ವಿರಾಟ್ ಕೊಹ್ಲಿಯ ನಾಯಿ ಬ್ರುನೊ ಸತ್ತುಹೋಯ್ತಂತೆ!

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್​ ಕೊಹ್ಲಿ ಅವರ ವಿರಾಟರೂಪದ ನಾಯಿ ಬ್ರುನೊ ಇಂದು ಸತ್ತುಹೋಯ್ತಂತೆ! 11 ವರ್ಷಗಳ ಕಾಲ ನನ್ನೊಂದಿಗೆ ಸುದೀರ್ಘ ಜೀವನ ನಡೆಸಿದ ನನ್ನ ಅಚ್ಚುಮೆಚ್ಚಿನ ಸಾಕುನಾಯಿ ಬ್ರುನೊ ಇಂದು ಇಹಲೋಕ ತ್ಯಜಿಸಿದೆ. ನಮ್ಮೊಂದಿಗೆ ಅನುಕ್ಷಣವೂ ಆತ್ಮೀಯ ಒಡನಾಟ ಹೊಂದಿತ್ತು. ಬಹುಶಃ ಬ್ರುನೊ ಇಂದು ಇನ್ನೂ ಒಳ್ಳೆಯ ಜಾಗಕ್ಕೆ ಸೇರಿಕೊಂಡಿರಬಹುದು. ಬ್ರುನೊ ಆತ್ಮಕ್ಕೆ ಶಾಂತಿ ದೊರಕಲಿ, ಸದ್ಗತಿ ಸಿಗುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ಕೊಹ್ಲಿ ಸಂತಾಪ ಸೂಚಿಸಿದ್ದಾರೆ. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ವಿರಾಟ್​ […]

ವಿರಾಟ್ ಕೊಹ್ಲಿಯ ನಾಯಿ ಬ್ರುನೊ ಸತ್ತುಹೋಯ್ತಂತೆ!

Updated on: May 06, 2020 | 3:21 PM

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್​ ಕೊಹ್ಲಿ ಅವರ ವಿರಾಟರೂಪದ ನಾಯಿ ಬ್ರುನೊ ಇಂದು ಸತ್ತುಹೋಯ್ತಂತೆ! 11 ವರ್ಷಗಳ ಕಾಲ ನನ್ನೊಂದಿಗೆ ಸುದೀರ್ಘ ಜೀವನ ನಡೆಸಿದ ನನ್ನ ಅಚ್ಚುಮೆಚ್ಚಿನ ಸಾಕುನಾಯಿ ಬ್ರುನೊ ಇಂದು ಇಹಲೋಕ ತ್ಯಜಿಸಿದೆ. ನಮ್ಮೊಂದಿಗೆ ಅನುಕ್ಷಣವೂ ಆತ್ಮೀಯ ಒಡನಾಟ ಹೊಂದಿತ್ತು. ಬಹುಶಃ ಬ್ರುನೊ ಇಂದು ಇನ್ನೂ ಒಳ್ಳೆಯ ಜಾಗಕ್ಕೆ ಸೇರಿಕೊಂಡಿರಬಹುದು. ಬ್ರುನೊ ಆತ್ಮಕ್ಕೆ ಶಾಂತಿ ದೊರಕಲಿ, ಸದ್ಗತಿ ಸಿಗುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ಕೊಹ್ಲಿ ಸಂತಾಪ ಸೂಚಿಸಿದ್ದಾರೆ.

ಕೊರೊನಾ ಸೋಂಕು ಹಿನ್ನೆಲೆಯಲ್ಲಿ ವಿರಾಟ್​ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಜೊತೆ ಏಕಾಂತ ಜೀವನದಲ್ಲಿದ್ದು, ಇತ್ತೀಚೆಗೆ ಬ್ರುನೊ ಜೊತೆಗಿನ ಅನೇಕ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ನನ್ನ ಬ್ರುನೊ ನನಗೆ ಲಕ್ಕಿ ಚಾರ್ಮ್​ ಅಂದ್ರೆ ಅದೃಷ್ಟ ತಂದುಕೊಟ್ಟ ಮುದ್ದು ನಾಯಿಯಾಗಿತ್ತು. ನನಗೆ ಬೇಸರವಾದಾಗಲೆಲ್ಲ ಅದರೊಂದಿಗೆ ಸಮಯ ಕಳೆಯುತ್ತಿದ್ದೆ. ನನ್ನನ್ನು ಅದು ಎಂದಿಗೂ ಉಲ್ಲಸಿತನನ್ನಾಗಿಸುತ್ತಿತ್ತು ಎಂದು ಕೊಹ್ಲಿ ತಮ್ಮ ದುಃಖ ತೋಡಿಕೊಂಡಿದ್ದಾರೆ.

Published On - 3:16 pm, Wed, 6 May 20