ಅಹಮದಾಬಾದ್: ಟೀಂ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ, ನಾಯಕ ವಿರಾಟ್ ಕೊಹ್ಲಿ ನಂತರ ಟಿ 20 ಕ್ರಿಕೆಟ್‌ನಲ್ಲಿ 9000 ರನ್ ಗಳಿಸಿದ ಎರಡನೇ ಭಾರತೀಯ ಎನಿಸಿಕೊಂಡಿದ್ದಾರೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ 20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಸ್ಪಿನ್ನರ್ ಆದಿಲ್ ರಶೀದ್ ಅವರ ಎಸೆತದಲ್ಲಿ ಸಿಂಗಲ್ ತೆಗೆದುಕೊಳ್ಳುವ ಮೂಲಕ ರೋಹಿತ್ ಈ ಸಾಧನೆ ಮಾಡಿದ್ದಾರೆ. ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ರೋಹಿತ್, ಟಿ 20 ಸ್ವರೂಪದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಒಂಬತ್ತನೇ ಆಟಗಾರರಾಗಿದ್ದಾರೆ.
342 ಪಂದ್ಯಗಳಿಂದ 9001 ರನ್ ಗಳಿಸಿದ್ದಾರೆ..
ಟಿ 20ಯಲ್ಲಿ ಅರ್ಧಕ್ಕಿಂತ ಹೆಚ್ಚು ರನ್ಗಳು ಇಂಡಿಯನ್ ಪ್ರೀಮಿಯರ್ ಲೀಗ್ನಿಂದಲೇ ಬಂದಿವೆ. ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ, ರೋಹಿತ್ ಇದುವರೆಗೆ 110 ಪಂದ್ಯಗಳಿಂದ 32.41 ಸರಾಸರಿಯಲ್ಲಿ 2800 ರನ್ ಗಳಿಸಿದ್ದಾರೆ ಮತ್ತು ಸ್ಟ್ರೈಕ್ ರೇಟ್ 138.36 ಆಗಿದೆ. ಟಿ 20ಯಲ್ಲಿ, ಅವರು 342 ಪಂದ್ಯಗಳಿಂದ 9001 ರನ್ ಗಳಿಸಿದ್ದಾರೆ. 133.36 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಅವರು ಆರು ಶತಕಗಳನ್ನು ಮತ್ತು 63 ಅರ್ಧಶತಕಗಳನ್ನು ಬಾರಿಸಿದ್ದಾರೆ. ರೋಹಿತ್ ಐಪಿಎಲ್‌ನಲ್ಲಿ 5000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
ನಾಯಕ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ..
ಕಳೆದ ಜನವರಿಯಲ್ಲಿ ರೋಹಿತ್ ಏಕದಿನ ಪಂದ್ಯಗಳಲ್ಲಿ 9000 ರನ್ ಗಳಿಸಿದ ವಿಶ್ವದ ಮೂರನೇ ಅತಿ ವೇಗದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಟಿ20 ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳಲ್ಲಿ ನಾಯಕ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿ ಟಿ20ನಲ್ಲಿ 9650* ರನ್ ಬಾರಿಸಿದ್ದಾರೆ. ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ರೋಹಿತ್ 9000 ರನ್ ಬಾರಿಸಿದ್ದಾರೆ. ತೃತೀಯ ಸ್ಥಾನಿ ಸುರೇಶ್ ರೈನಾ 8494 ರನ್ ದಾಖಲೆ ಹೊಂದಿದ್ದಾರೆ.
ರೋಹಿತ್ 38 ಟೆಸ್ಟ್ ಪಂದ್ಯಗಳಲ್ಲಿ 2615 ರನ್, 224 ಏಕದಿನ ಪಂದ್ಯಗಳಲ್ಲಿ 9115 ರನ್, 110 ಟಿ20ಐ ಪಂದ್ಯಗಳಲ್ಲಿ 2800 ರನ್, 200 ಐಪಿಎಲ್ ಪಂದ್ಯಗಳಲ್ಲಿ 5230 ರನ್ ದಾಖಲೆ ಹೊಂದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ವೈಯಕ್ತಿಕ ರನ್ (264 ರನ್) ವಿಶ್ವದಾಖಲೆ ರೋಹಿತ್ ಹೆಸರಿನಲ್ಲಿದೆ.
ಇದನ್ನೂ ಓದಿ: India vs England: ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ಪ್ರಸಿದ್ಧ್ ಕೃಷ್ಣ.. ದೇಶಿ ಕ್ರಿಕೆಟ್‌ನಲ್ಲಿ ಕನ್ನಡಿಗನ ಸಾಧನೆ ಹೀಗಿದೆ!