ಎಷ್ಟೇ ಅವಕಾಶ ಸಿಕ್ಕಿದ್ರೂ ಸರಿಯಾಗಿ ಸದ್ಭಳಕೆ ಮಾಡಿಕೊಳ್ಳದ ಯುವ ವಿಕೆಟ್ ಕೀಪರ್ ರಿಷಬ್ ಪಂತ್, ಟೀಮ್ ಇಂಡಿಯಾದಲ್ಲಿ ಬೆಂಚ್ ಕಾಯಬೇಕಾದ ಪರಿಸ್ಥಿತಿ ಬಂದೊದಗಿದೆ. ಪಂತ್ ತಾನು ಧೋನಿ ಅಂದ್ಕೊಂಡಿರೋದೇ ತಪ್ಪಾಗ್ತಿದೆ ಎಂದು, ಕ್ರಿಕೆಟ್ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸ್ತಾನೇ ಇರ್ತಾರೆ. ಆದ್ರೀಗ ಪಂತ್ ಅದೇ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಬಗ್ಗೆ ಬಾಯ್ಬಿಟ್ಟಿರೋ ಪಂತ್, ಧೋನಿ ನನ್ನ ಮಾರ್ಗದರ್ಶಕ.. ಆದ್ರೆ ಅವರೆಂದಿಗೂ ಸಮಸ್ಯೆಗೆ ಪೂರ್ಣ ಪ್ರಮಾಣದ ಪರಿಹಾರ ನೀಡೋದಿಲ್ಲ ಎಂದಿದ್ದಾರೆ. ಅರೇ ಇದೇನಪ್ಪ.. ಪಂತ್ ಧೋನಿ ಬಗ್ಗೆ ಹೀಗೇ ಹೇಳಿಬಿಟ್ನಾ ಅಂತಾ ಆಶ್ಚರ್ಯ ಪಡಬೇಡಿ. ಪಂತ್ ಧೋನಿ ಬಗ್ಗೆ ಮುಂದೇನು ಹೇಳಿದ್ದಾರೆ ಅನ್ನೋದನ್ನ ನೋಡಿ.. ಆಗಲೇ ಗೊತ್ತಾಗುತ್ತೆ ಪಂತ್ ಮಾತಿನ ಅರ್ಥವೇನು ಅನ್ನೋದು.
ಧೋನಿ ಸಮಸ್ಯೆಗೆ ಪೂರ್ಣ ಪರಿಹಾರ ನೀಡಲ್ಲ:
ಧೋನಿ ಕಿರಿಯ ಆಟಗಾರರಿಗೆ ಸಹಾಯ ಮಾಡುವ ತನ್ನದೇ ಆದ ಮಾರ್ಗವನ್ನು ಹೊಂದಿದ್ದಾರೆ. ಏಕೆಂದರೆ ಅವರು ಎಂದಿಗೂ ಸಮಸ್ಯೆಗೆ ಪೂರ್ಣ ಪರಿಹಾರವನ್ನು ನೀಡುವುದಿಲ್ಲ. ಉತ್ತರಗಳನ್ನು ಹುಡುಕಲು ಪ್ರೋತ್ಸಾಹಿಸುತ್ತಾರೆ ಎಂದಿದ್ದಾರೆ. ನೋಡಿದ್ರಲ್ಲ.. ಪಂತ್ ಏನಂದಿದ್ದಾನೆ ಅನ್ನೋದನ್ನ.. ಅಂದ್ರೆ ಧೋನಿ ಒಂದು ಸಮಸ್ಯೆಗೆ ಪರಿಹಾರದ ಸುಳುವು ನೀಡ್ತಾರೆ ಅಷ್ಟೇ. ಆ ಸುಳಿವೇನು ಅನ್ನೋದನ್ನ ನೀವೇ ಪತ್ತೆ ಹಚ್ಚಿಕೊಳ್ಳಬೇಕು. ನಿಜಕ್ಕೂ ಧೋನಿಯ ಈ ಐಡಿಯಾ ಚೆನ್ನಾಗಿದೆ. ಯಾಕಂದ್ರೆ ಎಲ್ಲವನ್ನೂ ಹೇಳಿ ಬಿಟ್ರೆ, ಆತನಲ್ಲಿ ಸೃಜನಶೀಲತೆಗೆ ಅವಕಾಶವೇ ಇರೋದಿಲ್ಲ.
ಇದೇ ವಿಚಾರವನ್ನ ಬಾಯ್ಬಿಟ್ಟಿರೋ ಪಂತ್, ನಾನು ಧೋನಿ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗೋದಿಲ್ಲ. ಅವರು ನನಗೆ ಸುಳಿವು ಮಾತ್ರ ನೀಡ್ತಾರೆ. ಆ ಸುಳಿವಿನ ಆಧಾರದ ಮೇಲೆ ನಾನು ನನ್ನ ಸಮಸ್ಯೆಯನ್ನ ಪರಿಹರಿಸಿಕೊಳ್ಳೋದಕ್ಕೆ ಪ್ರಯತ್ನಿಸುತ್ತೇನೆ ಎಂದಿದ್ದಾರೆ.
ಪಂತ್ ಹೀಗೆ ಹೇಳ್ತೀರೋದೇನೋ ಸರಿ.. ಆದ್ರೀಗ ಪಂತ್ ಪ್ಲೇಸ್ ಅನ್ನ ನಮ್ಮ ಕನ್ನಡಿಗ ಕೆ.ಎಲ್.ರಾಹುಲ್ ಪಾಲಾಗಿದೆ. ಹೀಗಾಗಿ ಪಂತ್ ಬೆಂಚ್ ಕಾಯೋ ಪರಿಸ್ಥಿತಿ ಬಂದೊದಗಿದೆ. ಪಂತ್ ಹೀಗೆ ಹೇಳಿರೋದನ್ನ ಕೇಳಿ, ಎಲ್ರೂ ನಿನ್ನ ಸಮಸ್ಯೆಗೆ ಪರಿಹಾರ ಇನ್ನು ಯಾಕೇ ಸಿಗಲಿಲ್ಲ ಅಂತಾ ಪ್ರಶ್ನೆ ಮಾಡುತ್ತಿದ್ದಾರೆ.