
ಚೆನ್ನೈ: ಕೊರೊನಾ ಸಂಕಷ್ಟದ ನಡುವೆಯೂ ಈ ಬಾರಿಯ ಐಪಿಎಲ್ ಪ್ರೇಕ್ಷಕ ರಹಿತವಾಗಿ ಆರಂಭವಾಗಿದೆ. ಟಾಸ್ ಗೆದ್ದ ಆರ್ಸಿಬಿ ಬೌಲಿಂಗ್ ಆಯ್ದುಕೊಂಡು ಮುಂಬೈ ಇಂಡಿಯನ್ಸ್ ತಂಡವನ್ನು 159 ರನ್ಗಳಿಗೆ ಕಟ್ಟಿಹಾಕಿತ್ತು. ಆರ್ಸಿಬಿ ಪರ ಹರ್ಷಲ್ ಪಟೇಲ್ 5 ವಿಕೆಟ್ ಪಡೆದು ಮಿಂಚಿದ್ದರು. ಮುಂಬೈ ಪರ ಲಿನ್ 49 ರನ್ಗಳಿಸಿ ಉತ್ತಮ ಮೊತ್ತ ಕಲೆಹಾಕುವಲ್ಲಿ ಸಹಕಾರಿಯಾಗಿದ್ದರು.
160 ರನ್ಗಳ ಮೊತ್ತ ಬೆನ್ನತ್ತಿದ ಆರ್ಸಿಬಿಗೆ ಆರಂಭಿಕ ಆಘಾತ ಎದುರಾಯಿತು. ಆದರೆ ನಾಯಕ ಕೊಹ್ಲಿ ಹಾಗೂ ಮ್ಯಾಕ್ಸ್ವೆಲ್ ಉತ್ತಮ ಆಟವಾಡಿ, ಅರ್ಧಶತಕದ ಜೊತೆಯಾಟ ನೀಡಿದರು. ಮತ್ತೆ ಮಧ್ಯಮ ಕ್ರಮಾಂಕ ಕುಸಿದಾಗ ಎಬಿ ಡಿವಿಲಿಯರ್ಸ್ ತಂಡಕ್ಕೆ ಆಸರೆಯಾದರು. ಆರ್ಸಿಬಿ ಗೆಲ್ಲುವಲ್ಲಿ ಮುಖ್ಯ ಪ್ರದರ್ಶನ ತೋರಿದರು.
ಪೂರ್ಣ ತಂಡಗಳು
ಮುಂಬೈ ಇಂಡಿಯನ್ಸ್ (ಎಂಐ): ರೋಹಿತ್ ಶರ್ಮಾ, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಕ್ರಿಸ್ ಲಿನ್, ಅನ್ಮೊಲ್ಪ್ರೀತ್ ಸಿಂಗ್, ಸೌರಭ್ ತಿವಾರಿ, ಆದಿತ್ಯ ತಾರೆ, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ, ಅನುಕುಲ್ ರಾಯ್, ಬುಮ್ರಾ, ಟ್ರೆಂಟ್ ಬೌಲ್ಟ್, ರಾಹುಲ್ ಚಹರ್, ಜಯಂತ್ ಯಾದವ್, ಧವಲ್ ಕುಲಕರ್ಣಿ, ಮೊಹ್ಸಿನ್ ಖಾನ್, ಆಡಮ್ ಮಿಲ್ನೆ, ನಾಥನ್ ಕೌಲ್ಟರ್-ನೈಲ್, ಪಿಯೂಷ್ ಚಾವ್ಲಾ, ಜೇಮ್ಸ್ ನೀಶಮ್, ಯುಧ್ವೀರ್ ಚರಕ್, ಮಾರ್ಕೊ ಜಾನ್ಸೆನ್, ಮತ್ತು ಅರ್ಜುನ್ ತೆಂಡೂಲ್ಕರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ): ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ನವದೀಪ್ ಸೈನಿ, ಕೇನ್ ರಿಚರ್ಡ್ಸನ್, ಆಡಮ್ ಜಂಪಾ, ಶಹಬಾಜ್ ಅಹ್ಮದ್, ಜೋಶ್ ಫಿಲಿಪ್, ಪವನ್ ದೇಶಪಾಂಡೆ, ಯುಜ್ವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ದೇವದತ್ ಪಡಿಕಲ್, ಡೇನಿಯಲ್ ಕ್ರಿಶ್ಚಿಯನ್, ಕೈಲ್ ಜಾಮಿಸನ್, ಮೊಹಮ್ಮದ್ ಅಜರುದ್ದೀನ್, ರಜತ್ ಪಾಟಿದಾರ್, ಸಚಿನ್ ಬೇಬಿ, ಗ್ಲೆನ್ ಮ್ಯಾಕ್ಸ್ ವೆಲ್.
ಮುಂಬೈ ಇಂಡಿಯನ್ಸ್ ವಿರುದ್ಧದ ಟೂರ್ನಿಯ ಮೊದಲ ಪಂದ್ಯದಲ್ಲಿ ಆರ್ಸಿಬಿ 2 ವಿಕೆಟ್ಗಳ ಗೆಲುವು ದಾಖಲಿಸಿದೆ.
ಪಂದ್ಯದ ಮುಕ್ತಾಯದ ಹಂತದಲ್ಲಿ ಅವಸರದ ಎರಡನೇ ಓಟಕ್ಕೆ ಪ್ರಯತ್ನಿಸಿದ ಎಬಿ ಡಿವಿಲಿಯರ್ಸ್ ರನೌಟ್ ಆಗಿದ್ದಾರೆ. 27 ಬಾಲ್ಗೆ 4 ಬೌಂಡರಿ, 2 ಸಿಕ್ಸರ್ ಸಹಿತ 48 ರನ್ ಕಲೆಹಾಕಿದ್ದಾರೆ. ರಾಯಲ್ ಚಾಲೆಂಜರ್ಸ್ ಗೆಲ್ಲಲು 2 ಬಾಲ್ಗೆ 2 ರನ್ ಬೇಕಾಗಿದೆ.
