IPL 2021: ಚೆನ್ನೈ ನಾಯಕ ಧೋನಿಗೆ ಕಾಡಿದ ನಿಷೇಧ ಭೀತಿ; ಐಪಿಎಲ್​ ಮಂಡಳಿ ಎಚ್ಚರಿಕೆ

ಡೆಲ್ಲಿ ಬ್ಯಾಟ್​ ಮಾಡುವಾಗ ಚೆನ್ನೈ ನಿಧಾನವಾಗಿ ಬೌಲಿಂಗ್​ ಮಾಡಿತ್ತು. ಈ ಕಾರಣಕ್ಕೆ ಧೋನಿಗೆ ದಂಡ ವಿಧಿಸಲಾಗಿದೆ ಎಂದು ಐಪಿಎಲ್​ ಮಂಡಳಿ ತಿಳಿಸಿದೆ.

IPL 2021: ಚೆನ್ನೈ ನಾಯಕ ಧೋನಿಗೆ ಕಾಡಿದ ನಿಷೇಧ ಭೀತಿ; ಐಪಿಎಲ್​ ಮಂಡಳಿ ಎಚ್ಚರಿಕೆ
ಧೋನಿ
Edited By:

Updated on: Apr 12, 2021 | 8:04 AM

13ನೇ ಸೀಸನ್​ನಲ್ಲಿ ಹೀನಾಯ ಸೋಲು ಕಂಡಿದ್ದ ಚೆನ್ನೈ ಸೂಪರ್​ ಕಿಂಗ್ಸ್​ 14ನೇ ಸೀಸನ್​ನ ಮೊದಲ ಪಂದ್ಯದಲ್ಲೇ ಸೋತಿದೆ. ಸಿಎಸ್​ಕೆ ನಾಯಕ ಎಂ.ಎಸ್​​. ಧೋನಿ ಶೂನ್ಯ ಸುತ್ತಿದ್ದರು. ಇದಾದ ಬೆನ್ನಲ್ಲೇ ಧೋನಿಗೆ ಭಾರೀ ದಂಡ ಬಿದ್ದಿದೆ. ಧೋನಿಗೆ ಬರೋಬ್ಬರಿ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಅಷ್ಟೇ ಅಲ್ಲ, ಅವರಿಗೆ ನಿಷೇಧ ಭೀತಿ ಕೂಡ ಕಾಡಿದೆ.

ಮುಂಬೈನ ವಾಂಖೇಡೆ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಹಾಗೂ ಚೆನ್ನೈ ನಡುವೆ ಪಂದ್ಯ ನಡೆದಿತ್ತು. ಮೊದಲು ಟಾಸ್​ ಗೆದ್ದ ಡೆಲ್ಲಿ ನಾಯಕ ರಿಷಬ್​ ಪಂತ್​ ಬೌಲಿಂಗ್​ ಆಯ್ದುಕೊಂಡರು. ಮೊದಲು ಬ್ಯಾಟ್​ ಮಾಡಿದ ಚೆನ್ನೈ 188 ರನ್​ಗಳ ಟಾರ್ಗೆಟ್​ ನೀಡಿತ್ತು. ಈ ಟಾರ್ಗೆಟ್​ ಬೆನ್ನು ಹತ್ತಿದ ಡೆಲ್ಲಿ ಕೇವಲ 18.4ಓವರ್​ಗೆ 7 ವಿಕೆಟ್​ಗಳ ಗೆಲುವು ಕಂಡಿತ್ತು.

ಡೆಲ್ಲಿ ಬ್ಯಾಟ್​ ಮಾಡುವಾಗ ಚೆನ್ನೈ ನಿಧಾನವಾಗಿ ಬೌಲಿಂಗ್​ ಮಾಡಿತ್ತು. ಈ ಕಾರಣಕ್ಕೆ ಧೋನಿಗೆ ದಂಡ ವಿಧಿಸಲಾಗಿದೆ ಎಂದು ಐಪಿಎಲ್​ ಮಂಡಳಿ ತಿಳಿಸಿದೆ. ಒಂದೊಮ್ಮೆ ಇದು ಪುನರಾವರ್ತನೆ ಆದರೆ, ಅವರು ಒಂದು ಅಥವಾ ಎರಡು ಮ್ಯಾಚ್​ನಿಂದ ಅವರಿಗೆ ನಿರ್ಬಂಧ ಹೇರುವ ಅವಕಾಶ ಕೂಡ ಐಪಿಎಲ್​ ಮಂಡಳಿಗೆ ಇದೆ. ಈ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ.

ಒಂದೊಮ್ಮೆ ಈ ತಪ್ಪು ಮತ್ತೆ ಪುನರಾವರ್ತನೆ ಆದರೆ, 24 ಲಕ್ಷ ದಂಡ ಬೀಳಲಿದೆ. ಜತೆಗೆ ತಂಡದ ಪ್ರತಿ ಆಟಗಾರ 6 ಲಕ್ಷ ದಂಡ ಪಾವತಿ ಮಾಡಬೇಕು. ಮೂರನೇ ಬಾರಿಗೆ ವಿಳಂಬವಾದರೆ, ನಾಯಕನಿಗೆ 30 ಲಕ್ಷ ರೂಪಾಯಿ, ತಂಡದ ಉಳಿದ ಆಟಗಾರರಿಗೆ 12 ಲಕ್ಷ ದಂಡ ಬೀಳಲಿದೆ. ಜತೆಗೆ ಕ್ಯಾಪ್ಟನ್​ಗೆ​ ಒಂದು ಮ್ಯಾಚ್​ಗೆ ನಿಷೇಧ ಬೀಳಲಿದೆ.

ಐಪಿಎಲ್​ ಹೊಸ ನಿಯಮದ ಪ್ರಕಾರ 90 ನಿಮಿಷಕ್ಕೆ ಒಂದು ಸೈಡ್​ ಮ್ಯಾಚ್​ ಮುಗಿಸಬೇಕು. ಅಂದರೆ, ಒಂದು ಗಂಟೆಗೆ 14.1 ಓವರ್ ಪೂರ್ಣಗೊಳ್ಳಬೇಕು. ಆದರೆ, ಸಿಎಸ್​ಕೆ ಬೌಲಿಂಗ್​ ವೇಳೆ ಇದು ಸಾಧ್ಯವಾಗಿಲ್ಲ. ಅವರು ಬೌಲಿಂಗ್​ಗೆ ನಿಗದಿಗಿಂತ ಹೆಚ್ಚಿನ ಸಮಯ ತೆಗೆದುಕೊಂಡಿದ್ದಾರೆ. ಹೀಗಾಗಿ ದಂಡ ಹಾಕಲಾಗಿದೆ.

ಇದನ್ನೂ ಓದಿ: Dinesh Karthik IPL 2021 KKR Team Player: ಧೋನಿ ದಾಖಲೆ ಮುರಿಯುವ ಸನಿಹದಲ್ಲಿ ಕೆಕೆಆರ್​ನ ಮಾಜಿ ನಾಯಕ ದಿನೇಶ್ ಕಾರ್ತಿಕ್!

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us