ಹನಿಟ್ರಾಪ್ ಮೂಲಕ ಮ್ಯಾಚ್ ಫಿಕ್ಸಿಂಗ್, ಭಾರೀ ಕಾಮಕಾಂಡ ಬಟಾಬಯಲು

|

Updated on: Nov 20, 2019 | 11:26 AM

ಬೆಂಗಳೂರು: ಕೆಪಿಎಲ್ ಕ್ರಿಕೆಟ್‌ನಲ್ಲಿ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ ದಿನೇ ದಿನೆ ಭಾರೀ ಆತಂಕಕಾರಿ ಸಂಗತಿಗಳು ಹೊರಬೀಳುತ್ತಿವೆ. ಈಗ ಸ್ಫೋಟಕ ಮಾಹಿತಿಯೊಂದು ಬಯಲಾಗಿದೆ. ಪ್ರಕರಣದ ತನಿಖೆ ವೇಳೆ ಆಟಗಾರರನ್ನು ಹನಿಟ್ರಾಪ್ ಮೂಲಕ್ ಬ್ಲಾಕ್ ಮೇಲ್ ಮಾಡಲಾಗುತ್ತಿದೆ ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ. ಹುಡುಗಿಯರನ್ನು ಮುಂದೆ ಬಿಟ್ಟು, ಹನಿಟ್ರಾಪ್ ಮಾಡಿ ನಂತರ ಹನಿಟ್ರಾಪ್ ವಿಡಿಯೋಗಳನ್ನ ಮುಂದಿಟ್ಟು ಬ್ಲಾಕ್ ಮೇಲ್ ಮಾಡುತಿದ್ದಾರೆ. ಮೊದಲು ಹಣದ ಆಸೆ ತೋರಿಸಿ ಆಟಗಾರರನ್ನು ಹಣಕ್ಕೆ ಬುಕ್ ಮಾಡಿದ್ದಾರೆ. ಇನ್ನು ಕೆಲವರಿಗೆ ಹನಿಟ್ರಾಪ್ ಮೂಲಕ […]

ಹನಿಟ್ರಾಪ್ ಮೂಲಕ ಮ್ಯಾಚ್ ಫಿಕ್ಸಿಂಗ್, ಭಾರೀ ಕಾಮಕಾಂಡ ಬಟಾಬಯಲು
Follow us on

ಬೆಂಗಳೂರು: ಕೆಪಿಎಲ್ ಕ್ರಿಕೆಟ್‌ನಲ್ಲಿ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ ದಿನೇ ದಿನೆ ಭಾರೀ ಆತಂಕಕಾರಿ ಸಂಗತಿಗಳು ಹೊರಬೀಳುತ್ತಿವೆ. ಈಗ ಸ್ಫೋಟಕ ಮಾಹಿತಿಯೊಂದು ಬಯಲಾಗಿದೆ.

ಪ್ರಕರಣದ ತನಿಖೆ ವೇಳೆ ಆಟಗಾರರನ್ನು ಹನಿಟ್ರಾಪ್ ಮೂಲಕ್ ಬ್ಲಾಕ್ ಮೇಲ್ ಮಾಡಲಾಗುತ್ತಿದೆ ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ. ಹುಡುಗಿಯರನ್ನು ಮುಂದೆ ಬಿಟ್ಟು, ಹನಿಟ್ರಾಪ್ ಮಾಡಿ ನಂತರ ಹನಿಟ್ರಾಪ್ ವಿಡಿಯೋಗಳನ್ನ ಮುಂದಿಟ್ಟು ಬ್ಲಾಕ್ ಮೇಲ್ ಮಾಡುತಿದ್ದಾರೆ.

ಮೊದಲು ಹಣದ ಆಸೆ ತೋರಿಸಿ ಆಟಗಾರರನ್ನು ಹಣಕ್ಕೆ ಬುಕ್ ಮಾಡಿದ್ದಾರೆ. ಇನ್ನು ಕೆಲವರಿಗೆ ಹನಿಟ್ರಾಪ್ ಮೂಲಕ ಆಟಗಾರರನ್ನು ಬುಕ್ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಮ್ಯಾಚ್ ನಡೆಯುವಾಗ ವಿಶ್ರಾಂತಿಗೆ ಎಂದು ಸಿಗುವ ಕೆಲವು ಸೆಕೆಂಡ್​ಗಳಲ್ಲೇ ಫಿಕ್ಸಿಂಗ್ ಮಾಡಲಾಗುತ್ತಿತ್ತು. ನಂತ್ರ ಸನ್ನೆಗಳ ಮೂಲಕ ಮಾಹಿತಿ ನೀಡುತಿದ್ರು ಎಂದು ಸಿಸಿಬಿ ತನಿಖೆ ವೇಳೆ ತಿಳಿದುಬಂದಿದೆ.

Published On - 11:17 am, Wed, 20 November 19