ಆರ್ಸಿಬಿ ಪರ ಡಿವಿಲಿಯರ್ಸ್ ಉತ್ತಮ ಆಟವಾಡಿ ಗೆಲುವಿನ ಸನಿಹದತ್ತ ತಂಡವನ್ನು ಕೊಂಡೊಯ್ಯುತ್ತಿದ್ದ ಬೆನ್ನಲ್ಲೇ ತಂಡಕ್ಕೆ ರನೌಟ್ ಆಘಾತವಾಗಿದೆ. ಜೇಮಿಸನ್ ಬುಮ್ರಾಗೆ ರನೌಟ್ ಆಗಿದ್ದಾರೆ. ಆರ್ಸಿಬಿ ಗೆಲುವಿಗೆ 7 ಬಾಲ್ಗೆ 8 ರನ್ ಬೇಕಾಗಿದೆ. 3 ವಿಕೆಟ್ ಉಳಿದುಕೊಂಡಿದೆ. ಹರ್ಷಲ್ ಪಟೇಲ್ ಡಿವಿಲಿಯರ್ಸ್ ಜೊತೆಯಾಗಿ್ದ್ದಾರೆ.
ಆರ್ಸಿಬಿ ಗೆಲ್ಲಲು 12 ಎಸೆತಗಳಿಗೆ 19 ರನ್ ಬೇಕಾಗಿದೆ. ಡಿವಿಲಿಯರ್ಸ್ ಸ್ಟ್ರೈಕ್ ಉಳಿಸಿಕೊಂಡಿದ್ದಾರೆ. ಕ್ರೀಸ್ ಕಾಯ್ದುಕೊಂಡಿದ್ದಾರೆ. 141 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡಿರುವ ಆರ್ಸಿಬಿ ಗೆಲ್ಲುವ ತವಕದಲ್ಲಿದೆ.
ರಾಯಲ್ ಚಾಲೆಂಜರ್ಸ್ 17 ಓವರ್ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 126 ರನ್ ಕಲೆಹಾಕಿದೆ. ಗೆಲ್ಲಲು 18 ಬಾಲ್ಗೆ 34 ರನ್ ಬೇಕಾಗಿದೆ. ಜೇಮಿಸನ್ ಹಾಗೂ ಡಿವಿಲಿಯರ್ಸ್ ಕ್ರೀಸ್ ಕಾಯ್ದುಕೊಂಡಿದ್ದಾರೆ. ಆರ್ಸಿಬಿ ಗೆಲುವಿಗೆ ಬಿರುಸಿನ ಆಟ ಆಡಬೇಕಾಗಿದೆ. ಮುಂಬೈಗೆ ವಿಕೆಟ್ ಕಬಳಿಸುವುದು ಅವಶ್ಯವಾಗಿದೆ.
ಆರ್ಸಿಬಿ ಮತ್ತೆ ವಿಕೆಟ್ ಕಳೆದುಕೊಂಡಿದೆ. ರಾಯಲ್ ಚಾಲೆಂಜರ್ಸ್ ಗೆಲುವಿಗೆ 20 ಎಸೆತಗಳಲ್ಲಿ 38 ರನ್ ಬೇಕಾಗಿದೆ.
ಆರ್ಸಿಬಿಗೆ ಗೆಲ್ಲಲು 4 ಓವರ್ಗಳಲ್ಲಿ, ಅಂದರೆ 24 ಬಾಲ್ಗಳಲ್ಲಿ 39 ರನ್ ಬೇಕಾಗಿದೆ. ರಾಯಲ್ ಚಾಲೆಂಜರ್ಸ್ ಪರ ಎಬಿಡಿ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದು 1 ಬೌಂಡರಿ, 1 ಸಿಕ್ಸರ್ ಸಹಿತ 13 ಬಾಲ್ಗೆ 18 ರನ್ ಕಲೆಹಾಕಿದ್ದಾರೆ.
ಆರ್ಸಿಬಿ-ಎಮ್ಐ ನಡುವಿನ ಆಟ ರೋಚಕ ಹಂತದತ್ತ ತಲುಪಿದೆ. ಆರ್ಸಿಬಿ ಬೆನ್ನುಬೆನ್ನಿಗೆ ವಿಕೆಟ್ ಕಳೆದುಕೊಂಡು ಒತ್ತಡ ಹೆಚ್ಚಿಸಿಕೊಂಡಿದೆ. ಈ ನಡುವೆ ಆರ್ಸಿಬಿ ಪರ ಬಿರುಸಿನ ಬ್ಯಾಟಿಂಗ್ ತೋರುತ್ತಿರುವ ಎಬಿ ಡಿವಿಲಿಯರ್ಸ್ ಫೋರ್-ಸಿಕ್ಸ್ ಬಾರಿಸುತ್ತಿದ್ದಾರೆ.
ಆರ್ಸಿಬಿ ಮತ್ತೊಬ್ಬ ಆಟಗಾರ ಶಹಬಾಜ್ ಔಟ್ ಆಗಿದ್ದಾರೆ. ಈ ಮೂಲಕ ತಂಡದ 5 ವಿಕೆಟ್ ಪತನಗೊಂಡಿದೆ. ಗೆಲುವಿನ ಒತ್ತಡ ಸಂಪೂರ್ಣ ಡಿವಿಲಿಯರ್ಸ್ ಮೇಲಿದೆ.
