ಕೆಪಿಎಲ್ ಮೋಸದಾಟ: ಸಿಸಿಬಿ ವಿಚಾರಣೆಗೆ ಹಾಜರಾಗಲಿದ್ದಾರೆ ಸ್ಟಾರ್ ನಟಿಯರು!

|

Updated on: Dec 16, 2019 | 12:13 PM

ಬೆಂಗಳೂರು: ಕೆಪಿಎಲ್​ ಕ್ರಿಕೆಟ್​ ಬೆಟ್ಟಿಂಗ್, ಮ್ಯಾಚ್​ ಫಿಕ್ಸಿಂಗ್ ಪ್ರಕರಣದಲ್ಲಿ ಈಗಾಗಲೇ ಆಟಗಾರರು ಮತ್ತು ಬುಕ್ಕಿಗಳು ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಮೋಸದಾಟ ಸಂಬಂಧ ಮಾಲೀಕರು ಸೇರಿದಂತೆ ಹಲವರಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ. ಇದೀಗ ಸಿಸಿಬಿ ವಿಚಾರಣೆಗೆ ಕೆಲ ಸ್ಟಾರ್‌ ನಟಿಯರು ಹಾಜರಾಗಲಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಕೆಲ ನಟಿಯರಿಗೂ, ಕೆಪಿಎಲ್​ ಮ್ಯಾಚ್​ ಫಿಕ್ಸಿಂಗ್ ಪ್ರಕರಣಕ್ಕೂ ನೇರ ಸಂಬಂಧವಿದೆ. ಹೀಗಾಗಿ ಕೆಲ ಸ್ಟಾರ್‌ ನಟಿಯರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಯಾವುದೇ ಗೌಪ್ಯ ಸ್ಥಳದಲ್ಲಿ […]

ಕೆಪಿಎಲ್ ಮೋಸದಾಟ: ಸಿಸಿಬಿ ವಿಚಾರಣೆಗೆ ಹಾಜರಾಗಲಿದ್ದಾರೆ ಸ್ಟಾರ್ ನಟಿಯರು!
Follow us on

ಬೆಂಗಳೂರು: ಕೆಪಿಎಲ್​ ಕ್ರಿಕೆಟ್​ ಬೆಟ್ಟಿಂಗ್, ಮ್ಯಾಚ್​ ಫಿಕ್ಸಿಂಗ್ ಪ್ರಕರಣದಲ್ಲಿ ಈಗಾಗಲೇ ಆಟಗಾರರು ಮತ್ತು ಬುಕ್ಕಿಗಳು ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಮೋಸದಾಟ ಸಂಬಂಧ ಮಾಲೀಕರು ಸೇರಿದಂತೆ ಹಲವರಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ. ಇದೀಗ ಸಿಸಿಬಿ ವಿಚಾರಣೆಗೆ ಕೆಲ ಸ್ಟಾರ್‌ ನಟಿಯರು ಹಾಜರಾಗಲಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಕೆಲ ನಟಿಯರಿಗೂ, ಕೆಪಿಎಲ್​ ಮ್ಯಾಚ್​ ಫಿಕ್ಸಿಂಗ್ ಪ್ರಕರಣಕ್ಕೂ ನೇರ ಸಂಬಂಧವಿದೆ. ಹೀಗಾಗಿ ಕೆಲ ಸ್ಟಾರ್‌ ನಟಿಯರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಯಾವುದೇ ಗೌಪ್ಯ ಸ್ಥಳದಲ್ಲಿ ನಟಿಯರ ವಿಚಾರಣೆ ನಡೆಸುವುದಿಲ್ಲ. ಬೆಂಗಳೂರಿನ ಸಿಸಿಬಿ ಕಚೇರಿಯಲ್ಲೇ ನಟಿಯರ ವಿಚಾರಣೆ ಮಾಡಲಾಗುತ್ತೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ ರಾವ್ ಹೇಳಿದ್ದಾರೆ.

Published On - 12:12 pm, Mon, 16 December 19