ವಿಶ್ವದ ನಂಬರ್ ಒನ್ ಶ್ರೇಯಾಂಕಿತ ಟೆನಿಸ್ ಆಟಗಾರ ಸರ್ಬಿಯಾದ ನೊವಾಕ್ ಜೋಕೊವಿಚ್ (Novak Djokovic) ಪ್ರತಿಷ್ಠಿತ ಅಮೆರಿಕ ಓಪನ್ ಪುರುಷರ ಸಿಂಗಲ್ಸ್ ಫೈನಲ್ (US Open Final) ಪಂದ್ಯದಲ್ಲಿ ಸೋಲಿನ ಆಘಾತ ಎದುರಿಸಿದರು. ರಷ್ಯಾದ ಡಾನಿಲ್ ಮಡ್ವೆಡೆವ್ (Daniil Medvedev) ಚೊಚ್ಚಲ ಗ್ರ್ಯಾನ್ ಸ್ಲಾಮ್ ಕಿರೀಟಕ್ಕೆ ಮುತ್ತಿಟ್ಟ ಸಾಧನೆ ಮಾಡಿದರು. ಫೈನಲ್ ಪಂದ್ಯ ನಡೆದ ಆರ್ಥುರ್ ಆಶ್ ಸ್ಟೇಡಿಯಂನಲ್ಲಿ ಜೋಕೊವಿಚ್ ಅವರು ರೋಜರ್ ಫೆಡರರ್ ಮತ್ತು ರಫೆಲ್ ನಡಾಲ್ನಷ್ಟು ಪ್ರಿತಿಸುವ ಅಭಿಮಾನಿ ಬಳಗವನ್ನು ಹೊಂದಿಲ್ಲ. ಆದರೆ, ಇದೇ ಮೊದಲ ಬಾರಿಗೆ ಜೋಕೊವಿಚ್ ಆರ್ಥುರ್ ಆಶ್ ಸ್ಟೇಡಿಯಂಗೆ ಫೈನಲ್ ಪಂದ್ಯಕ್ಕಾಗಿ ಕಾಲಿಟ್ಟ ಸಂದರ್ಭ ಇವರ ಹೆಸರನ್ನು ಕೂಗಿತು.
ಜೋಕೊವಿಚ್‌ಗೆ ಊಹಿಸಲಾಗದ ಬೆಂಬಲ ಸಿಕ್ಕಿತಾದರೂ ಇತಿಹಾಸ ಸೃಷ್ಟಿಸಲು ಸಾಧ್ಯವಾಗಲಿಲ್ಲ. ಮೊದಲ ಸೆಟ್ನಲ್ಲಿ 6-4, ಎರಡನೇ ಸೆಟ್ನಲ್ಲೂ 6-4 ಹಾಗೂ ಅಂತಿಮ ಮೂರನೇ ಸೆಟ್ನಲ್ಲೂ 6-4 ಪಾಯಿಂಟ್ಗಳ ಮುನ್ನಡೆ ಸಾಧಿಸಿ ರಷ್ಯಾದ ಎರಡನೇ ಶ್ರೇಯಾಂಕಿತ ಆಟಗಾರ ಮಡ್ವೆಡೆವ್ ಭರ್ಜರಿ ಜಯ ತಮ್ಮದಾಗಿಸಿದರು.
“I love you guys.”
All the feels from @DjokerNole to the fans in New York. pic.twitter.com/PnEHevMVKk
— US Open Tennis (@usopen) September 12, 2021
ಇದರೊಂದಿಗೆ ಜೋಕೊವಿಚ್, ದಾಖಲೆಯ 21ನೇ ಗ್ರ್ಯಾನ್ ಸ್ಲಾಮ್ ಗೆಲ್ಲುವ ಅವಕಾಶದಿಂದ ವಂಚಿತರಾಗಿದ್ದಾರೆ. ಈ ಮೂಲಕ ಪ್ರಸಕ್ತ ಸಾಲಿನಲ್ಲೇ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಎದುರಾದ ಸೋಲಿಗೆ ಮಡ್ವೆಡೆವ್ ಸೇಡು ತೀರಿಸಿಕೊಂಡರು. ಜೋಕೊವಿಚ್ ಇತಿಹಾಸದಲ್ಲೇ ಕ್ಯಾಲೆಂಡರ್ ಗ್ರ್ಯಾನ್ ಸ್ಲಾಮ್ ಸಾಧನೆ ಮಾಡಿದ ಮೂರನೇ ಕ್ರೀಡಾಪಟು ಎನಿಸಿಕೊಳ್ಳುವ ಸುವರ್ಣಾವಕಾಶದಿಂದ ವಂಚಿತರಾದರು.
ಪ್ರಸಕ್ತ ಸಾಲಿನಲ್ಲೇ ಆಸ್ಟ್ರೇಲಿಯಾ ಓಪನ್, ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್ ಗೆದ್ದಿರುವ ಜೋಕೊವಿಚ್‌ಗೆ ಅಮೆರಿಕ ಓಪನ್ ಫೈನಲ್‌ನಲ್ಲಿ ಅಚ್ಚರಿಯ ಸೋಲು ಎದುರಾಯಿತು. ಹಾಗೊಂದು ವೇಳೆ ಗೆಲುವು ದಾಖಲಿಸಿದ್ದರೆ ಡಾನ್ ಬಡ್ಜ್ (1938) ಹಾಗೂ ರಾಡ್ ಲೇವರ್ (1962 ಹಾಗೂ 1969) ಬಳಿಕ ಈ ಸಾಧನೆ ಮಾಡಿದ ಮೂರನೇ ಆಟಗಾರ ಎನಿಸಿಕೊಳ್ಳುತ್ತಿದ್ದರು.
ಈ ಸೋಲಿನ ಮಹತ್ವವನ್ನು ಅರಿತುಕೊಂಡಿರುವ ಜೋಕೊವಿಚ್, ಕೋರ್ಟ್ನಲ್ಲೇ ಕಣ್ಣೀರಿಟ್ಟ ಘಟನೆಯೂ ನಡೆಯಿತು. ಇದನ್ನು ಅರಗಿಸಿಕೊಳ್ಳುವುದು ಕಷ್ಟ ಎಂದಿದ್ದಾರೆ. ಆದರೂ ಕಠಿಣ ಟೂರ್ನಿಯಲ್ಲಿ ಮಾನಸಿಕವಾಗಿಯೂ ದೈಹಿಕವಾಗಿಯೂ ತಮ್ಮಿಂದಾಗುವ ಎಲ್ಲ ಪ್ರಯತ್ನವನ್ನು ಮಾಡಿದ್ದೇನೆ. ನ್ಯೂ ಯಾರ್ಕ್ನಲ್ಲಿ ಇಂಥಹ ಅನುಭವ ನನಗೆ ಎಂದೂ ಆಗಿರಲಿಲ್ಲ. ನನಗೆ ಇಷ್ಟೊಂದು ಪ್ರೋತ್ಸಾಹ ನೀಡಿದ ನಿಮಗೆಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ.
IPL 2021: ಐಪಿಎಲ್ ಇತಿಹಾಸದ ಬೆಸ್ಟ್ ಓಪನರ್ ಯಾರು ಗೊತ್ತಾ?
(Novak Djokovic struggled to control his tears after losing the mens singles US Open final)
Published On - 8:14 am, Mon, 13 September 21