ಅಬ್ಬರಿಸುತ್ತಿದ್ದ ದಾಂಡಿಗ ಗ್ಲೆನ್ ಮ್ಯಾಕ್ಸ್ವೆಲ್ ಸುಲಭವಾಗಿ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಡಿವಿಲಿಯರ್ಸ್ ಮೇಲೆ ಗೆಲುವಿನ ಭಾರ ಹೆಚ್ಚಿದೆ. ಶಹ್ಬಾಜ್-ಡಿವಿಲಿಯರ್ಸ್ ಜೊತೆಯಾಟ ಆಡುತ್ತಿದ್ದು, ಗೆಲ್ಲಲು 55 ರನ್ ಬೇಕಾಗಿದೆ.
ಮುಂಬೈ ವಿರುದ್ಧ ಗೆಲುವಿಗೆ ಆರ್ಸಿಬಿಗೆ 36 ಎಸೆತಗಳಲ್ಲಿ 57 ರನ್ ಬೇಕಾಗಿದೆ. 14 ಓವರ್ಗೆ 103 ರನ್ ಗಳಿಸಿ 3 ವಿಕೆಟ್ ಕಳೆದುಕೊಂಡಿದೆ.
ರಾಯಲ್ ಚಾಲೆಂಜರ್ಸ್ -ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯಾಟ ರೋಚಕ ಘಟ್ಟ ತಲುಪುತ್ತಿದೆ. ಕೊಹ್ಲಿ ಔಟ್ ಆದ ಬಳಿಕ, ಡಿವಿಲಿಯರ್ಸ್-ಮ್ಯಾಕ್ಸ್ವೆಲ್ ಜೊತೆಯಾಗಿದ್ದಾರೆ. ಮುಂಬೈ ಪರ ಬೋಲ್ಟ್, ಬುಮ್ರಾ, ಕೃನಾಲ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.
ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ 29 ಎಸೆತಗಳಲ್ಲಿ 33 ರನ್ ಗಳಿಸಿ ವಿಕೆಟ್ ಕಳೆದುಕೊಂಡಿದ್ದಾರೆ. ಬುಮ್ರಾಗೆ ವಿಕೆಟ್ ಒಪ್ಪಿಸಿದ್ದಾರೆ. ಆರ್ಸಿಬಿ ಪರ ಮ್ಯಾಕ್ಸ್ವೆಲ್ ಹಾಗೂ ಡಿವಿಲಿಯರ್ಸ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಈ ಮೂಲಕ ಅರ್ಧಶತಕದ ಜೊತೆಯಾಟ ಬೇರ್ಪಟ್ಟಿದೆ.
ಆರ್ಸಿಬಿ 12 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 95 ರನ್ ಕಲೆಹಾಕಿದೆ. ಗೆಲ್ಲಲು ಇನ್ನು 48 ಬಾಲ್ಗಳಲ್ಲಿ 65 ರನ್ ಬೇಕಿದೆ. ಮೊದಲ ಎರಡು ವಿಕೆಟ್ ಬೇಗ ಕಳೆದುಕೊಂಡರೂ, ಬೆಂಗಳೂರು ತಂಡದ ದಾಂಡಿಗರು ಉತ್ತಮ ಆಟವನ್ನೇ ತೋರುತ್ತಿದ್ದಾರೆ. ಮುಂಬೈ ಬೌಲರ್ಗಳು ವಿಕೆಟ್ ಕಬಳಿಸಲು ಪರದಾಡುತ್ತಿದ್ದಾರೆ.
ರಾಯಲ್ ಚಾಲೆಂಜರ್ಸ್ ಪರ ಉತ್ತಮ ಪ್ರದರ್ಶನ ತೋರುತ್ತಿರುವ ಕೊಹ್ಲಿ ಹಾಗೂ ಮ್ಯಾಕ್ಸ್ವೆಲ್ ಗೆಲುವಿನತ್ತ ತಂಡವನ್ನು ಕೊಂಡೊಯ್ಯುತ್ತಿದ್ದಾರೆ. ಮ್ಯಾಕ್ಸ್ವೆಲ್ ಎರಡು ಸಿಕ್ಸರ್ ಬಾರಿಸಿ ರನ್ ವೇಗ ಹೆಚ್ಚಿಸಿದ್ದಾರೆ. ಗೆಲುವನ್ನು ಸುಲಭವಾಗಿಸುತ್ತಿದ್ದಾರೆ. ಮ್ಯಾಕ್ಸ್ವೆಲ್ ಹಾಗೂ ಕೊಹ್ಲಿ ಇಬ್ಬರೂ 30 ರನ್ಗಳ ಆಸುಪಾಸಿನಲ್ಲಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಆರ್ಸಿಬಿ 10 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 75 ರನ್ ಕಲೆಹಾಕಿದೆ. ಕೊಹ್ಲಿ-ಮ್ಯಾಕ್ಸ್ವೆಲ್ ಜೊತೆಯಾಟ ಮುಂದುವರಿದಿದೆ. 160 ರನ್ ಗುರಿ ತಲುಪಲು 60 ಎಸೆತಗಳಲ್ಲಿ 85 ರನ್ ಬೇಕಾಗಿದೆ.
ರಾಯಲ್ ಚಾಲೆಂಜರ್ಸ್ ತಂಡ 2 ವಿಕೆಟ್ ಕಳೆದುಕೊಂಡರೂ ಉತ್ತಮ ಆಟವನ್ನೇ ಆಡುತ್ತಿದೆ. ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಕೊಹ್ಲಿ 4 ಬೌಂಡರಿ ಸಹಿತ 19 ಬಾಲ್ಗೆ 27 ರನ್ ಗಳಿಸಿದ್ದಾರೆ. ಮ್ಯಾಕ್ಸ್ವೆಲ್ 3 ಬೌಂಡರಿ ಬಾರಿಸಿ 12 ಬಾಲ್ಗೆ 16 ರನ್ ಕಲೆಹಾಕಿದ್ದಾರೆ. ಮುಂಬೈ ಪರ ಕೃನಾಲ್ ಪಾಂಡ್ಯ, ಬೋಲ್ಟ್ ತಲಾ 1 ವಿಕೆಟ್ ಪಡೆದಿದ್ದಾರೆ.
