ಪಾಕಿಸ್ತಾನ ಕ್ರಿಕೆಟಿಗರಿಗೆ ಈಗ ಮತ್ತೋಂದು ಹೊಟ್ಟೆ ಸಂಕಟ ಎದುರಾಗಿದೆ. ಇವರಾಡೋ ಆಟಕ್ಕೆ ಇವರು ಇಷ್ಟಪಟ್ಟು ತಿನ್ನುತಿದ್ದ ಬಿರಿಯಾನಿ, ಐಸ್ ಕ್ರೀಮ್, ಫಿಜ್ಜಾವನ್ನ ನೋಡಿದಕೂಡಲೇ ಓಡುವ ಪರಿಸ್ಥಿತಿ ಎದುರಾಗಿದೆ. ಇದೇನಪ್ಪ ಪಾಕಿಸ್ತಾನ್ ಆಟಗಾರರಿಗೆ ಫುಡ್ ಪೈಸನ್ ಆಯ್ತಾ ಅಂದುಕೊಂಡ್ರ.. ತಪ್ಪು ಇದು ಅವರ ಕೋಚ್ ನೀಡಿರುವ ಪ್ರೀತಿಯ ಖಡಕ್ ‘ಉಡುಗೊರೆ’.
ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡದ ಸೋಲಿಗೆ ಫಿಟ್ ನೆಸ್ ಮುಖ್ಯ ಕಾರಣವಾಗಿತ್ತು, ವಿಶ್ವಕಪ್ ನಂತಹ ಮಹಾಯುದ್ಧದಲ್ಲಿ ಸರಿಯಾದ ಫಿಟ್ ನೆಸ್ ಮೈನ್ ಟೈನ್ ಮಾಡದೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ರು. ಅದರಲ್ಲೂ ಪಾಕ್ ಕ್ಯಾಪ್ಟನ್ ಸರ್ಫರಾಜ್ ಅಹಮದ್ ಮೈದಾನದಲ್ಲೇ ಆಕಲಿಸಿ ನಗೆಪಾಟಲಿಗಿಡಾಗಿದ್ದ. ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ವಿರುದ್ಧದ ಪಂದ್ಯಕ್ಕು ಮುನ್ನ ಪಾಕಿಸ್ತಾನ್ ಆಟಗಾರರು ಇಂಗ್ಲೇಡ್ ನ ಶೀಶ ಕೆಫೆಯಲ್ಲಿ ಮೋಜು ಮಸ್ತಿ ಮಾಡಿದ್ರು, ಈ ವಿಡಿಯೋ ಪಾಕಿಸ್ತಾನಿ ಅಭಿಮಾನಿಗಳ ಮನಸ್ಸಿಗೆ ಭಾರಿ ನೋವನುಂಟು ಮಾಡಿತ್ತು.
ಹೀಗೆ ಫಿಟ್ ನೆಸ್ ಮೈನ್ ಟೈನ್ ಮಾಡದೆ ಬೇಕ ಬಿಟ್ಟಿಯಾಗಿ ಆಟ ಆಡುತ್ತಿದ್ದವರನ್ನ ಸರಿ ದಾರಿಗೆ ತರಲು ಪಾಕಿಸ್ತಾನ ಕ್ರಿಕೆಟ್ ಮಂಡಲಿ ಭಾರಿ ಬದಲಾವಣೆಗೆ ಮುಂದಾಗಿತ್ತು. BCB ಮುಖ್ಯಕೋಚ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥನ ಸ್ಥಾನವನ್ನ ಈ ಮೊದಲು ತಂಡದಲ್ಲಿ ಫಿಟ್ ನೆಸ್ ಕಪಾಡಿಕೊಂಡಿದ್ದ ಮಾಜಿ ನಾಯಕ ಮಿಜ್ಬಾ ಉಲ್ ಹಕ್ ಗೆ ನೀಡಿತ್ತು. ಈಗ ಪಾಕಿಸ್ತಾನ ತಂಡದ ಕೋಚ್ ಜವಾಬ್ದಾರಿ ಹೊತ್ತ ಮಿಜ್ಬಾ ಮೊದಲ ಪಾಠವಾಗಿ ಫಿಟ್ ನೆಸ್ ಮಂತ್ರವನ್ನ ಹೇಳಿಕೊಡೋದಕ್ಕೆ ಮುಂದಾಗಿದ್ದಾರೆ. ಕೋಚ್ ನ ಫಿಟ್ ನೆಸ್ ರೋಲ್ಸ್ ನೋಡಿ ಪಾಕಿಸ್ತಾನ ಕ್ರಿಕೇಟಿಗರು ಬೆಚ್ಚಿ ಬಿದ್ದಿದ್ದಾರೆ.
ಸರ್ಫರಾಜ್ ಪಡೆಗೆ ಬಿರಿಯಾನಿ ಬ್ಯಾನ್
ಇನ್ಮುಂದೆ ಪಾಕಿಸ್ತಾನ ಕ್ರಿಕೆಟಿಗರು ಬಿರಿಯಾನಿ, ಜಗ್ ಪುಡ್, ಆಯಿಲ್ ಫುಡ್ ತಿನ್ನಲೇಬಾರದು ಎಂದು ಕೋಚ್ ಮಿಜ್ಬ ಆಜ್ಞೆ ನೀಡಿದ್ದಾರೆ. ಇನ್ನು ಪಾಕಿಸ್ತಾನದ ತಂಡದ ಪ್ರತಿಯೊಬ್ಬ ಆಟಗಾರನಿಗೂ ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು ಎಂದು ಡಯಟ್ ಪ್ಲಾನನ್ನ ನೀಡಿದ್ದಾರೆ. ಇನ್ನೇನಾದರು ಈ ಡಯಟ್ ಪಾಲಿಸದಿದ್ದಲ್ಲಿ ಅವರಿಗೆ ತಂಡದಿಂದ ಹೊರ ಹೋಗಬಹುದು ಎಂದಿದ್ದಾರೆ. ಚನ್ನಾಗಿ ತಿಂದು ದೇಹ ಬೆಳಸಿದ್ದವರಿಗೆ ಈಗ ದೊಡ್ಡ ಶಾಕ್ ಸಿಕ್ಕಿದೆ. ಆದರೆ ಮುಂದೆ ಸರ್ಫರಾಜ್ ಪಡೆ ಎಷ್ಟರ ಮಟ್ಟಿಗೆ ಇದನ್ನ ಪಾಲಿಸುತ್ತೋ.. !?