ಅರ್ಜಿಂಟಿನಾದ ಖ್ಯಾತ ಫೂಟ್ಬಾಲ್ ಆಟಗಾರ ಡಿಯೇಗೋ ಮೆರಡೋನ(Diego Maradona) ಈಗಿಲ್ಲ. ಕಳೆದ ವರ್ಷ ನವೆಂಬರ್ 25ರಂದು ಮೃತರಾಗಿದ್ದಾರೆ. ಆದರೆ ಅವರು ಇಲ್ಲದಿದ್ದರೂ ಮಹಿಳೆಯೊಬ್ಬರ ಈಗ ಅವರ ಮೇಲೆ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಮಾವಿಸ್ ಅಲ್ವಾರೆಜ್ ಎಂಬ ಕ್ಯೂಬಾ ದೇಶದ ಮಹಿಳೆ, ಡಿಯೇಗೋ ಮೆರಡೋನ ವಿರುದ್ಧ ಆರೋಪ ಮಾಡಿ ಸುದ್ದಿಯಾಗಿದ್ದಾರೆ. ತಾನು 16ನೇ ವಯಸ್ಸಿನಲ್ಲಿದ್ದಾರೆ ಡಿಯೇಗೋ ತನ್ನ ಮೇಲೆ ಅತ್ಯಾಚಾರ ಮಾಡಿದ್ದರು. ಈ ಮೂಲಕ ನನ್ನ ಬಾಲ್ಯವನ್ನು ಕರಾಳವಾಗಿಸಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಾವಿಸ್ ಅಲ್ವಾರೆಜ್ಗೆ ಈಗ 37ವರ್ಷ. ಮೆರಡೋನಾ ತನ್ನ ಮೇಲೆ ರೇಪ್ ಮಾಡಿದ್ದಾರೆ ಎಂಬುದಕ್ಕೆ ಅರ್ಜಿಂಟಿನಾದ ನ್ಯಾಯಾಂಗ ಸಚಿವಾಲಯ ಕೋರ್ಟ್ಗೆ ಕಳೆದವಾರವೇ ಮಾವಿಸ್ ಸಾಕ್ಷಿಗಳನ್ನೂ ನೀಡಿದ್ದಾರೆ. ಇನ್ನು ಮೆರಡೋನಾ ಅವರಿದ್ದಾಗ ಅವರೊಂದಿಗೆ ಇದ್ದ ಆಪ್ತರ ವಿರುದ್ಧ ಕಳ್ಳಸಾಗಣೆ ಆರೋಪ ಕೇಳಿಬಂದಿದ್ದು, ಅದರ ವಿರುದ್ಧವೂ ಜಸ್ಟೀಸ್ ಕೋರ್ಟ್ ಸಚಿವಾಲಯ ತನಿಖೆ ನಡೆಸುತ್ತಿದೆ.
ನಾನು 16ವರ್ಷದವಳಿದ್ದಾಗ ಮೆರಡೋನಾ 40ನೇ ವರ್ಷದಲ್ಲಿದ್ದರು. ನನ್ನ 16ನೇ ವಯಸ್ಸಿನಲ್ಲಿ ನಾನು ಅರ್ಜಿಂಟಿನಾಕ್ಕೆ ಭೇಟಿ ನೀಡಿದ್ದೆ. ಅದಕ್ಕೂ ಮೊದಲು ಅವರು ಮಾದಕ ವ್ಯಸನ ಬಿಡಲು ತೆಗೆದುಕೊಳ್ಳುತ್ತಿದ್ದ ಚಿಕಿತ್ಸೆಗಾಗಿ ಕ್ಯೂಬಾಕ್ಕೆ ಬಂದಾಗ ನಾನವರನ್ನು ಭೇಟಿಯಾಗಿದ್ದೆ. ಆಗ ಅವರು ಹವಾನಾ ಎಂಬ ಆಸ್ಪತ್ರೆಯಲ್ಲಿದ್ದರು. ಅದೇ ಕ್ಲಿನಿಕ್ನಲ್ಲಿ ನನ್ನ ಮೇಲೆ ರೇಪ್ ಮಾಡಿದ್ದರು. ಆ ವೇಳೆ ಅವರ ತಾಯಿ ಪಕ್ಕದ ಕೋಣೆಯಲ್ಲಿ ಇದ್ದರು ಎಂದು ತಿಳಿಸಿದ್ದಾರೆ. ಅಂದು ಖ್ಯಾತ ಫೂಟ್ಬಾಲ್ ಆಟಗಾರ ನನ್ನ ಬಾಯಿಯನ್ನು ತನ್ನ ಕೈಯಿಂದ ಮುಚ್ಚಿ ಅತ್ಯಾಚಾರ ಮಾಡಿದ. ಈ ಬಗ್ಗೆ ಇಂದು ಯೋಚಿಸಲೂ ಸಾಧ್ಯವಾಗುತ್ತಿಲ್ಲ. ಆಗಲೇ ನನ್ನ ಮುಗ್ಧತೆ ಸತ್ತು ಹೋಯಿತು ಎಂದು ಮಾವಿಸ್ ಹೇಳಿಕೊಂಡಿದ್ದಾರೆ.
ಮೆರಡೋನಾರನ್ನು ಅರ್ಜಿಂಟಿನಾದಲ್ಲಿ ದೇವರಂತೆ ನೋಡಲಾಗುತ್ತದೆ. ಅವನಿದ್ದ ಈ ದೇಶದಲ್ಲಿ ನನಗಂತೂ ಇರಲು ಕಷ್ಟ. ಎಲ್ಲಿ ನೋಡಿದರೂ ಅವನೇ ಇದ್ದಂತೆ ಅನ್ನಿಸುತ್ತದೆ. ಆದರೆ ಈಗ ಅವರ ಆಪ್ತರ ವಿರುದ್ಧ ಕಳ್ಳಸಾಗಣೆಗೆ ಸಂಬಂಧಪಟ್ಟಂತೆ ತನಿಖೆ ನಡೆಯುತ್ತಿದೆ. ಇದೇ ವೇಳೆ ನಾನೂ ದೂರು ನೀಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆದರೆ ಈ ಮಹಿಳೆಯ ಆರೋಪದ ಸಂಬಂಧ ಕ್ಯೂಬಾ ಸರ್ಕಾರ ಇನ್ನೂ ಏನೂ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ: ಐಸಿಐಸಿಐ ಎಟಿಎಂ ದೋಚಲು ಬಂದಿದ್ದ ದುಷ್ಕರ್ಮಿಗಳಿಂದ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ಬರ್ಬರ ಹತ್ಯೆ?
Published On - 9:50 am, Tue, 23 November 21