160 ರನ್ಗಳ ಟಾರ್ಗೆಟ್ ಬೆನ್ನತ್ತಿರುವ ಆರ್ಸಿಬಿ 8 ಓವರ್ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 63 ರನ್ ಕಲೆಹಾಕಿದೆ. ಆರಂಭಿಕರಾಗಿ ಕಣಕ್ಕಿಳಿದ ಕೊಹ್ಲಿಗೆ ಮ್ಯಾಕ್ಸ್ವೆಲ್ ಜೊತೆಯಾಗಿದ್ದಾರೆ. ಕೊಹ್ಲಿ 18 ಎಸೆತಗಳಿಗೆ 26 ರನ್ ಜೊತೆಗೆ ಭರವಸೆಯ ಆಟವಾಡುತ್ತಿದ್ದಾರೆ.
ಆರ್ಸಿಬಿ ಎರಡನೇ ವಿಕೆಟ್ ಕೂಡ ಪತನವಾಗಿದೆ. ಸುಂದರ್ ಬಳಿಕ ಕೊಹ್ಲಿಗೆ ಜೊತೆಯಾಗಿದ್ದ ಪಾಟೀದಾರ್ 8 ರನ್ ಗಳಿಸಿ, ಬೋಲ್ಟ್ಗೆ ವಿಕೆಟ್ ಒಪ್ಪಿಸಿದ್ದಾರೆ. ಇದೀಗ ಮ್ಯಾಕ್ಸ್ವೆಲ್ ಬ್ಯಾಟಿಂಗ್ ಮಾಡುತ್ತಿದ್ದು, ಕೊಹ್ಲಿ-ಮ್ಯಾಕ್ಸ್ವೆಲ್ ಜೊತೆಯಾಟದ ಮೇಲೆ ಗೆಲುವಿನ ಒತ್ತಡ ಹೆಚ್ಚಿದೆ. 6.2 ಓವರ್ನ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 46 ರನ್ ಗಳಿಸಿದೆ.
5 ಓವರ್ಗಳ ಅಂತ್ಯಕ್ಕೆ ಆರ್ಸಿಬಿ ಒಂದು ವಿಕೆಟ್ ಕಳೆದುಕೊಂಡು 41 ರನ್ ಕಲೆಹಾಕಿದೆ. ನಾಯಕ ಕೊಹ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಪಾಟಿದಾರ್ ಒನ್ ಡೌನ್ನಲ್ಲಿ ಕಣಕ್ಕಿಳಿದಿದ್ದಾರೆ.
ಉತ್ತಮ ಬ್ಯಾಟಿಂಗ್ ಆರಂಭಿಸಿದ ಆರ್ಸಿಬಿಯ ಮೊದಲ ವಿಕೆಟ್ ಪತನವಾಗಿದೆ. ವಾಷಿಂಗ್ಟನ್ ಸುಂದರ್ 10 ರನ್ ಗಳಿಸಿ ಔಟ್ ಆಗಿದ್ದಾರೆ.
ಬ್ಯಾಟಿಂಗ್ ಆರಂಭಿಸಿರುವ ಆರ್ಸಿಬಿಗೆ ಕಪ್ತಾನ ವಿರಾಟ್ ಕೊಹ್ಲಿ ಹಾಗೂ ವಾಷಿಂಗ್ಟನ್ ಸುಂದರ್ ಉತ್ತಮ ಆರಂಭ ಒದಗಿಸಿಕೊಟ್ಟಿದ್ದಾರೆ. 4 ಓವರ್ಗಳ ಅಂತ್ಯದಲ್ಲಿ ರಾಯಲ್ ಚಾಲೆಂಜರ್ಸ್, ವಿಕೆಟ್ ನಷ್ಟವಿಲ್ಲದೆ 35 ರನ್ ಕಲೆಹಾಕಿದ್ದಾರೆ.
ಮುಂಬೈ ನೀಡಿರುವ 159 ರನ್ಗಳ ಟಾರ್ಗೆಟನ್ನು ಬೆನ್ನತ್ತಲು ಆರ್ಸಿಬಿ ಪರ ಸುಂದರ್ ಹಾಗೂ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಮುಂಬೈ ಪರ ಬೌಲಿಂಗ್ ಆರಂಭಿಸಿದ ಬೋಲ್ಟ್ ಮೊದಲ ಎಸೆತದಲ್ಲೇ ಸುಂದರ್ ಅವರನ್ನು ತಮ್ಮ ಸ್ವಿಂಗ್ ಬಲೆಗೆ ಬಿಳಿಸಿಕೊಂಡಿದ್ದರು. ಆದರೆ ಸ್ಲಿಪ್ನಲ್ಲಿ ನಿಂತಿದ್ದ ರೋಹಿತ್ ಕ್ಯಾಚ್ ಹಿಡಿಯುವಲ್ಲಿ ವಿಫಲರಾದರು. ಹೀಗಾಗಿ ಸುಂದರ್ಗೆ ಮೊದಲ ಜೀವದಾನ ಸಿಕ್ಕಿತು. ಮೊದಲ ಓವರ್ನಲ್ಲಿ 2 ಬೌಂಡರಿ ಸಹಿತ ಆರ್ಸಿಬಿ 10 ರನ್ ಗಳಿಸಿದೆ
ಮುಂಬೈ ಇಂಡಿಯನ್ಸ್ ತಂಡ 20 ಓವರ್ಗಳ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿದೆ. ಆರ್ಸಿಬಿ ಪರ ಹರ್ಷಲ್ ಪಟೇಲ್ 5 ವಿಕೆಟ್ ಪಡೆದು ಮಿಂಚಿ್ದ್ದಾರೆ. ಆರಂಭಿಕವಾಗಿ ಭರ್ಜರಿ ಆಟವಾಡಿದ್ದ ಮುಂಬೈಯನ್ನು ಅಂತಿಮವಾಗಿ ಕಟ್ಟಿಹಾಕಲು ಆರ್ಸಿಬಿ ಬೌಲರ್ಗಳು ಯಶಸ್ವಿಯಾಗಿದ್ದಾರೆ. ಮುಂದಿನ ಇದೀಗ ಗೆಲುವಿಗಾಗಿ ಆರ್ಸಿಬಿ 160 ರನ್ಗಳ ಬೆನ್ನಟ್ಟಬೇಕಿದೆ.
