
ಭಾರತದ ಹೆಮ್ಮೆಯ ಜಾವೆಲಿನ್ ತಾರೆ, ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಗಾಯದ ಸಮಸ್ಯೆಯಿಂದಾಗಿ 2026ರ ಏಷ್ಯನ್ ಗೇಮ್ಸ್ ಸೇರಿದಂತೆ ಮುಂಬರುವ ಎಲ್ಲಾ ಪ್ರಮುಖ ಕ್ರೀಡಾಕೂಟಗಳಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಇತ್ತೀಚೆಗಷ್ಟೇ ಲೌಸೇನ್ ಡೈಮಂಡ್ ಲೀಗ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದ ನೀರಜ್, ತರಬೇತಿ ಅವಧಿಯಲ್ಲಿ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಈ ಗಾಯದ ಕಾರಣ ಇದೀಗ ಏಷ್ಯನ್ ಗೇಮ್ಸ್‌ನಿಂದ ಹೊರಗುಳಿಯುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ಲೌಸೇನ್ ಡೈಮಂಡ್ ಲೀಗ್‌ನಲ್ಲಿ 88.05 ಮೀಟರ್ ದೂರ ಜಾವೆಲಿನ್ ಎಸೆದು ಈ ಸೀಸನ್‌ನ ಅತ್ಯುತ್ತಮ ಪ್ರದರ್ಶನ ನೀಡಿದ್ದ ನೀರಜ್ ಚೋಪ್ರಾ, ತದನಂತರದ ತರಬೇತಿ ಅವಧಿಯಲ್ಲಿ ತೀವ್ರ ಕಣಕಾಲು ಗಾಯಕ್ಕೆ ಒಳಗಾಗಿದ್ದಾರೆ. ವೈದ್ಯರ ಸಲಹೆಯ ಮೇರೆಗೆ ಅವರು ಸಂಪೂರ್ಣ ವಿಶ್ರಾಂತಿ ಮತ್ತು ಚಿಕಿತ್ಸೆಗೆ ಒಳಗಾಗಬೇಕಾಗಿರುವುದರಿಂದ, 2026ರ ಅಥ್ಲೆಟಿಕ್ಸ್ ಸೀಸನ್‌ನಿಂದ ಸಂಪೂರ್ಣವಾಗಿ ಹೊರಗುಳಿಯಲು ನಿರ್ಧರಿಸಿದ್ದಾರೆ.
ಏಷ್ಯನ್ ಗೇಮ್ಸ್‌ನಲ್ಲಿ ಹಾಲಿ ಚಾಂಪಿಯನ್ ಆಗಿದ್ದ ನೀರಜ್ ಚೋಪ್ರಾ ಅವರ ಅನುಪಸ್ಥಿತಿಯಿಂದಾಗಿ ಭಾರತಕ್ಕೆ ಜಾವೆಲಿನ್‌ನಲ್ಲಿ ದೊಡ್ಡ ಹಿನ್ನಡೆಯಾಗಿದೆ. ಈ ಗಾಯದಿಂದಾಗಿ ಅವರು ಈ ಕೆಳಗಿನ ಪ್ರಮುಖ ಟೂರ್ನಿಗಳಿಂದ ಹೊರಗುಳಿಯಲಿದ್ದಾರೆ.
ತಮ್ಮ ಗಾಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬೇಸರ ಹಂಚಿಕೊಂಡಿರುವ 28 ವರ್ಷದ ನೀರಜ್ ಚೋಪ್ರಾ, “ಪ್ರಮುಖ ಕ್ರೀಡಾಕೂಟಗಳು ಹತ್ತಿರವಿರುವಾಗ ಹೀಗಾಗಿರುವುದು ನಿಜಕ್ಕೂ ನಿರಾಶಾದಾಯಕ. ಆದರೆ ಸದ್ಯಕ್ಕೆ ಸಂಪೂರ್ಣ ಚೇತರಿಕೆಯತ್ತ ಗಮನಹರಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ಮುಂದಿನ ಸೀಸನ್‌ನಲ್ಲಿ ಮತ್ತಷ್ಟು ಬಲಿಷ್ಠವಾಗಿ ಕಣಕ್ಕೆ ಮರಳುವೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಇಂದಿನಿಂದ ಟೀಮ್ ಇಂಡಿಯಾದ ಏಷ್ಯಾಕಪ್ ಅಭಿಯಾನ ಶುರು
ನೀರಜ್ ಅಲಭ್ಯತೆಯಲ್ಲಿ ಈಗ ಭಾರತದ ಜಾವೆಲಿನ್ ಸವಾಲನ್ನು ಮುನ್ನಡೆಸುವ ಪ್ರಮುಖ ಜವಾಬ್ದಾರಿ ರೋಹಿತ್ ಯಾದವ್ ಅವರ ಮೇಲಿದೆ. ಭರ್ಜರಿ ಫಾರ್ಮ್ನಲ್ಲಿರುವ ರೋಹಿತ್ ಯಾದವ್, ಇತ್ತೀಚಿನ ಸರಣಿಯಲ್ಲಿ 87.68 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ತಮ್ಮ ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಈ ಸಾಧನೆಯೊಂದಿಗೆ ಅವರು ಭಾರತದ ಸಾರ್ವಕಾಲಿಕ ಎರಡನೇ ಅತ್ಯುತ್ತಮ ಜಾವೆಲಿನ್ ಎಸೆತಗಾರನಾಗಿ ಹೊರಹೊಮ್ಮಿದ್ದು, ಪ್ರಸಕ್ತ ಸೀಸನ್‌ನಲ್ಲಿ ಏಷ್ಯಾದಲ್ಲೇ 3ನೇ ಅತ್ಯುತ್ತಮ ಪ್ರದರ್ಶನ ಇವರದ್ದಾಗಿದೆ. ಹೀಗಾಗಿ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಪದಕ ತಂದುಕೊಡುವ ದೊಡ್ಡ ಭರವಸೆಯಾಗಿ ರೋಹಿತ್ ಯಾದವ್ ಕಾಣಿಸಿಕೊಂಡಿದ್ದಾರೆ.
Published On - 8:09 am, Sun, 30 August 26