AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2021: ಪಾಕ್ ಆಟಗಾರರು ಭಾರತದಲ್ಲಿ ವಿಶ್ವಕಪ್​ ಆಡಲು BCCI ಗ್ರೀನ್​ ಸಿಗ್ನಲ್​! ಇಷ್ಟರಲ್ಲೇ ವೀಸಾ ಅನುಮತಿ?

T20 World Cup 2021: ಪಾಕಿಸ್ತಾನದ ಆಟಗಾರರು ಭಾರತಕ್ಕೆ ಬರುವಾಗ ವೀಸಾ ಸಂಬಂಧಿತ ಯಾವುದೇ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂದು ಬಿಸಿಸಿಐ ಐಸಿಸಿಗೆ ಸ್ಪಷ್ಟವಾಗಿ ತಿಳಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ

T20 World Cup 2021: ಪಾಕ್ ಆಟಗಾರರು ಭಾರತದಲ್ಲಿ ವಿಶ್ವಕಪ್​ ಆಡಲು BCCI ಗ್ರೀನ್​ ಸಿಗ್ನಲ್​! ಇಷ್ಟರಲ್ಲೇ ವೀಸಾ ಅನುಮತಿ?
ಪ್ರಾತಿನಿಧಿಕ ಚಿತ್ರ
ಪೃಥ್ವಿಶಂಕರ
|

Updated on:Apr 03, 2021 | 1:14 PM

Share

ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ರೋಮಾಂಚನ ವಿಷಯಗಳಿವೆ. ಆದರೆ ಭಾರತ ಮತ್ತು ಪಾಕಿಸ್ತಾನದ ನಡುವೆ 22 ಗಜ ಪಿಚ್‌ನಲ್ಲಿ ಕಂಡುಬರುವ ವಿಶೇಷತೆ ಬೇರೆ ಯಾವುದೇ ಪಂದ್ಯಗಳಲ್ಲಿ ಕಂಡುಬರುವುದಿಲ್ಲ. ಈ ಎರಡು ಪ್ರತಿಸ್ಪರ್ಧಿ ತಂಡಗಳ ಮುಖಾಮುಖಿಗಾಗಿ ವಿಶ್ವದಾದ್ಯಂತದ ಕ್ರಿಕೆಟ್ ಉತ್ಸಾಹಿಗಳು ಬಹಳ ಹುರುಪಿನಿಂದ ಕಾಯುತ್ತಿದ್ದಾರೆ. ಆದರೆ, ಉಭಯ ದೇಶಗಳ ನಡುವಿನ ಬಿರುಕು ಸಂಬಂಧದಿಂದಾಗಿ, ಅವರ ವೈರತ್ವ ಕ್ರಿಕೆಟ್ ಮೈದಾನದಲ್ಲಿಯೂ ಕಂಡುಬರುತ್ತದೆ. ಉಭಯ ತಂಡಗಳ ನಡುವೆ ಕೊನೆಯ ದ್ವಿಪಕ್ಷೀಯ ಪಂದ್ಯ 2013 ರಲ್ಲಿ ನಡೆದಿತ್ತು. ಆದಾಗ್ಯೂ, ಐಸಿಸಿ ಪಂದ್ಯಾವಳಿಯಲ್ಲಿ ಉಭಯ ತಂಡಗಳು ಪರಸ್ಪರ ಎದುರಾಗುತ್ತಲೆ ಇರುತ್ತವೆ. ಏತನ್ಮಧ್ಯೆ, ಕ್ರಿಕೆಟ್ ಅಭಿಮಾನಿಗಳಿಗೆ ಸಾಕಷ್ಟು ಒಳ್ಳೆಯ ಸುದ್ದಿ ಬಂದಿದೆ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡವು ಭಾರತದಲ್ಲಿ ಆಡಲು ಹಾದಿ ಬಹುತೇಕ ಸ್ಪಷ್ಟವಾಗಿದೆ.