19ನೇ ಓವರ್ ಎಸೆದ ಹರ್ಷಲ್ ಪಟೇಲ್ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಪೊಲಾರ್ಡ್, ಕೃನಾಲ್ ಪಾಂಡ್ಯ, ಜಾನ್ಸೆನ್ ವಿಕೆಟ್ ಕಬಳಿಸಿ ಮುಂಬೈ ತಂಡವನ್ನು ಅಬ್ಬರಿಸದಂತೆ ಕಟ್ಟಿಹಾಕಿದ್ದಾರೆ. ಕೊನೆಯ ಓವರ್ನಲ್ಲಿ ಕೇವಲ 1 ರನ್ ಬಿಟ್ಟುಕೊಟ್ಟು ಆರ್ಸಿಬಿ ಪರ ಭರ್ಜರಿ ಪ್ರದರ್ಶನ ತೋರಿದ್ದಾರೆ.
ಆರ್ಸಿಬಿ ನಾಯಕ ಕೊಹ್ಲಿ ಇನ್ನಿಂಗ್ಸ್ನ ಮೂರನೇ ಕ್ಯಾಚ್ ಡ್ರಾಪ್ ಮಾಡಿದ್ದಾರೆ. ಕೃನಾಲ್ ಪಾಂಡ್ಯ ಹೊಡೆತವನ್ನು ಕೊಹ್ಲಿ ಕೈಚೆಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ 150 ರನ್ಗಳ ಗಡಿ ದಾಟಿದ್ದು, 5 ವಿಕೆಟ್ ಕಳೆದುಕೊಂಡಿದೆ.
ಸಿರಾಜ್ ಮುಂಬೈನ ಐದನೇ ವಿಕೆಟ್ ಕಬಳಿಸಿದ್ದಾರೆ. ಮುಂಬೈ ಪರವಾಗಿ ಪೊಲಾರ್ಡ್ ಹಾಗೂ ಕೃನಾಲ್ ಪಾಂಡ್ಯ ಬ್ಯಾಟ್ ಬೀಸುತ್ತಿದ್ದಾರೆ.
17.4 ಓವರ್ಗಳ ಅಂತ್ಯಕ್ಕೆ ಮುಂಬೈ 5 ವಿಕೆಟ್ ಕಳೆದುಕೊಂಡು 145 ರನ್ ಕಲೆಹಾಕಿದೆ. ಎರಡು ಕ್ಯಾಚ್ ಡ್ರಾಪ್ ಜೀವದಾನದ ಬಳಿಕ ಇಶಾನ್ ಕಿಶನ್ ತಮ್ಮ ವಿಕೆಟ್ ಒಪ್ಪಿಸಿದ್ದಾರೆ.
ಇನ್ನಿಂಗ್ಸ್ನ 17ನೇ ಓವರ್ನ್ನು ಸಿರಾಜ್ ಬೌಲ್ ಮಾಡಿದ್ದಾರೆ. ಪೊಲಾರ್ಡ್ ಹಾಗೂ ಇಶಾನ್ ಕಿಶನ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇನ್ನಿಂಗ್ಸ್ ಅಂತ್ಯಕ್ಕೆ ಇನ್ನೂ 3 ಓವರ್ಗಳು ಬಾಕಿ ಇದ್ದು, ಮುಂಬೈ 150 ರನ್ ಗಡಿ ದಾಟುವುದು ಖಚಿತವಾಗಿದೆ.
ಸಿರಾಜ್ ಬೌಲಿಂಗ್ಗೆ ಇಶಾನ್ ಕಿಶನ್ ಸಿಕ್ಸರ್ಗೆ ಬ್ಯಾಟ್ ಬೀಸಿದ್ದಾರೆ. ಈ ಹೊಡೆತ ವಾಷಿಂಗ್ಟನ್ ಸುಂದರ್ಗೆ ಕ್ಯಾಚ್ ಆಗುತ್ತಿತ್ತು. ಆದರೆ, ಸ್ವಲ್ಪದರಲ್ಲೇ ಕೈತಪ್ಪಿದ ಬಾಲ್, ಬೌಂಡರಿಗೆ ಹೋಗಿದೆ. ಪೊಲಾರ್ಡ್ ಹಾಗೂ ಇಶಾನ್ ಕಿಶನ್ ಕ್ರೀಸ್ನಲ್ಲಿದ್ದಾರೆ.
ಹರ್ಷಲ್ ಪಟೇಲ್ ಎಸೆದ 16ನೇ ಓವರ್ನಲ್ಲಿ ಮುಂಬೈಗೆ ಮತ್ತೊಂದು ಆಘಾತವಾಗಿದೆ. ಹಾರ್ದಿಕ್ ಪಟೇಲ್ 13 ರನ್ಗಳಿಗೆ ಔಟ್ ಆಗಿದ್ದಾರೆ.
ಮುಂಬೈ ಆಟಗಾರರು 15 ಓವರ್ಗಳ ಅಂತ್ಯಕ್ಕೆ 128 ರನ್ ದಾಖಲಿಸಿದ್ದಾರೆ. ಹಾರ್ದಿಕ್ ಪಾಂದ್ಯ-ಇಶಾನ್ ಕಿಶನ್ ಕ್ರೀಸ್ ಕಾಯ್ದುಕೊಂಡಿ್ದ್ದಾರೆ.
