ಬೆಂಗಳೂರು: ಕೆಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಡೆಯುತ್ತರುವ ಕುತಂತ್ರದಾಟದ ಬಗ್ಗೆ ಸಿಸಿಬಿ ತನಿಖೆಯಿಂದ ಬಗೆದಷ್ಟೂ ಮಾಹಿತಿ ಹೊರಬೀಳುತ್ತಿದೆ. ಜೊತೆಗೆ ಮೋಸದಾಟದಲ್ಲಿ ಪಾಲ್ಗೊಡಿರುವ ಕಿಲಾಡಿಗಳನ್ನೂ ಸಿಸಿಬಿ ಪೊಲೀಸರು ಮೇಲಿಂದ ಮೇಲೆ ಬಂಧಿಸುತ್ತಿದ್ದಾರೆ. ಇದೀಗ ಮತ್ತೊಂದು ಬೆಟ್ಟಿಂಗ್ ಪ್ರಕರಣ ಬೆಳಕಿಗೆ ಬಂದಿದ್ದು, ಸಿಸಿಬಿಯಿಂದ ಬೆಂಗಳೂರಿನಲ್ಲಿ ಇಬ್ಬರು ಕ್ರಿಕೆಟರ್ಗಳ ಬಂಧನವಾಗಿದೆ.
ಬೆಂಗಳೂರು ತಂಡದ ಬೌಲರ್ ವಿನು ಪ್ರಸಾದ್ ಮತ್ತು ಬ್ಯಾಟ್ಸ್ಮನ್ ವಿಶ್ವನಾಥ್ ಅವರಿಬ್ಬರನ್ನೂ ಸಿಸಿಬಿ ಬಂಧಿಸಿದೆ. 2018ರ ಬೆಳಗಾವಿ ವಿರುದ್ಧದ ಪಂದ್ಯ ಫಿಕ್ಸ್ ಆಗಿತ್ತು. ವಿಶ್ವನಾಥ್ ₹5 ಲಕ್ಷ ಪಡೆದು ನಿಧಾನವಾಗಿ ಬ್ಯಾಟಿಂಗ್ ಮಾಡಿದ್ದರು ಎಂದು ಆರೋಪಿಸಲಾಗಿದೆ.
Published On - 1:35 pm, Fri, 25 October 19