ನಾನು ಭಾರತ ತಂಡದ ನಾಯಕನಾಗೋದ್ರ ಹಿಂದೆ ಇವರ ಪಾತ್ರವಿದೆ -ಕೊಹ್ಲಿ

| Updated By:

Updated on: Jun 01, 2020 | 5:25 PM

ಮಹೇಂದ್ರ ಸಿಂಗ್ ಧೋನಿ ನಾಯಕತ್ವಕ್ಕೆ ಗುಡ್ ಬೈ ಹೇಳಿದ ಬಳಿಕ ಟೀಮ್ ಇಂಡಿಯಾ ನಾಯಕನಾಗಿ ರನ್ ಮಷೀನ್ ವಿರಾಟ್ ಕೊಹ್ಲಿ ಯಶಸ್ಸು ಕಾಣುತ್ತಿದ್ದಾರೆ. ದೇಶ ವಿದೇಶಗಳಲ್ಲಿ ಕ್ಯಾಪ್ಟನ್ ಕೊಹ್ಲಿ ವಿರಾಟ ರೂಪ ತೋರಿಸಿ, ಭಾರತೀಯ ಕ್ರಿಕೆಟ್​ನ ಹಿರಿಮೆಯನ್ನ ಹೆಚ್ಚಿಸುತ್ತಿದ್ದಾರೆ. ಆದ್ರೀಗ ವಿರಾಟ್ ಕೊಹ್ಲಿ ತಾನು ನಾಯಕತ್ವದಲ್ಲಿ ಯಶಸ್ಸು ಕಾಣೋದಕ್ಕೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕಾರಣ ಅನ್ನೋ ಸಂಗತಿಯನ್ನ ಬಿಚ್ಚಿಟ್ಟಿದ್ದಾರೆ. ಇನ್ಸ್​ಟಾಗ್ರಾಮ್​ನಲ್ಲಿ ಆರ್​.ಅಶ್ವಿನ್ ಜೊತೆಗೆ ಮಾತನಾಡೋ ಸಂದರ್ಭದಲ್ಲಿ ವಿರಾಟ್, ಧೋನಿ ಹೇಗೆ ತನ್ನ ನಾಯಕತ್ವದ ಯಶಸ್ಸಿಗೆ […]

ನಾನು ಭಾರತ ತಂಡದ ನಾಯಕನಾಗೋದ್ರ ಹಿಂದೆ ಇವರ ಪಾತ್ರವಿದೆ -ಕೊಹ್ಲಿ
ಕೊಹ್ಲಿ, ಧೋನಿ
Follow us on

ಮಹೇಂದ್ರ ಸಿಂಗ್ ಧೋನಿ ನಾಯಕತ್ವಕ್ಕೆ ಗುಡ್ ಬೈ ಹೇಳಿದ ಬಳಿಕ ಟೀಮ್ ಇಂಡಿಯಾ ನಾಯಕನಾಗಿ ರನ್ ಮಷೀನ್ ವಿರಾಟ್ ಕೊಹ್ಲಿ ಯಶಸ್ಸು ಕಾಣುತ್ತಿದ್ದಾರೆ. ದೇಶ ವಿದೇಶಗಳಲ್ಲಿ ಕ್ಯಾಪ್ಟನ್ ಕೊಹ್ಲಿ ವಿರಾಟ ರೂಪ ತೋರಿಸಿ, ಭಾರತೀಯ ಕ್ರಿಕೆಟ್​ನ ಹಿರಿಮೆಯನ್ನ ಹೆಚ್ಚಿಸುತ್ತಿದ್ದಾರೆ.