ಮುಂಬೈ ಇಂಡಿಯನ್ಸ್ 14 ಓವರ್ಗಳ ಅಂತ್ಯಕ್ಕೆ 120 ರನ್ ಕಲೆಹಾಕಿದೆ. ಲಿನ್, ರೋಹಿತ್, ಸೂರ್ಯಕುಮಾರ್ ಸಹಿತ ಮೂರು ಮುಖ್ಯ ವಿಕೆಟ್ ಕಳೆದುಕೊಂಡಿದೆ.
ಮುಂಬೈ ಪರ ಉತ್ತಮ ಬ್ಯಾಟಿಂಗ್ ಆಡುತ್ತಿದ್ದ ಲಿನ್ 49 ರನ್ಗಳಿಗೆ ಔಟ್ ಆಗಿದ್ದಾರೆ. ವಾಷಿಂಗ್ಟನ್ ಸುಂದರ್ ಆರ್ಸಿಬಿ ಪರ 3ನೇ ವಿಕೆಟ್ ಕಬಳಿಸಿದ್ದಾರೆ. ಕ್ರೀಸ್ನಲ್ಲಿ ಇರುವ ಇಶಾನ್ ಕಿಶನ್ಗೆ ಹಾರ್ದಿಕ್ ಪಾಂದ್ಯ ಜೊತೆಯಾಗಿದ್ದಾರೆ.
12 ಓವರ್ಗಳ ಅಂತ್ಯಕ್ಕೆ ಮುಂಬೈ 98 ರನ್ ದಾಖಲಿಸಿದ್ದಾರೆ. ಅರ್ಧಶತಕದ ಹೊಸ್ತಿಲಲ್ಲಿ ಇರುವ ಲಿನ್ ಈ ಓವರ್ನಲ್ಲಿ ಔಟ್ ಆಗುವ ಸಾಧ್ಯತೆ ಇತ್ತು. ಆದರೆ, ಕಠಿಣವೇ ಆಗಿದ್ದ ಕ್ಯಾಚ್ನ್ನು ಜೇಮಿಸನ್ ಕೈಚೆಲ್ಲಿದ್ದಾರೆ. ಕಿಶನ್ ಹಾಗೂ ಲಿನ್ ಬ್ಯಾಟಿಂಗ್ ಮುಂದುವರಿದಿದೆ.
ಅತ್ಯುತ್ತಮ ಆಟ ತೋರುತ್ತಿದ್ದ ಸೂರ್ಯಕುಮಾರ್ ಯಾದವ್-ಲಿನ್ ಜೊತೆಯಾಟ ಮುರಿದ ಆರ್ಸಿಬಿ.
ಇನ್ನಿಂಗ್ಸ್ನ 11 ಓವರ್ ಅಂತ್ಯಕ್ಕೆ ಮುಂಬೈ 94 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿದೆ. ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದ ಸೂರ್ಯಕುಮಾರ್ ಯಾದವ್, ಜೇಮಿಸನ್ ಎಸೆತಕ್ಕೆ ಔಟ್ ಆಗಿದ್ದಾರೆ. ಶಾರ್ಟ್ ಎಸೆತಕ್ಕೆ ಆಫ್ ಸೈಡ್ಗೆ ಬ್ಯಾಟ್ ಬೀಸಲು ಹೊರಟು ಕೀಪರ್ಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. ಲಿನ್ಗೆ ಕಿಶನ್ ಜೊತೆಯಾಗಿದ್ದಾರೆ.
ಇನ್ನಿಂಗ್ಸ್ನ 10ನೇ ಓವರ್ ಚಹಾಲ್ ಬೌಲ್ ಮಾಡಿದ್ದಾರೆ. 10 ಓವರ್ಗಳ ಅಂತ್ಯಕ್ಕೆ ಮುಂಬೈ 86 ರನ್ಗಳ ಉತ್ತಮ ಮೊತ್ತವನ್ನೇ ಕಲೆಹಾಕಿದ್ದಾರೆ. ಲಿನ್ 41 ರನ್ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿದ್ದಾರೆ. ಸೂರ್ಯಕುಮಾರ್ ಯಾದವ್ ಕೂಡ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.
ಲಿನ್ ಮತ್ತು ಸೂರ್ಯಕುಮಾರ್ ಯಾದವ್ ಆಟ ಆರ್ಸಿಬಿ ಎಸೆತಗಾರರನ್ನು ಕಂಗಾಲಾಗಿಸಿದೆ. ಈ ಜೋಡಿಯನ್ನು ಮುರಿಯುವುದು ಆರ್ಸಿಬಿಗೆ ಸದ್ಯದ ಸವಾಲಾಗಿದೆ. ಡೇನಿಯಲ್ ಕ್ರಿಶ್ಚಿಯನ್ 9ನೇ ಓವರ್ ಬೌಲ್ ಮಾಡಿದ್ದಾರೆ. 1 ವೈಡ್, 2 ಬೌಂಡರಿ ಸಹಿತ 13 ರನ್ ಬಿಟ್ಟುಕೊಟ್ಟಿದ್ದಾರೆ.