ವಾಸ್ತವವಾಗಿ, ಈ ವರ್ಷ ಐಸಿಸಿ ಟಿ 20 ವಿಶ್ವಕಪ್ ಭಾರತದಲ್ಲಿ ಅಕ್ಟೋಬರ್‌ನಲ್ಲಿ ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಆಟಗಾರರಿಗೆ ಭಾರತ ಸರ್ಕಾರದಿಂದ ವೀಸಾ ಸಿಗುತ್ತದೆಯೇ ಎಂಬ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಉಸಿರು ಬಿಗಿಯಾಗಿತ್ತು. ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿಗಳಿಂದಾಗಿ ಭಾರತವು ಪಾಕಿಸ್ತಾನದೊಂದಿಗಿನ ಕ್ರಿಕೆಟಿಂಗ್ ಸಂಬಂಧವನ್ನು ಕೊನೆಗೊಳಿಸಿದೆ. ಪಿಸಿಬಿ ಬಿಸಿಸಿಐನಿಂದ ಲಿಖಿತ ಭರವಸೆ ನೀಡುವಂತೆ ಒತ್ತಾಯಿಸಲು ಇದು ಕಾರಣವಾಗಿದೆ. ಆದರೆ, ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ ಬಿಸಿಸಿಐ ಈ ಬಗ್ಗೆ ಭರವಸೆ ನೀಡಿದೆ.

ವೀಸಾದಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ ಪಾಕಿಸ್ತಾನದ ಆಟಗಾರರು ಭಾರತಕ್ಕೆ ಬರುವಾಗ ವೀಸಾ ಸಂಬಂಧಿತ ಯಾವುದೇ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂದು ಬಿಸಿಸಿಐ ಐಸಿಸಿಗೆ ಸ್ಪಷ್ಟವಾಗಿ ತಿಳಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಪಾಕಿಸ್ತಾನ ಕ್ರಿಕೆಟ್ ತಂಡದ ಸದಸ್ಯರು ಭಾರತ ಸರ್ಕಾರದಿಂದ ವೀಸಾ ಪಡೆಯುವುದನ್ನು ಖಚಿತಪಡಿಸುವುದಾಗಿ ಭಾರತೀಯ ಕ್ರಿಕೆಟ್ ಮಂಡಳಿ ಹೇಳಿದೆ. ವರದಿಯ ಪ್ರಕಾರ, ಏಪ್ರಿಲ್ 1 ರಂದು ನಡೆದ ನಿಗದಿತ ಸಭೆಯಲ್ಲಿ ಬಿಸಿಸಿಐ ಈ ಮಾಹಿತಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ತಿಳಿಸಿತ್ತು.

ಈ ಹಿಂದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಎಹ್ಸಾನ್ ಮಣಿ, “ಪಾಕಿಸ್ತಾನದ ಆಟಗಾರರಿಗೆ ಮಾತ್ರವಲ್ಲ, ಅಭಿಮಾನಿಗಳು, ಅಧಿಕಾರಿಗಳು ಮತ್ತು ಪಾಕಿಸ್ತಾನಿ ಪತ್ರಕರ್ತರಿಗೂ ವೀಸಾ ಬಗ್ಗೆ ಲಿಖಿತ ಭರವಸೆ ಬೇಕು” ಎಂದು ಹೇಳಿದ್ದರು. ಈ ಬಗ್ಗೆ ನಾವು ಐಸಿಸಿಗೆ ತಿಳಿಸಿದ್ದೇವೆ. ವೀಸಾಗಳ ಬಗ್ಗೆ ನಮಗೆ ಖಚಿತವಾದ ಭರವಸೆಗಳು ಸಿಗದಿದ್ದರೆ, ಟಿ 20 ವಿಶ್ವಕಪ್ ಅನ್ನು ಭಾರತದ ಬದಲು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನಡೆಸಬೇಕೆಂಬ ಬೇಡಿಕೆಯನ್ನು ನಾವು ಹೆಚ್ಚಿಸುತ್ತೇವೆ ಎಂದಿದ್ದರು.

ಇದನ್ನೂ ಓದಿ:T20 ವಿಶ್ವಕಪ್​ಗೂ ಮುನ್ನ ದಕ್ಷಿಣ ಆಫ್ರಿಕಾ- ನ್ಯೂಜಿಲ್ಯಾಂಡ್​ ಜೊತೆ ಟಿ20 ಸರಣಿ.. ಟೀಂ ಇಂಡಿಯಾಕ್ಕೆ ಅನುಕೂಲವೇ ಹೆಚ್ಚು!

Published On - 12:23 pm, Sat, 3 April 21

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್