IPL 2021: ಐಪಿಎಲ್​ನಲ್ಲಿ ಕೊಹ್ಲಿಗೆ ಕಂಟಕವಾಗಲಿದ್ದಾನೆ ಆರ್​ಸಿಬಿಯ ಈ ಮಾಜಿ ಆಟಗಾರ! ಅಂಕಿ- ಅಂಶವೂ ಅದನ್ನೇ ಹೇಳುತ್ತಿದೆ

|

Updated on: Apr 03, 2021 | 2:00 PM

ಅಂತರಾಷ್ಟ್ರೀ ಕ್ರಿಕೆಟ್ನಲ್ಲಿ ಅಲಿ, ಒಂದಲ್ಲಾ ಎರಡಲ್ಲಾ.. ಬರೊಬ್ಬರಿ 9 ಬಾರಿ ವಿರಾಟ್ ಕೊಹ್ಲಿಯನ್ನ ಔಟ್ ಮಾಡಿ ಪೆವಿಲಿಯನ್ಗಟ್ಟಿದ್ದಾರೆ.

IPL 2021: ಐಪಿಎಲ್​ನಲ್ಲಿ ಕೊಹ್ಲಿಗೆ ಕಂಟಕವಾಗಲಿದ್ದಾನೆ ಆರ್​ಸಿಬಿಯ ಈ ಮಾಜಿ ಆಟಗಾರ! ಅಂಕಿ- ಅಂಶವೂ ಅದನ್ನೇ ಹೇಳುತ್ತಿದೆ
ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿ
Follow us on

ಐಪಿಎಲ್ ಮಹಾಸಂಗ್ರಾಮಕ್ಕಿನ್ನೂ ಏಳೇ ದಿನ ಬಾಕಿಯಿದೆ. ಟೀಮ್ ಇಂಡಿಯಾ ಆಟಗಾರರು, ಮಿನಿ ಸಂಗ್ರಾಮಕ್ಕೆ ತಯಾರಿ ನಡೆಸಿಕೊಳ್ತಿದ್ದಾರೆ. ಆದ್ರೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕ್ಯಾಪ್ಟನ್ ಕೊಹ್ಲಿಯನ್ನ ಕಾಡಿದ್ದ ಆತ, ಐಪಿಎಲ್ನಲ್ಲೂ ವಿರಾಟ್ಗೆ ಕಂಟಕವಾಗಿ ಕಾಡುವ ಸೂಚನೆ ನೀಡಿದ್ದಾನೆ. ಇಂಗ್ಲೆಂಡ್ ತಂಡವನ್ನು ಮೂರು ಫಾರ್ಮೆಟ್ನಲ್ಲೂ ಮಣಿಸಿರುವ ಟೀಮ್ ಇಂಡಿಯಾ ಆಟಗಾರರು, ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ನತ್ತ ಮುಖ ಮಾಡಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಎಪ್ರಿಲ್ 1ರಿಂದ ಆರ್ಸಿಬಿ ತಂಡವನ್ನ ಸೇರಿಕೊಂಡಿದ್ದಾರೆ. ಇಂಗ್ಲೆಂಡ್ ಸರಣಿ ಮುಗಿಯುತ್ತಿದ್ದಂತೆ ವಿರಾಟ್, ಮನೆಯಲ್ಲಿದ್ದುಕೊಂಡೇ ಐಪಿಎಲ್ಗಾಗಿ ತಯಾರಿ ನಡೆಸಿಕೊಳ್ಳುತ್ತಿದ್ದಾರೆ.

ಈ ಬಾರಿಯ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಪಾಲಿಗೆ ಚೆನ್ನೈ ತಂಡದಲ್ಲೊಬ್ಬ ವಿಲನ್ ಇದ್ದಾನೆ. ಆತ ಬೇರ್ಯಾರೂ ಅಲ್ಲ.. ಇದೇ ಆರ್ಸಿಬಿ ತಂಡದಲ್ಲಿದ್ದ ಇಂಗ್ಲೆಂಡ್ನ ಮೋಯಿನ್ ಅಲಿ. ಆದ್ರೆ ಈ ಬಾರಿ ಹರಾಜಿನಲ್ಲಿ ಚೆನ್ನೈ ಫ್ರಾಂಚೈಸಿ, ಮೋಯಿನ್ ಅಲಿಯನ್ನ ಖರೀದಿಸಿದೆ. ಹೀಗಾಗಿ ಐಪಿಎಲ್ ಸಂಗ್ರಾಮದಲ್ಲೂ ಅಲಿ, ಕ್ಯಾಪ್ಟನ್ ಕೊಹ್ಲಿ ಪಾಲಿಗೆ ವಿಲನ್ ಆಗಿ ಗುರುತಿಸಿಕೊಂಡಿದ್ದಾರೆ.