ಹರ್ಷಲ್ ಪಟೇಲ್ ಎಂಟನೇ ಓವರ್ ಬೌಲಿಂಗ್ ಮಾಡಿದ್ದಾರೆ. ಮೊದಲ ಎಸೆತವನ್ನೇ ನೋಬಾಲ್ ಎಸೆದು ಕೊಂಚ ದುಬಾರಿ ಎನಿಸಿಕೊಂಡಿದ್ದಾರೆ. ಮುಂಬೈ ಪರ ಆಸಿಸ್ ದಾಂಡಿಗ ಲಿನ್ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ. ಈ ಓವರ್ನಲ್ಲಿ ಲಿನ್ ಒಂದು ಸಿಕ್ಸರ್ ಬಾರಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಓವರ್ನ 4ನೇ ಎಸೆತವನ್ನು ಬೌಂಡರಿಗಟ್ಟಿದ್ದಾರೆ. 8 ಓವರ್ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 70 ರನ್ ಕೂಡಿದ್ದಾರೆ. ಮುಂಬೈ ಬ್ಯಾಟ್ಸ್ಮನ್ಗಳು ಬ್ಯಾಟಿಂಗ್ ಹದ ಕಾಯ್ದುಕೊಂಡಿದ್ದಾರೆ.
ಪಂದ್ಯದ ಏಳನೇ ಓವರ್ನ್ನು ಶಹಬಾಜ್ ಬೌಲ್ ಮಾಡಿದ್ದಾರೆ. ಲಿನ್ ಅಬ್ಬರದ ಬ್ಯಾಟಿಂಗ್ ಆರಂಭಿಸಿದ್ದು, ಈ ಓವರ್ನಲ್ಲೂ ಒಂದು ಬೌಂಡರಿ, ಒಂದು ಸಿಕ್ಸರ್ ಬಾರಿಸಿದ್ದಾರೆ. 18 ಎಸೆತದಲ್ಲಿ 25 ರನ್ ಕಲೆಹಾಕಿ ಲಿನ್ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.
ಆರನೇ ಓವರ್ ಅಂತ್ಯಕ್ಕೆ ಮುಂಬೈ ತಂಡ 1 ವಿಕೆಟ್ ಕಳೆದುಕೊಂಡು 41 ರನ್ ಕಲೆಹಾಕಿದೆ. ಚಹಾಲ್ ದುಬಾರಿಯಾಗಿದ್ದಾರೆ. ತಮ್ಮ ಓವರ್ನಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ಬಿಟ್ಟುಕೊಟ್ಟಿದ್ದಾರೆ. ಲಿನ್ ನಿಧಾನವಾಗಿ ಬ್ಯಾಟಿಂಗ್ ಲಯ ಕಂಡುಕೊಳ್ಳುತ್ತಿದ್ದಾರೆ.
5 ಓವರ್ ಅಂತ್ಯಕ್ಕೆ ಮುಂಬೈ ಇಂಡಿಯನ್ಸ್ 1 ವಿಕೆಟ್ ಕಳೆದುಕೊಂಡು 30 ರನ್ ಗಳಿಸಿದ್ದಾರೆ. ರೋಹಿತ್ ಬಳಿಕ ಸೂರ್ಯಕುಮಾರ್ ಯಾದವ್ ಒನ್ಡೌನ್ನಲ್ಲಿ ಕ್ರೀಸ್ಗೆ ಇಳಿದಿದ್ದಾರೆ. ತಾವು ಆಡಿದ ಮೊದಲ ಎಸೆತವನ್ನೇ ಬೌಂಡರಿಗೆ ಅಟ್ಟಿ ಮುಂಬೈಗೆ ಮತ್ತೆ ಬಲ ತರುವ ಪ್ರಯತ್ನ ಮಾಡಿದ್ದಾರೆ. ಜೇಮಿಸನ್ 5ನೇ ಓವರ್ ಬೌಲಿಂಗ್ ಮಾಡಿದ್ದು, 6 ರನ್ ಬಿಟ್ಟುಕೊಟ್ಟಿದ್ದಾರೆ.
ನಾಲ್ಕನೇ ಓವರ್ನ್ನು ಸ್ಪಿನ್ನರ್ ಯಜುವೇಂದ್ರ ಚಹಾಲ್ ಎಸೆದಿದ್ದಾರೆ. ಓವರ್ನ ಎರಡನೇ ಎಸೆತ ಕೀಪರ್ ಕೈತಪ್ಪಿ ಬೌಂಡರಿಯತ್ತ ಸಾಗಿದೆ. ನಾಲ್ಕನೇ ಎಸೆತವನ್ನು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಸಿಕ್ಸರ್ಗೆ ಅಟ್ಟಿದ್ದಾರೆ. 82 ಮೀಟರ್ನ ಈ ಸಿಕ್ಸ್, ಟೂರ್ನಿಯ ಮೊದಲ ಸಿಕ್ಸರ್ ಆಗಿದೆ. ಈ ಬೆನ್ನಲ್ಲೇ ಓವರ್ನ ಕೊನೆಯ ಎಸೆತದಲ್ಲಿ ಆತುರದ ಓಟ ಓಡಿ ರೋಹಿತ್ ಶರ್ಮಾ ರನೌಟ್ ಆಗಿದ್ದಾರೆ. ಬ್ಯಾಟಿಂಗ್ ಲಯಕಂಡುಕೊಳ್ಳುತ್ತಿರುವಂತೆ 19 ರನ್ಗಳಿಸಿದ ಮುಂಬೈ ತಂಡದ ನಾಯಕ ಪೆವಿಲಿಯನ್ ಕಡೆ ನಿರ್ಗಮಿಸಿದ್ದಾರೆ.
ಮೂರನೇ ಓವರ್ಗೆ ಮತ್ತೆ ಮೊಹಮದ್ ಸಿರಾಜ್ ಬೌಲಿಂಗ್ ಮಾಡಿದ್ದಾರೆ. ರೋಹಿತ್ ಶರ್ಮಾ ಹಾಗೂ ಕ್ರಿಸ್ ಲಿನ್ ಭರ್ಜರಿ ಹೊಡೆತಗಳನ್ನು ಪ್ರಯತ್ನಿಸುತ್ತಿದ್ದಾರೆ. ಆದರೆ ರನ್ ಬಿಟ್ಟುಕೊಡದೆ, ಆರ್ಸಿಬಿ ಬೌಲರ್ಗಳು ದಾಂಡಿಗರನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಓವರ್ನ ಐದನೇ ಎಸೆತದಲ್ಲಿ ರೋಹಿತ್ ಶರ್ಮಾ ಪಂದ್ಯದ ಹಾಗೂ ಟೂರ್ನಿಯ ಮೊದಲ ಬೌಂಡರಿ ಬಾರಿಸಿದ್ದಾರೆ. ಈ ಮೂಲಕ 12 ರನ್ಗಳನ್ನು ಮುಂಬೈ ಕಲೆಹಾಕಿದೆ.
