ಧೋನಿ ಕ್ರಿಕೆಟ್ ಬದುಕು ಅಂತ್ಯವಾಗುತ್ತಾ? ಹರ್ಭಜನ್ ಸಿಂಗ್ ಹೇಳಿದ್ದಾದ್ರು ಏನು?

|

Updated on: Apr 24, 2020 | 7:21 PM

ಕೊರೊನಾ ಲಾಕ್​ಡೌನ್​ನಿಂದಾಗಿ ಈ ಬಾರಿಯ ಐಪಿಎಲ್ ಬಹುತೇಕ ನಡೆಯೋದೇ ಅನುಮಾನವಾಗಿದೆ. ಒಂದು ವೇಳೆ ಐಪಿಎಲ್ ನಡೆಯದೇ ಇದ್ರೆ, ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಬದುಕು ಅಂತ್ಯವಾಗಲಿದೆ. ಯಾಕಂದ್ರೆ ಟೀಮ್ ಇಂಡಿಯಾ ಸೆಲೆಕ್ಷನ್ ಕಮಿಟಿ ಐಪಿಎಲ್​ನಲ್ಲಿ ಧೋನಿ ನೀಡೋ ಪ್ರದರ್ಶನವನ್ನ ಪರಿಗಣಿಸಿ, ತಂಡಕ್ಕೆ ಆಯ್ಕೆ ಮಾಡೋದಾಗಿ ಹೇಳಿತ್ತು. ಇದರ ನಡುವೆಯೇ ಟರ್ಬನೇಟರ್ ಹರ್ಭಜನ್ ಸಿಂಗ್, ಮಹೇಂದ್ರ ಸಿಂಗ್ ಧೋನಿ ಮತ್ತೆ ಟೀಮ್ ಇಂಡಿಯಾ ಪರ ಆಡೋದಿಲ್ಲ ಎಂದಿದ್ದಾರೆ. ಹರ್ಭಜನ್ ಸಿಂಗ್ ಐಪಿಎಲ್​ನಲ್ಲಿ ಧೋನಿ ನಾಯಕತ್ವದ ಚೆನ್ನೈ ತಂಡವನ್ನೇ ಪ್ರತಿನಿಧಿಸುತ್ತಿದ್ದಾರೆ. […]

ಧೋನಿ ಕ್ರಿಕೆಟ್ ಬದುಕು ಅಂತ್ಯವಾಗುತ್ತಾ? ಹರ್ಭಜನ್ ಸಿಂಗ್ ಹೇಳಿದ್ದಾದ್ರು ಏನು?
Follow us on

ಕೊರೊನಾ ಲಾಕ್​ಡೌನ್​ನಿಂದಾಗಿ ಈ ಬಾರಿಯ ಐಪಿಎಲ್ ಬಹುತೇಕ ನಡೆಯೋದೇ ಅನುಮಾನವಾಗಿದೆ. ಒಂದು ವೇಳೆ ಐಪಿಎಲ್ ನಡೆಯದೇ ಇದ್ರೆ, ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಬದುಕು ಅಂತ್ಯವಾಗಲಿದೆ. ಯಾಕಂದ್ರೆ ಟೀಮ್ ಇಂಡಿಯಾ ಸೆಲೆಕ್ಷನ್ ಕಮಿಟಿ ಐಪಿಎಲ್​ನಲ್ಲಿ ಧೋನಿ ನೀಡೋ ಪ್ರದರ್ಶನವನ್ನ ಪರಿಗಣಿಸಿ, ತಂಡಕ್ಕೆ ಆಯ್ಕೆ ಮಾಡೋದಾಗಿ ಹೇಳಿತ್ತು.

ಇದರ ನಡುವೆಯೇ ಟರ್ಬನೇಟರ್ ಹರ್ಭಜನ್ ಸಿಂಗ್, ಮಹೇಂದ್ರ ಸಿಂಗ್ ಧೋನಿ ಮತ್ತೆ ಟೀಮ್ ಇಂಡಿಯಾ ಪರ ಆಡೋದಿಲ್ಲ ಎಂದಿದ್ದಾರೆ. ಹರ್ಭಜನ್ ಸಿಂಗ್ ಐಪಿಎಲ್​ನಲ್ಲಿ ಧೋನಿ ನಾಯಕತ್ವದ ಚೆನ್ನೈ ತಂಡವನ್ನೇ ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಭಜ್ಜಿ ಹೇಳಿದ ಮಾತು ಧೋನಿ ಅಭಿಮಾನಿಗಳಿಗೆ ಬರಸಿಡಿಲು ಬಡಿದಂತಾಗಿದೆ.

