ರಾಂಚಿ: ಧೋನಿ ತವರೂರಾಗಿರುವ ರಾಂಚಿ ಮೈದಾನದಲ್ಲಿ ಕ್ರೀಡಾಭಿಮಾನಿಗಳ ಎದೆ ಝಲ್ಲೆನ್ನಿಸುವ, ಬಲಿಷ್ಟ ಬ್ಯಾಟ್ಸ್ಮನ್ಗಳಿಗೆ ನಡುಕ ಹುಟ್ಟಿಸುವಂತಹ ಅಪಾಯಕಾರಿ ಘಟನೆ ಸಂಭವಿಸಿದೆ. ಉಮೇಶ್ ಯಾದವ್ ನ ಬೆಂಕಿ ಚೆಂಡಿನಂತಹ ಎಸೆತವನ್ನ ಎದರಿಸುವಲ್ಲಿ ಡೀನ್ ಎಲ್ಗರ್ ಎಡವಿದ್ದಾರೆ. ಆ ಡೆಡ್ಲಿ ಬಾಲ್ ಅವರ ತಲೆಗೆ ರಭಸವಾಗಿ ಬಂದು ಬಿದ್ದಿದೆ.
ಉಮೇಶ್ ಬೌನ್ಸರ್ಗೆ ಸ್ಥಳದಲ್ಲೇ ಕುಸಿದು ಬಿದ್ದ ಎಲ್ಗರ್!
ಉಮೇಶ್ ಯಾದವ್ ಟೀಮ್ ಇಂಡಿಯಾದ ಮಾರಕ ವೇಗಿ. ಕೊಹ್ಲಿ ಸೈನ್ಯದ ಭೀಮನಾಗಿರುವ ಉಮೇಶ್ ಯಾದವ್, ಬ್ಯಾಟಿಂಗ್ನಲ್ಲೂ ಮಾಸ್ ಪರ್ಫಾಮರ್. ಹೀಗಾಗಿಯೇ 2ನೇ ದಿನದಾಟದಲ್ಲಿ 10 ಬಾಲ್ಗೆ 5 ಸಿಕ್ಸರ್ ಸಿಡಿಸಿದ್ದು. ಟೀಮ್ ಇಂಡಿಯಾ ಬೌಲಿಂಗ್ ಕೋಟಾದ ಬಲಿಷ್ಟ ಅಸ್ತ್ರವೆಂದೇ ಗುರ್ತಿಸಲ್ಪಟ್ಟಿರುವ ಉಮೇಶ್ ಯಾದವ್ ದಾಳಿಯನ್ನ ಎದುರಿಸೋದೇ ಭಯಾನಕ ಕಷ್ಟ. ಗಂಟೆಗೆ 140ರಿಂದ 150 ಕಿಮಿ ವೇಗದಲ್ಲಿ ಬೌಲಿಂಗ್ ಮಾಡುವ ಉಮೇಶ್ ಯಾದವ್, ರಾಂಚಿ ಮೈದಾನದಲ್ಲಿ ತಮ್ಮ ತೋಳ್ಬಲದಿಂದ ಹರಿಣಗಳನ್ನ ಬೇಟೆಯಾಡ್ತಿದ್ರು.
ಟೀಮ್ ಇಂಡಿಯಾ ಫಾಲೋ ಆನ್ ಹೇರಿದ ಬಳಿಕ, ದ್ವಿತೀಯ ಇನ್ನಿಂಗ್ಸ್ನಲ್ಲಿ ದಕ್ಷಿಣ ಆಫ್ರಿಕಾ ತಂಡ ಬ್ಯಾಟಿಂಗ್ ಮಾಡೋದಕ್ಕೆ ಕಣಕ್ಕಿಳಿಯುತ್ತೆ. ಆರಂಭಿಕ ಡೀನ್ ಎಲ್ಗರ್, ಚಾಣಾಕ್ಷ ಬ್ಯಾಟಿಂಗ್ಗೆ ಮಾಡ್ತಿರ್ತಾರೆ. 9ನೇ ಓವರ್ ಎಸೆಯೋಕೆ ಬಂದ ಉಮೇಶ್ ಯಾದವ್ 3ನೇ ಡೆಡ್ಲಿ ಬಾಲ್ ಅನ್ನ ಎದುರಿಸುವಲ್ಲಿ ಹೆದರಿದ ಎಲ್ಗರ್, ಬಾಲ್ಗೆ ತಮ್ಮ ತಲೆ ಅಡ್ಡ ಕೊಡ್ತಾರೆ. ಆಗ ಡೀನ್ ಎಲ್ಗರ್ ಸ್ಥಳದಲ್ಲೇ ಮಂಡಿಯೂರಿ ಕುಸಿದುಬಿಡ್ತಾರೆ.