ಎರಡನೇ ಓವರ್ ಅಂತ್ಯಕ್ಕೆ ಮುಂಬೈ ಇಂಡಿಯನ್ಸ್ ತಂಡ 6 ರನ್ ಗಳಿಸಿದೆ. ಮೊದಲ ಓವರ್ನ್ನು ಮೊಹಮದ್ ಸಿರಾಜ್ ಹಾಗೂ ಎರಡನೇ ಓವರ್ ಜೇಮಿಸನ್ ಬೌಲ್ ಮಾಡಿದ್ದಾರೆ. ಆರಂಭಿಕ ಓವರ್ಗಳಲ್ಲಿ ಹೆಚ್ಚು ರನ್ ಬಿಟ್ಟುಕೊಡದೆ ಆರ್ಸಿಬಿ ಎಸೆತಗಾರರು ಉತ್ತಮ ಆಟ ತೋರುತ್ತಿದ್ದಾರೆ. ಎರಡನೇ ಓವರ್ನಲ್ಲಿ ಜೇಮಿಸನ್ ಕೇವಲ 1 ರನ್ ನೀಡಿ, ಉತ್ತಮ ಆಟದ ಭರವಸೆ ನೀಡಿದ್ದಾರೆ.
ಮುಂಬೈ ಇಂಡಿಯನ್ಸ್ ಕಪ್ತಾನ ರೋಹಿತ್ ಶರ್ಮಾ ಸ್ಟ್ರೈಕ್ನಲ್ಲಿ ಆಟವಾಡುತ್ತಿದ್ದಾರೆ. ಕ್ರಿಸ್ ಲಿನ್ ರೋಹಿತ್ಗೆ ಜೊತೆಯಾಗಿದ್ದಾರೆ. ಮೊಹಮಸ್ ಸಿರಾಜ್ ಆರ್ಸಿಬಿ ಪರ ಮೊದಲ ಓವರ್ ಬೌಲಿಂಗ್ ಆರಂಭಿಸಿದ್ದಾರೆ. ಸದ್ಯ 5 ಎಸೆತಗಳಿಗೆ ಮುಂಬೈ ಇಂಡಿಯನ್ಸ್ ತಂಡ, ವಿಕೆಟ್ ನಷ್ವವಿಲ್ಲದೆ 4 ರನ್ ಕಲೆಹಾಕಿದೆ.
ಉತ್ತಮ ಬ್ಯಾಟಿಂಗ್ ಲೈನ್ಅಪ್ ಹೊಂದಿರುವ ಆರ್ಸಿಬಿ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ.
ರೋಹಿತ್ ಶರ್ಮಾ (ನಾಯಕ), ಕ್ರಿಸ್ ಲಿನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಜೇಮ್ಸ್ ನೀಶಮ್, ನಾಥನ್ ಕೌಲ್ಟರ್-ನೈಲ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರಿತ್ ಬುಮ್ರಾ, ಮಾರ್ಕೊ ಜಾನ್ಸೆನ್
ಆರ್ಸಿಬಿ ಪ್ಲೇಯಿಂಗ್ ಇಲೆವೆನ್:
ವಿರಾಟ್ ಕೊಹ್ಲಿ (ನಾಯಕ), ರಜತ್ ಪಾಟಿದಾರ್, ಎಬಿ ಡಿವಿಲಿಯರ್ಸ್, ಗ್ಲೆನ್ ಮ್ಯಾಕ್ಸ್ವೆಲ್, ಮೊಹಮದ್ ಅಜರುದ್ದೀನ್, ಡೇನಿಯಲ್ ಕ್ರಿಶ್ಚಿಯನ್, ವಾಶಿಂಗ್ಟನ್ ಸುಂದರ್, ಕೈಲ್ ಜೆಮಿಸನ್, ನವದೀಪ್ ಸೈನಿ, ಮೊಹಮದ್ ಸಿರಾಜ್, ಯಜ್ವೇಂದ್ರ ಚಹಾಲ್
ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೌಲಿಂಗ್ ಆಯ್ದುಕೊಂಡಿದೆ. ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಮಾಡಲಿದೆ. ಬಹುನಿರೀಕ್ಷಿತ ಆಟಗಾರ ದೇವದತ್ ಪಡಿಕ್ಕಲ್ ಇಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
ಐಪಿಎಲ್ನ 14ನೇ ಆವೃತ್ತಿ ಹೊತ್ತಲ್ಲಿ ಮುಂಬೈ ಇಂಡಿಯನ್ಸ್ ಅಭಿಮಾನಿಗಳೊಂದಿಗೆ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಹೊಸ ಸೀಸನ್ಗೆ ನಾವು ಕಾಲಿಡುತ್ತಿದ್ದೇವೆ. ನಾವೆಲ್ಲರೂ ಜೊತೆಯಾಗೋಣ. ಮುಂಬೈ ಇಂಡಿಯನ್ಸ್ ಪ್ರತಿ ಭಾರತೀಯನ ಕುಟುಂಬ ಎಂದು ಬರೆದುಕೊಂಡಿದೆ.
ಐಪಿಎಲ್ 2021 ಟೂರ್ನಿ ಫಾರ್ಮ್ಯಾಟ್ ಹೀಗಿರಲಿದೆ..
Published On - 11:26 pm, Fri, 9 April 21