ಸುದೀರ್ಘ ವೆಸ್ಟ್ ಇಂಡೀಸ್ ಪ್ರವಾಸದ ಬಳಿಕ ಕೊಂಚ ವಿಶ್ರಾಂತಿ ಪಡೆದಿದ್ದ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ ಇದೀಗ ಮತ್ತೆ ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಭಾರತ ತಂಡವನ್ನು ಸೇರಿಕೊಂಡಿದ್ದಾರೆ. ಅತ್ತ, ಮಳೆಯಿಂದ ಪಂದ್ಯ ರದ್ದಾಗಿದ್ದು ಹಾರ್ದಿಕ್ ಪಾಂಡ್ಯಾ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗ್ತಿದ್ದಾರೆ. ಟೀಂ ಇಂಡಿಯಾದ ನೂತನ ಜರ್ಸಿ, ಮತ್ತು ಹೊಸ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಂಡು ಟ್ರೋಲಿಗರ ಕಣ್ಣಿಗೆ ಆಹಾರವಾಗಿದ್ದಾರೆ.
ಕಾಫಿ ವಿಥ್ ಕರಣ್ ರಿಯಾಲಿಟಿ ಶೋನಲ್ಲಿ ವಿವಾದಿತ ಹೇಳಿಕೆ ನೀಡೋ ಮೂಲಕ ಟೀಕೆಗೆ ಗುರಿಯಾಗಿದ್ದ ಪಾಂಡ್ಯಾ, ಗುಣಮಟ್ಟದ ಶಿಕ್ಷಣ ಪಡೆದಿಲ್ಲ. ನಾನು 10ನೇ ಕ್ಲಾಸ್ ಪಾಸಾಗಿಲ್ಲ ಎಂದು ಹೇಳಿಕೊಂಡಿದ್ದರು. ಇದು ಯಡವಟ್ಟಿಗೆ ಕಾರಣವಾಗಿದ್ದು, ವಿವಾದವೂ ಸೃಷ್ಟಿಯಾಗಿದೆ. ಜೊತೆಗೆ ಅವರೀಗ ಖಾಸಗಿ ಶಿಕ್ಷಣ ಸಂಸ್ಥೆಯ ರಾಯಭಾರಿಯೂ ಆಗಿ ಪರಿವರ್ತನೆಗೊಂಡಿದ್ದಾರೆ. ಹಾಗಾಗಿ, ಶಿಕ್ಷಣ ಪಡೆಯದ ವ್ಯಕ್ತಿ ಶಿಕ್ಷಣ ಸಂಸ್ಥೆಯ ರಾಯಭಾರಿ ಎಂದು ಟ್ರೋಲ್ ಮಾಡಲಾಗುತ್ತಿದೆ.
Published On - 2:31 pm, Mon, 16 September 19