ವಿರಾಟ್ ಕೊಹ್ಲಿ ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ ಅನ್ನೋದು ಕ್ರಿಕೆಟ್ ಜಗತ್ತಿಗೆ ಗೊತ್ತಿರೋ ಸಂಗತಿ. ಹಾಗಿದ್ರೂ ಕೆಲ ಯುವ ಬೌಲರ್ಗಳು ಕೊಹ್ಲಿ ವಿಚಾರದಲ್ಲಿ ಇಲ್ಲ ಸಲ್ಲದ ಹೇಳಿಕೆ ನೀಡಿ ಮೈಲೇಜ್ ಗಿಟ್ಟಿಸಿಕೊಳ್ತಾರೆ. ಅದ್ರಲ್ಲೂ ಪಾಕಿಸ್ತಾನ ತಂಡದ ಯುವ ಬೌಲರ್ಗಳು ಕೊಹ್ಲಿಯನ್ನ ಕೆಣಕಿ ಮಾಂಜಾ ತಿಂತಾನೇ ಇದ್ದಾರೆ. ಇದೀಗ ಪಾಕಿಸ್ತಾನ ತಂಡದ 17 ವರ್ಷದ ಯುವ ವೇಗಿ ನಸೀಮ್ ಶಾ, ಗೊತ್ತಿದ್ದು ಗೊತ್ತಿದ್ದೂ ಕ್ಯಾಪ್ಟನ್ ಕೊಹ್ಲಿ ವಿರುದ್ಧವೇ ತೊಡೆ ತಟ್ಟಿದ್ದಾನೆ.
ಖಾಸಗಿ ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಸೀಮ್ ಶಾ, ಇಂಡೋ-ಪಾಕ್ ಪಂದ್ಯವನ್ನ ಆಡಲು ಎದುರು ನೋಡುತ್ತಿದ್ದೇನೆ. ಟೀಮ್ ಇಂಡಿಯಾದಲ್ಲಿ ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ಗಳಿದ್ದಾರೆ. ಅವರ ವಿರುದ್ಧ ಬೌಲಿಂಗ್ ಮಾಡೋ ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ಅದರಲ್ಲೂ ಟೀಮ್ ಇಂಡಿಯಾ ನಾಯಕ ಸವಾಲೆಸೆಯಲು ರೆಡಿಯಾಗಿದ್ದೇನೆ ಅಂತಾ ನಸೀಮ್ ಶಾ ಹೇಳಿದ್ದಾನೆ.
ಕೊಹ್ಲಿಗೆ ಬೌಲಿಂಗ್ ಮಾಡೋದೇ ಬಿಗ್ ಚಾಲೆಂಜ್
ವಿರಾಟ್ ಕೊಹ್ಲಿಯನ್ನ ನಾನು ಗೌರವಿಸುತ್ತೇನೆ. ಆದ್ರೆ ಕೊಹ್ಲಿಯನ್ನ ಕಂಡ್ರೆ ನನಗೆ ಭಯವಿಲ್ಲ. ಕೊಹ್ಲಿಗೆ ಬೌಲಿಂಗ್ ಮಾಡೋದೇ ಬಿಗ್ ಚಾಲೆಂಜ್. ಬೆಸ್ಟ್ ಬ್ಯಾಟ್ಸ್ಮನ್ಗಳ ವಿರುದ್ಧ ಬೌಲಿಂಗ್ ಮಾಡಿದ್ರೆನೇ, ನಮ್ಮ ಸಾಮರ್ಥ್ಯ ಏನು ಅನ್ನೋದು ಗೊತ್ತಾಗುತ್ತೆ. ಇದರಿಂದ ನಮ್ಮ ಬೌಲಿಂಗ್ ಸಹ ಇಂಪ್ರೂವ್ ಆಗುತ್ತದೆ. ಹೀಗಾಗಿ ನಾನು ಕೊಹ್ಲಿ ವಿರುದ್ಧ ಬೌಲಿಂಗ್ ಮಾಡಲು ಎದುರು ನೋಡುತ್ತಿದ್ದೇನೆ. ಅಂತಾ ನಸೀಮ್ ಶಾ ಹೇಳಿಕೊಂಡಿದ್ದಾನೆ.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ನಸೀಮ್ ಶಾ, ಇಂಪ್ರೆಸಿವ್ ಬೌಲಿಂಗ್ ಮಾಡಿ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದ. ನಂತರ ಬಾಂಗ್ಲಾದೇಶ ಮತ್ತು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಶಾ, ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ ದಿಗ್ಗಜ ಬೌಲರ್ಗಳಿಂದಲೇ ಶಹಬ್ಬಾಷ್ಗಿರಿ ಗಿಟ್ಟಿಸಿಕೊಂಡಿದ್ದ.
ಆದ್ರೀಗ ಕ್ಯಾಪ್ಟನ್ ಕೊಹ್ಲಿಗೇ ಸವಾಲ್ ಹಾಕಿ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದಾನೆ. ಆದ್ರೆ ವಿರಾಟ್ ಮಾತಿಗೆ ಪ್ರತಿ ಮಾತು ಬೆಳೆಸೋ ಸ್ವಭಾವದವರಲ್ಲ. ಅಂಹಕಾರದ ಮಾತಿಗೆ ತಿರಗೇಟು ಕೊಡೋದು ಏನಿದ್ರೂ, ಮೈದಾನದಲ್ಲಿ ಬ್ಯಾಟ್ನಿಂದಲೇ ಅನ್ನೋದನ್ನ ನಸೀಮ್ ಮರೆತಂತಿದೆ ಪಾಪ.
Published On - 2:42 pm, Wed, 3 June 20