ಡೀನ್ ಎಲ್ಗರ್ ಕುಸಿದುಬೀಳ್ತಿದ್ದಂತೆ, ಅತ್ತ ಟೀಮ್ ಇಂಡಿಯಾ ಆಟಗಾರರೆಲ್ಲಾ ಗಾಬರಿ ಬೀಳ್ತಾರೆ. ಎಲ್ಗರ್ ಬಳಿ ಬಂದ ಆಟಗಾರರೆಲ್ಲ ಅವರಿಗೆ ಏನಾಯ್ತು ಅಂತ ವಿಚಾರಿಸೋಕೆ ಮುಂದಾಗ್ತಾರೆ. ಹೆಲ್ಮೆಟ್ ಧರಿಸಿಯೇ ಉಸಿರು ಬಿಡ್ತಿದ್ದ ಎಲ್ಗರ್ ನೋವು ನೋಡಿದ ನಾಯಕ ವಿರಾಟ್ ಕೊಹ್ಲಿ, ಅವರ ಹೆಲ್ಮೆಟ್ ತೆಗೆಯೋಕೆ ಸಹಾಯ ಮಾಡ್ತಾರೆ. ಸ್ಥಳದಲ್ಲೇ ಡೀನ್ ಎಲ್ಗರ್ನ ಮಾತನಾಡಿಸುವ ಪ್ರಯತ್ನ ಮಾಡ್ತಾರೆ. ಅಂಪೈರ್ ಸಹ ಎಲ್ಗರ್ನನ್ನ ಮಾತನಾಡಿಸುತ್ತಾರೆ.
ಈ ವೇಳೆ ಅತ್ತ ದಕ್ಷಿಣ ಆಫ್ರಿಕಾದ ಫಿಸಿಯೋ ತನ್ನ ಕೈನಲ್ಲಿ ಕಿಟ್ ಹಿಡಿದು ಕ್ರೀಸ್ ಬಳಿಗೆ ಓಡೋಡಿ ಬರ್ತಾರೆ.. ಎಲ್ಗರ್ನನ್ನ ಫಿಸಿಯೋ ಮಾತನಾಡಿಸೋಕೆ ಮುಂದಾಗ್ತಾರೆ. ಈ ವೇಳೆ ಫಿಸಿಯೋಗೆ, ಎಲ್ಗರ್ ತನ್ನ ತಲೆಮೇಲೆ ಗಾಯವಾಗಿರುವ ಜಾಗದಲ್ಲಿ ಕೈಹೊತ್ತು ನೋವಾಗ್ತಿದೆ ಅನ್ನೋದನ್ನ ಹೇಳ್ತಿದ್ರು.
ರಾಂಚಿ ಪಂದ್ಯದಿಂದ ಎಲ್ಗರ್ ಔಟ್.. ಬದಲಿ ಆಟಗಾರನ ನೇಮಕ!
ಡೀನ್ ಎಲ್ಗರ್ ತಲೆಗೆ ಭಾರೀ ಪೆಟ್ಟು ಬಿದ್ದಿರುವ ಕಾರಣ, ಸದ್ಯ ಎಲ್ಗರ್ನನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಹೀಗಾಗಿ ರಾಂಚಿ ಪಂದ್ಯದಿಂದ ಡೀನ್ ಎಲ್ಗರ್ ಹೊರಬಿದ್ದಿದ್ದಾರೆ ಅನ್ನೋ ವಿಚಾರವನ್ನ ಬಿಸಿಸಿಐ ಸ್ಪಷ್ಟಪಡಿಸಿದೆ. ಡೀನ್ ಎಲ್ಗರ್ಗೆ ರಿಟೈರ್ಡ್ ಹರ್ಟ್ ಆಗ್ತಿದ್ದಂತೆ, ಹೆನ್ರಿಚ್ ಕ್ಲೆಸೆನ್ ಜೊತೆಗೆ ಜಾರ್ಜ್ ಲಿಂಡೆ ಕ್ರೀಸ್ಗಿಳಿದಿದ್ರು. ಇದಾದ ಬಳಿಕ ಡೀನ್ ಎಲ್ಗರ್ ಬದಲಿ ಆಟಗಾರನಾಗಿ ಡಿ ಬ್ರೂಯ್ನ್ನನ್ನ ನೇಮಿಸಲಾಗಿದೆ.
Published On - 11:45 am, Tue, 22 October 19