಮಾಡುವ ಕೆಲಸದಲ್ಲಿ ವಿಶೇಷ ಏನೂ ಇಲ್ಲ. ಅತನ ಆಟ ಕೇವಲ ಎರಡು ಪಂದ್ಯಗಳಿಗೆ ಸೀಮಿತ, ನಂತರ ಅವನು ಕೆಲವು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರುತ್ತಾನೆ ಎಂದು ಪೀರ್ಟಸನ್ ಹೇಳಿದ್ದಾರೆ.