AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

US Open Final: ಜೋಕೊವಿಚ್​ಗೆ ಅರಗಿಸಿಕೊಳ್ಳಲಾಗದ ಸೋಲು: ಕೋರ್ಟ್​ನಲ್ಲೇ ಕಣ್ಣೀರಿಟ್ಟ ವಿಶ್ವದ ನಂಬರ್ ಒನ್ ಟೆನಿಸಿಗ

Novak Djokovic: ಜೋಕೊವಿಚ್​ಗೆ ಊಹಿಸಲಾಗದ ಬೆಂಬಲ ಸಿಕ್ಕಿತಾದರೂ ಇತಿಹಾಸ ಸೃಷ್ಟಿಸಲು ಸಾಧ್ಯವಾಗಲಿಲ್ಲ. ಈ ಸೋಲಿನ ಮಹತ್ವವನ್ನು ಅರಿತುಕೊಂಡಿರುವ ಜೊಕೋವಿಚ್, ಕೋರ್ಟ್​ನಲ್ಲೇ ಕಣ್ಣೀರಿಟ್ಟ ಘಟನೆಯೂ ನಡೆಯಿತು.

US Open Final: ಜೋಕೊವಿಚ್​ಗೆ ಅರಗಿಸಿಕೊಳ್ಳಲಾಗದ ಸೋಲು: ಕೋರ್ಟ್​ನಲ್ಲೇ ಕಣ್ಣೀರಿಟ್ಟ ವಿಶ್ವದ ನಂಬರ್ ಒನ್ ಟೆನಿಸಿಗ
Novak Djokovic
TV9 Web
| Edited By: |

Updated on:Sep 13, 2021 | 8:16 AM

Share

ವಿಶ್ವದ ನಂಬರ್ ಒನ್ ಶ್ರೇಯಾಂಕಿತ ಟೆನಿಸ್ ಆಟಗಾರ ಸರ್ಬಿಯಾದ ನೊವಾಕ್ ಜೋಕೊವಿಚ್ (Novak Djokovic) ಪ್ರತಿಷ್ಠಿತ ಅಮೆರಿಕ ಓಪನ್ ಪುರುಷರ ಸಿಂಗಲ್ಸ್ ಫೈನಲ್ (US Open Final) ಪಂದ್ಯದಲ್ಲಿ ಸೋಲಿನ ಆಘಾತ ಎದುರಿಸಿದರು. ರಷ್ಯಾದ ಡಾನಿಲ್ ಮಡ್ವೆಡೆವ್ (Daniil Medvedev) ಚೊಚ್ಚಲ ಗ್ರ್ಯಾನ್ ಸ್ಲಾಮ್ ಕಿರೀಟಕ್ಕೆ ಮುತ್ತಿಟ್ಟ ಸಾಧನೆ ಮಾಡಿದರು. ಫೈನಲ್ ಪಂದ್ಯ ನಡೆದ ಆರ್ಥುರ್ ಆಶ್ ಸ್ಟೇಡಿಯಂನಲ್ಲಿ ಜೋಕೊವಿಚ್ ಅವರು ರೋಜರ್ ಫೆಡರರ್ ಮತ್ತು ರಫೆಲ್ ನಡಾಲ್​ನಷ್ಟು ಪ್ರಿತಿಸುವ ಅಭಿಮಾನಿ ಬಳಗವನ್ನು ಹೊಂದಿಲ್ಲ. ಆದರೆ, ಇದೇ ಮೊದಲ ಬಾರಿಗೆ ಜೋಕೊವಿಚ್ ಆರ್ಥುರ್ ಆಶ್ ಸ್ಟೇಡಿಯಂಗೆ ಫೈನಲ್ ಪಂದ್ಯಕ್ಕಾಗಿ ಕಾಲಿಟ್ಟ ಸಂದರ್ಭ ಇವರ ಹೆಸರನ್ನು ಕೂಗಿತು.

ಜೋಕೊವಿಚ್​ಗೆ ಊಹಿಸಲಾಗದ ಬೆಂಬಲ ಸಿಕ್ಕಿತಾದರೂ ಇತಿಹಾಸ ಸೃಷ್ಟಿಸಲು ಸಾಧ್ಯವಾಗಲಿಲ್ಲ. ಮೊದಲ ಸೆಟ್​ನಲ್ಲಿ 6-4, ಎರಡನೇ ಸೆಟ್​ನಲ್ಲೂ 6-4 ಹಾಗೂ ಅಂತಿಮ ಮೂರನೇ ಸೆಟ್​ನಲ್ಲೂ 6-4 ಪಾಯಿಂಟ್​ಗಳ ಮುನ್ನಡೆ ಸಾಧಿಸಿ ರಷ್ಯಾದ ಎರಡನೇ ಶ್ರೇಯಾಂಕಿತ ಆಟಗಾರ ಮಡ್ವೆಡೆವ್ ಭರ್ಜರಿ ಜಯ ತಮ್ಮದಾಗಿಸಿದರು.

