Updated on:Sep 12, 2021 | 9:56 AM
ಈ ಬಾರಿಯ ಅಮೆರಿಕ ಓಪನ್ ಮಹಿಳೆಯರ ಸಿಂಗಲ್ಸ್ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆಲ್ಲುವ ಮೂಲಕ ಬ್ರಿಟನ್ನ 18 ವರ್ಷದ ಎಮ್ಮಾ ರಾಡುಕಾನು ನೂತನ ಇತಿಹಾಸ ನಿರ್ಮಿಸಿದ್ದಾರೆ.
ಈ ಮೂಲಕ ಟೆನಿಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕ್ವಾಲಿಫೈಯರ್, ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. 53 ವರ್ಷಗಳ ಬಳಿಕ ಪ್ರಶಸ್ತಿ ಗೆದ್ದ ಮೊದಲ ಬ್ರಿಟಿಷ್ ಮಹಿಳೆ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.
ಯುಎಸ್ ಮಹಿಳಾ ಸಿಂಗಲ್ಸ್ ನಲ್ಲಿ ಎಮ್ಮಾ ರಾಡುಕಾನು 6 -4, 6 -3 ನೇರ ಸೆಟ್ ಗಳಿಂದ ಕೆನಡಾದ ಲೀಲಾ ಫೆರ್ನಾಂಡೀಸ್ ವಿರುದ್ಧ ಜಯಗಳಿಸಿದ್ದಾರೆ.
150ನೇ ರ್ಯಾಂಕ್ ಆಟಗಾರ್ತಿ ಎಮ್ಮಾ, ಟೂರ್ನಿಯಲ್ಲಿ ಒಂದೇ ಒಂದು ಸೆಟ್ ಬಿಟ್ಟುಕೊಡದೇ ಗ್ರ್ಯಾನ್ ಸ್ಲಾಮ್ ಕಿರೀಟ ಗೆಲ್ಲುವ ಮೂಲಕ ಅಚ್ಚರಿ ಮೂಡಿಸಿದರು.
ಶ್ರೇಯಾಂಕ ರಹಿತ ಆಟಗಾರ್ತಿಯರು ಫೈನಲ್ನಲ್ಲಿ ಮುಖಾಮುಖಿಯಾಗಿದ್ದರು. ಅತ್ತ 19 ವರ್ಷದ ಲೇಲಾ ಫರ್ನಾಂಡೆಜ್, ಮಾಜಿ ಚಾಂಪಿಯನ್ ಜಪಾನ್ನ ನವೊಮಿ ಒಸಾಕ ಸೇರಿದಂತೆ ಪ್ರಮುಖ ಆಟಗಾರ್ತಿರನ್ನು ಪರಾಭವಗೊಳಿಸಿ ಫೈನಲ್ಗೆ ಪ್ರವೇಶಿಸಿದ್ದರು.
1968ರ ಬಳಿಕ ಅಮೆರಿಕನ್ ಓಪನ್ ಗೆದ್ದ ಬ್ರಿಟನ್ ಆಟಗಾರ್ತಿ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. ಹಾಗೆಯೇ 1977ರಲ್ಲಿ ವರ್ಜೀನಿಯಾ ವೇಡ್ ವಿಂಬಲ್ಡನ್ ಗೆದ್ದ ಬಳಿಕ ಸಿಂಗಲ್ಸ್ ಕಿರೀಟ ಗೆದ್ದ ಬ್ರಿಟನ್ ಆಟಗಾರ್ತಿ ಎನಿಸಿದ್ದಾರೆ.
Published On - 9:26 am, Sun, 12 September 21