9 ಬಾರಿ ವಿರಾಟ್ ಕೊಹ್ಲಿ ಔಟ್ ಮಾಡಿರುವ ಅಲಿ!
ಇದೇ ಕಾರಣಕ್ಕೆ ನಾವು ಮೋಯಿನ್ ಅಲಿ, ವಿರಾಟ್ ಕೊಹ್ಲಿ ಪಾಲಿಗೆ ವಿಲನ್ ಅಂತಾ ಹೇಳಿದ್ದು. ಅಂತರಾಷ್ಟ್ರೀ ಕ್ರಿಕೆಟ್ನಲ್ಲಿ ಅಲಿ, ಒಂದಲ್ಲಾ ಎರಡಲ್ಲಾ.. ಬರೊಬ್ಬರಿ 9 ಬಾರಿ ವಿರಾಟ್ ಕೊಹ್ಲಿಯನ್ನ ಔಟ್ ಮಾಡಿ ಪೆವಿಲಿಯನ್ಗಟ್ಟಿದ್ದಾರೆ. ಇಂಗ್ಲೆಂಡ್ ವಿರುದ್ಧದ ಚೆನ್ನೈ ಟೆಸ್ಟ್ ಪಂದ್ಯದಲ್ಲಿ, ವಿರಾಟ್ ಕೊಹ್ಲಿಯನ್ನ ಕ್ಲೀನ್ ಬೌಲ್ಡ್ ಮಾಡಿದ್ದ ಮೋಯಿನ್ ಅಲಿ, ಪುಣೆಯಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲೂ ಕ್ಲೀನ್ ಬೌಲ್ಡ್ ಮಾಡಿದ್ರು. ಇದರೊಂದಿಗೆ ಅಲಿ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಕೊಹ್ಲಿಯನ್ನ ಅತೀ ಹೆಚ್ಚು ಬಾರಿ ಔಟ್ ಮಾಡಿದ 2ನೇ ಬೌಲರ್ ಎನ್ನುವ ಹಿರಿಮೆಯನ್ನ ತಮ್ಮದಾಗಿಸಿಕೊಂಡ್ರು.

ವಿರಾಟ್ ಕೊಹ್ಲಿಯನ್ನ 9 ಬಾರಿ ಔಟ್ ಮಾಡಿರುವ ಅಲಿ, ಈ ಬಾರಿಯ ಐಪಿಎಲ್ನಲ್ಲೂ ಕ್ಯಾಪ್ಟನ್ ಕೊಹ್ಲಿಗೆ ಕಂಟಕವಾಗಲಿದ್ದಾರೆ. ಇತ್ತ ವಿರಾಟ್ ಮೋಯಿಲ್ ಅಲಿ ಮುಂದೆ, ವಿಕೆಟ್ ಒಪ್ಪಿಸ್ತೀನಿ ಅನ್ನೋ ಭಯದಲ್ಲೇ ಎಡವಟ್ಟು ಮಾಡಿಕೊಳ್ತಿದ್ದಾರೆ. ಹೀಗಾಗಿ ಚೆನ್ನೈ ತಂಡದ ನಾಯಕ ಧೋನಿ, ಕೊಹ್ಲಿ ವಿರುದ್ಧ ಅಲಿ ಅನ್ನೋ ಬ್ರಹ್ಮಾಸ್ತ್ರವನ್ನ ಬಳಸೋದ್ರಲ್ಲಿ ಯಾವ ಅನುಮಾನವೂ ಇಲ್ಲ.

ಇನ್ನು ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿಯನ್ನ ಅತೀ ಹೆಚ್ಚು ಬಾರಿ ಔಟ್ ಮಾಡಿರೋದು, ನ್ಯೂಜಿಲೆಂಡ್ನ ಟಿಮ್ ಸೌತಿ. ಟಿಮ್ ಸೌತಿ ಒಟ್ಟು 10 ಬಾರಿ ಕೊಹ್ಲಿ ವಿಕೆಟ್ ಪಡೆದಿದ್ದಾರೆ. ಸೌತಿ ಸಾಧನೆಯನ್ನ ಸರಿಗಟ್ಟೋಕೆ ಅಲಿ ಇನ್ನೊಂದು ಬಾರಿ ಕೊಹ್ಲಿಯನ್ನ ಔಟ್ ಮಾಡಬೇಕು. ಆದ್ರೆ ಕೊಹ್ಲಿ, ಅಲಿಯನ್ನ ಎದುರಿಸೋಕೆ ಸರಿಯಾದ ತಯಾರಿ ನಡೆಸಿಕೊಂಡೇ ಬರ್ತಾರೆ. ಹೀಗಾಗಿ ಈ ಬಾರಿ ಐಪಿಎಲ್ನಲ್ಲಿ ಕೊಹ್ಲಿ ಮತ್ತು ಅಲಿ ನಡುವಿನ ಯುದ್ಧ, ಕ್ರಿಕೆಟ್ ಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ:IPL 2021: ಸಾರ್ವಕಾಲಿಕ ಐಪಿಎಲ್​ ತಂಡ ಪ್ರಕಟಿಸಿದ ಎಬಿ ಡಿವಿಲಿಯರ್ಸ್: ಭಾರತೀಯರದೇ ಸಿಂಹಪಾಲು, ಧೋನಿಗೆ ನಾಯಕನ ಪಟ್ಟ!