ಆದ್ರೀಗ ವಿರಾಟ್ ಕೊಹ್ಲಿ ತಾನು ನಾಯಕತ್ವದಲ್ಲಿ ಯಶಸ್ಸು ಕಾಣೋದಕ್ಕೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕಾರಣ ಅನ್ನೋ ಸಂಗತಿಯನ್ನ ಬಿಚ್ಚಿಟ್ಟಿದ್ದಾರೆ. ಇನ್ಸ್​ಟಾಗ್ರಾಮ್​ನಲ್ಲಿ ಆರ್​.ಅಶ್ವಿನ್ ಜೊತೆಗೆ ಮಾತನಾಡೋ ಸಂದರ್ಭದಲ್ಲಿ ವಿರಾಟ್, ಧೋನಿ ಹೇಗೆ ತನ್ನ ನಾಯಕತ್ವದ ಯಶಸ್ಸಿಗೆ ಕಾರಣವಾದ್ರು ಅನ್ನೋ ಸಂಗತಿಯನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಕೆಲವೊಂದು ವಿಚಾರಗಳನ್ನ ಒಪ್ಪಿಕೊಳ್ಳುತ್ತಿರಲಿಲ್ಲ:
ನಾನು ಟೀಮ್ ಇಂಡಿಯಾವನ್ನ ಪ್ರತಿನಿಧಿಸೋಕೆ ಶುರುಮಾಡಿದಾಗಿನಿಂದಲೂ, ಧೋನಿಗೆ ಕೂಗಳೆತೆಯ ದೂರದಲ್ಲೇ ಇರುತ್ತಿದೆ. ನಾನು ತುಂಬಾ ವಿಷಯಗಳ ಬಗ್ಗೆ ಧೋನಿ ಬಳಿ ಚರ್ಚಿಸುತ್ತಿದ್ದೆ. ಕೆಲವೊಂದು ವಿಚಾರಗಳನ್ನ ಮಾಹಿ, ಯಾವುದೇ ಮುಲಾಜಿಲ್ಲದೇ ಒಪ್ಪಿಕೊಳ್ಳುತ್ತಿರಲಿಲ್ಲ. ಒಂದು ವೇಳೆ ನಾನು ಹೇಳಿದ ವಿಚಾರ ಅವರಿಗೆ ಇಷ್ಟವಾದ್ರೆ, ಅದರ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡುತ್ತಿದ್ರು. ಅವರು ನನ್ನನ್ನ ಯಾವತ್ತೂ ಸೂಕ್ಷ್ಮವಾಗಿ ಗಮನಿಸುತ್ತಿದ್ರು. ನಾನು ಅವರಿಂದ ಕಲಿಯುತ್ತಲೇ ಇದ್ದೆ. ಬಹುಶಃ ಇದು ತಂಡವನ್ನ ಮುನ್ನಡೆಸುವ ಮುಂದಿನ ವ್ಯಕ್ತಿ ನಾನೇ ಎಂಬ ನಂಬಿಕೆ ಮತ್ತು ವಿಶ್ವಾಸವನ್ನು ನನಗೆ ನೀಡಿರಬಹುದು ಎಂದಿದ್ದಾರೆ.

ನನ್ನ ಪ್ರಕಾರ ಆಯ್ಕೆ ಸಮಿತಿ ಏಕಾಏಕಿ ನನ್ನನ್ನ ನಾಯಕನನ್ನಾಗಿ ನೇಮಿಸಿದೆ ಎಂದು ನಾನು ಭಾವಿಸೋದಿಲ್ಲ. ಯಾಕಂದ್ರೆ ಧೋನಿಯಿಂದ ಅವರು ಪ್ರತಿಕ್ರಿಯೆಯನ್ನ ಪಡೆದೇ ಇರ್ತಾರೆ. ಹೀಗೆ ನಾನು ನಾಯಕನಾಗೋದ್ರ ಹಿಂದೆ ಧೋನಿ ಮಹತ್ವವಾದ ಪಾತ್ರವನ್ನ ನಿಭಾಯಿಸಿದ್ದಾರೆ ಎಂದು ಕೊಹ್ಲಿ ಅಶ್ವಿನ್ ಬಳಿ ಹೇಳಿಕೊಂಡಿದ್ದಾರೆ.

2014ರಲ್ಲಿ ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದ ಬಳಿಕ ನಾಯಕತ್ವ ವಹಿಸಿಕೊಂಡ ವಿರಾಟ್, 2017ರಲ್ಲಿ ಏಕದಿನ ಮತ್ತು ಟಿಟ್ವೆಂಟಿ ತಂಡದ ನಾಯಕನಾಗಿಯೂ ಚುಕ್ಕಾಣಿ ಹಿಡಿದ್ರು.