ರೋಹಿತ್ ಶರ್ಮಾ ಜೊತೆಗೆ ಇನ್​ಸ್ಟ್ರಾಗ್ರಾಮ್ ಲೈವ್​ನಲ್ಲಿ ಹರ್ಭಜನ್ ಸಿಂಗ್ ಈ ವಿಷ್ಯವನ್ನ ಬಹಿರಂಗಪಡಿಸಿದ್ದಾರೆ. ಮೊದಲಿಗೆ ಇನ್​ಸ್ಟಾ ಬಳಕೆದಾರರೊಬ್ಬರು ಧೋನಿ ಮೈದಾನಕ್ಕೆ ಮತ್ತೆ ಯಾವಾಗ ವಾಪಸ್ ಆಗ್ತಾರೆ ಅನ್ನೋ ಪ್ರಶ್ನೆಯನ್ನ ಕೇಳಿದ್ರು. ಇದಕ್ಕೆ ಉತ್ತರಿಸಿದ ರೋಹಿತ್ ಶರ್ಮಾ, ಈ ಬಗ್ಗೆ ಧೋನಿಯನ್ನೇ ಕೇಳಿ ಎಂದಿದ್ದಾರೆ. ಆದ್ರೆ ಹರ್ಭಜನ್ ಸಿಂಗ್, ಧೋನಿ ಅಭಿಮಾನಿಗಳ ಆತಂಕ ಹೆಚ್ಚಾಗುವಂತ ಹೇಳಿಕೆ ನೀಡಿದ್ದಾರೆ.

ಧೋನಿ ಏಕದಿನ ಪಂದ್ಯಕ್ಕೆ ಮರಳುವುದು ಕಷ್ಟಸಾಧ್ಯ!
ಮಹೇಂದ್ರ ಸಿಂಗ್ ಧೋನಿ ಮತ್ತೆ ಟೀಂ ಇಂಡಿಯಾ ಪರ ಆಡಲಿದ್ದಾರೆ ಎಂದು ನನಗೆ ಅನಿಸುತ್ತಿಲ್ಲ. 2019ರ ವಿಶ್ವಕಪ್ ಸೆಮಿಫೈನಲ್ ಪಂದ್ಯವೇ ಧೋನಿಯ ಕೊನೆಯ ಪಂದ್ಯವಾಗಿರಬಹುದು ಅಂತಾ ಅಂದ್ಕೊಂಡಿದ್ದೇನೆ. ಧೋನಿ ಐಪಿಎಲ್​ನಲ್ಲಿ ಮುಂದುವರೆಯಲಿದ್ದಾರೆ. ಆದ್ರೆ, ಏಕದಿನ ಪಂದ್ಯಕ್ಕೆ ಮರಳುವುದು ಕಷ್ಟಸಾಧ್ಯ. 38 ವರ್ಷದ ಧೋನಿ ಪ್ರಸ್ತುತ ಪಂದ್ಯಗಳಿಂದ ಹೊರಗುಳಿಯುವ ಮೂಲಕ ಎಂಜಾಯ್ ಮಾಡುತ್ತಿದ್ದಾರೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

2019ರ ವಿಶ್ವಕಪ್​ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದ ಬಳಿಕ ಧೋನಿ, ಟೀಮ್ ಇಂಡಿಯಾದಿಂದ ದೂರ ಉಳಿದಿದ್ದಾರೆ. ಈ ವರ್ಷದ ಆರಂಭದಲ್ಲಿ ಬಿಸಿಸಿಐ ಪ್ರಕಟಿಸಿದ ಆಟಗಾರರ ಕೇಂದ್ರೀಯ ಗುತ್ತಿಗೆದಾರರ ಪಟ್ಟಿಯಿಂದಲೂ ಧೋನಿ ಹೆಸರನ್ನ ಕೈಬಿಡಲಾಗಿದೆ.

ಒಟ್ನಲ್ಲಿ ಹರ್ಭಜನ್ ಸಿಂಗ್ ಧೋನಿ ಆಪ್ತವಲಯದಲ್ಲಿ ಗುರುತಿಸಿಕೊಂಡ ಕ್ರಿಕೆಟಿಗ. ಅದೂ ಅಲ್ಲದೇ ಧೋನಿ ನಾಯಕತ್ವದ ಚೆನ್ನೈ ತಂಡವನ್ನೇ ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಧೋನಿ ಭವಿಷ್ಯದ ಬಗ್ಗೆ ಗೊತ್ತಿದ್ದೇ ಭಜ್ಜಿ ಈ ಮಾತುಗಳನ್ನಾಡಿದ್ರೂ ಅಚ್ಚರಿಯೇನಿಲ್ಲ.