ಇದರೊಂದಿಗೆ ಜೋಕೊವಿಚ್, ದಾಖಲೆಯ 21ನೇ ಗ್ರ್ಯಾನ್ ಸ್ಲಾಮ್ ಗೆಲ್ಲುವ ಅವಕಾಶದಿಂದ ವಂಚಿತರಾಗಿದ್ದಾರೆ. ಈ ಮೂಲಕ ಪ್ರಸಕ್ತ ಸಾಲಿನಲ್ಲೇ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಎದುರಾದ ಸೋಲಿಗೆ ಮಡ್ವೆಡೆವ್ ಸೇಡು ತೀರಿಸಿಕೊಂಡರು. ಜೋಕೊವಿಚ್ ಇತಿಹಾಸದಲ್ಲೇ ಕ್ಯಾಲೆಂಡರ್ ಗ್ರ್ಯಾನ್ ಸ್ಲಾಮ್ ಸಾಧನೆ ಮಾಡಿದ ಮೂರನೇ ಕ್ರೀಡಾಪಟು ಎನಿಸಿಕೊಳ್ಳುವ ಸುವರ್ಣಾವಕಾಶದಿಂದ ವಂಚಿತರಾದರು.

ಪ್ರಸಕ್ತ ಸಾಲಿನಲ್ಲೇ ಆಸ್ಟ್ರೇಲಿಯಾ ಓಪನ್, ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್ ಗೆದ್ದಿರುವ ಜೋಕೊವಿಚ್‌ಗೆ ಅಮೆರಿಕ ಓಪನ್ ಫೈನಲ್‌ನಲ್ಲಿ ಅಚ್ಚರಿಯ ಸೋಲು ಎದುರಾಯಿತು. ಹಾಗೊಂದು ವೇಳೆ ಗೆಲುವು ದಾಖಲಿಸಿದ್ದರೆ ಡಾನ್ ಬಡ್ಜ್ (1938) ಹಾಗೂ ರಾಡ್ ಲೇವರ್ (1962 ಹಾಗೂ 1969) ಬಳಿಕ ಈ ಸಾಧನೆ ಮಾಡಿದ ಮೂರನೇ ಆಟಗಾರ ಎನಿಸಿಕೊಳ್ಳುತ್ತಿದ್ದರು.

ಈ ಸೋಲಿನ ಮಹತ್ವವನ್ನು ಅರಿತುಕೊಂಡಿರುವ ಜೋಕೊವಿಚ್, ಕೋರ್ಟ್​ನಲ್ಲೇ ಕಣ್ಣೀರಿಟ್ಟ ಘಟನೆಯೂ ನಡೆಯಿತು. ಇದನ್ನು ಅರಗಿಸಿಕೊಳ್ಳುವುದು ಕಷ್ಟ ಎಂದಿದ್ದಾರೆ. ಆದರೂ ಕಠಿಣ ಟೂರ್ನಿಯಲ್ಲಿ ಮಾನಸಿಕವಾಗಿಯೂ ದೈಹಿಕವಾಗಿಯೂ ತಮ್ಮಿಂದಾಗುವ ಎಲ್ಲ ಪ್ರಯತ್ನವನ್ನು ಮಾಡಿದ್ದೇನೆ. ನ್ಯೂ ಯಾರ್ಕ್​ನಲ್ಲಿ ಇಂಥಹ ಅನುಭವ ನನಗೆ ಎಂದೂ ಆಗಿರಲಿಲ್ಲ. ನನಗೆ ಇಷ್ಟೊಂದು ಪ್ರೋತ್ಸಾಹ ನೀಡಿದ ನಿಮಗೆಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ.

Novak Djokovic: ಇತಿಹಾಸ ಸೃಷ್ಟಿಸುವಲ್ಲಿ ಎಡವಿದ ಜೋಕೊವಿಚ್: ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಗೆದ್ದ ಡಾನಿಲ್‌ ಮಡ್ವೆಡೆವ್‌

IPL 2021: ಐಪಿಎಲ್ ಇತಿಹಾಸದ ಬೆಸ್ಟ್ ಓಪನರ್ ಯಾರು ಗೊತ್ತಾ?

(Novak Djokovic struggled to control his tears after losing the mens singles US Open final)

Published On - 8:14 am, Mon, 13 September 21

Follow Us
Web contact
Web contact

TV9 Kannada

Read More
ಸಾವಿರಾರು ಕೋಟಿ ರೂ.ವಂಚನೆ:ಶಿವಂ ಅಸೋಸಿಯೇಟ್ ಮೇಲೆ ದಾಳಿ
ಸಾವಿರಾರು ಕೋಟಿ ರೂ.ವಂಚನೆ:ಶಿವಂ ಅಸೋಸಿಯೇಟ್ ಮೇಲೆ ದಾಳಿ
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!