AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿನಿಂದ ಟೀಮ್ ಇಂಡಿಯಾದ ಏಷ್ಯಾಕಪ್ ಅಭಿಯಾನ ಶುರು

ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಇಂದಿನಿಂದ (ಆಗಸ್ಟ್ 30) ಭಾರತೀಯ ಮಹಿಳಾ ತಂಡದ ಏಷ್ಯಾ ಕಪ್ ಅಭಿಯಾನ ಆರಂಭವಾಗಲಿದೆ. ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್ ತಂಡವನ್ನು ಎದುರಿಸಲಿದೆ. ಮೊದಲ ಸುತ್ತಿನಲ್ಲಿ ಭಾರತ ತಂಡವು ಸೆಣಸಾಡಲಿರುವ ಇತರೆ ತಂಡಗಳ ವಿವರ ಹಾಗೂ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.

ಇಂದಿನಿಂದ ಟೀಮ್ ಇಂಡಿಯಾದ ಏಷ್ಯಾಕಪ್ ಅಭಿಯಾನ ಶುರು
India vs ThailandImage Credit source: ACC
ಝಾಹಿರ್ ಯೂಸುಫ್
|

Updated on: Aug 30, 2026 | 7:49 AM

Share

ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದ 2026ರ ಮಹಿಳಾ ಟಿ20 ಏಷ್ಯಾ ಕಪ್ ಮಹಾಸಮರಕ್ಕೆ ಯುಎಇಯಲ್ಲಿ ಅದ್ಧೂರಿ ಚಾಲನೆ ಸಿಕ್ಕಿದೆ. ಆಗಸ್ಟ್ 28 ರಿಂದ ಸೆಪ್ಟೆಂಬರ್ 13 ರವರೆಗೆ ನಡೆಯಲಿರುವ ಈ ಟೂರ್ನಿಯಲ್ಲಿ ಏಷ್ಯಾದ ಬಲಿಷ್ಠ ಮಹಿಳಾ ಕ್ರಿಕೆಟ್ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಕಳೆದ ಬಾರಿ ರನ್ನರ್-ಅಪ್ ಆಗಿದ್ದ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಟೀಮ್ ಇಂಡಿಯಾ, ಈ ಬಾರಿ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರುವ ಬಲಿಷ್ಠ ಇರಾದೆಯೊಂದಿಗೆ ಕಣಕ್ಕಿಳಿಯುತ್ತಿದೆ.

ಇಂದಿನಿಂದ ಭಾರತದ ಅಭಿಯಾನ:

ಟೂರ್ನಿಯಲ್ಲಿ ಭಾರತ ತಂಡವನ್ನು ‘ಗ್ರೂಪ್ ಎ’ ನಲ್ಲಿ ಇರಿಸಲಾಗಿದ್ದು, ಈ ಗುಂಪಿನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್, ಥಾಯ್ಲೆಂಡ್ ಮತ್ತು ಹಾಂಗ್ ಕಾಂಗ್ ತಂಡಗಳು ಸ್ಥಾನ ಪಡೆದಿವೆ.

ಭಾರತ ತಂಡವು ಇಂದು (ಆಗಸ್ಟ್ 30, ಭಾನುವಾರ) ತನ್ನ ಮೊದಲ ಲೀಗ್ ಪಂದ್ಯದಲ್ಲಿ ಥಾಯ್ಲೆಂಡ್ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಹಾಗೆಯೇ ಸೆಪ್ಟೆಂಬರ್ 5 ರಂದು ನಡೆಯಲಿರುವ ಹೈ-ವೋಲ್ಟೇಜ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಅದರಂತೆ ಟೀಮ್ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…

ದಿನಾಂಕ / ದಿನ ಪಂದ್ಯ ಸಮಯ (IST) ಸ್ಟೇಡಿಯಂ
ಆಗಸ್ಟ್ 30, ಭಾನುವಾರ ಭಾರತ vs ಥಾಯ್ಲೆಂಡ್ ರಾತ್ರಿ 8:00 ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂ
ಸೆಪ್ಟೆಂಬರ್ 3, ಗುರುವಾರ ಭಾರತ vs ಹಾಂಗ್ ಕಾಂಗ್ ರಾತ್ರಿ 8:00 ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂ
ಸೆಪ್ಟೆಂಬರ್ 5, ಶನಿವಾರ ಭಾರತ vs ಪಾಕಿಸ್ತಾನ್ ರಾತ್ರಿ 8:00 ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂ
ಸೆಪ್ಟೆಂಬರ್ 10 – 11 ಸೆಮಿಫೈನಲ್ಸ್ (1 ಮತ್ತು 2) ರಾತ್ರಿ 8:00 ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂ
ಸೆಪ್ಟೆಂಬರ್ 13, ಭಾನುವಾರ ಮಹಾ ಫೈನಲ್ ಪಂದ್ಯ ರಾತ್ರಿ 8:00 ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂ

ನೇರ ಪ್ರಸಾರ ಎಲ್ಲಿ ವೀಕ್ಷಿಸಬಹುದು?

ಭಾರತದಲ್ಲಿ ಈ ಟೂರ್ನಿಯ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಟಿವಿ ಚಾನೆಲ್‌ಗಳಲ್ಲಿ ನೇರಪ್ರಸಾರ ವೀಕ್ಷಿಸಬಹುದು. ಹಾಗೆಯೇ ಡಿಸ್ನಿ+ ಹಾಟ್‌ಸ್ಟಾರ್ ಆ್ಯಪ್​ ಮತ್ತು ವೆಬ್​​ಸೈಟ್​ನಲ್ಲೂ ಲೈವ್ ಸ್ಟ್ರೀಮಿಂಗ್ ಇರಲಿದೆ.

ಇದನ್ನೂ ಓದಿ: Asian Games 2026: ಟೀಮ್ ಇಂಡಿಯಾ ವೇಳಾಪಟ್ಟಿ ಇಲ್ಲಿದೆ

ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್‌ಕೀಪರ್), ಗುಣಲನ್ ಕಮಲಿನಿ (ವಿಕೆಟ್‌ಕೀಪರ್), ಅರುಂಧತಿ ರೆಡ್ಡಿ, ಪ್ರೇಮಾ ರಾವತ್, ರಾಧಾ ಯಾದವ್, ರೇಣುಕಾ ಸಿಂಗ್ ಠಾಕೂರ್, ಶ್ರೀ ಚರಣಿ, ನಂದಿನಿ ಶರ್ಮಾ, ಕ್ರಾಂತಿ ಗೌಡ್, ಪ್ರತೀಕಾ ರಾವಲ್.

Follow Us