ಕಳೆದ ವಿಶ್ವಕಪ್ನಲ್ಲಿ ಒಂದಲ್ಲಾ ಎರಡಲ್ಲಾ ಐದು ಶತಕಗಳನ್ನ ಸಿಡಿಸಿ ವಿಶ್ವದಾಖಲೆ ಬರೆದಿದ್ದ ರೋಹಿತ್ ಶರ್ಮಾ, ಕ್ರಿಕೆಟ್ ಜಗತ್ತನ್ನೇ ನಿಬ್ಬೆರಗಾಗಿಸಿದ್ರು. ಆದ್ರೆ ಈ ವರ್ಷ ಫೆಬ್ರವರಿಯಲ್ಲಿ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದ ಉಪನಾಯಕ ರೋಹಿತ್ ಶರ್ಮಾ ಗಾಯಕ್ಕೆ ತುತ್ತಾಗಿದ್ರು.
ಹೌದು.. ನ್ಯೂಜಿಲೆಂಡ್ ವಿರುದ್ಧದ 5ನೇ ಟಿಟ್ವೆಂಟಿ ಪಂದ್ಯದಲ್ಲಿ ಅಜೇಯ 60 ರನ್ಗಳಿಸಿ ಅಬ್ಬರಿಸಿತ್ತಿದ್ದ ರೋಹಿತ್ ಶರ್ಮಾ, ಕಾಫ್ ಇಂಜುರಿಗೆ ತುತ್ತಾಗಿದ್ರು. ನೋವು ತಾಳಲಾರದೇ ರೋಹಿತ್ ಶರ್ಮಾ ರಿಟೈರ್ಡ್ ಹರ್ಟ್ ಹೇಳಿ ಪೆವಿಲಿಯನ್ ಸೇರಿಕೊಂಡಿದ್ರು. ಇದಾದ ಬಳಿಕ ರೋಹಿತ್ ಶರ್ಮಾ ನ್ಯೂಜಿಲೆಂಡ್ ವಿರುದ್ಧದ ಸರಣಿಯಿಂದಲೇ ಹೊರಗುಳಿದಿದ್ರು.
ತವರಿಗೆ ಬಂದ ರೋಹಿತ್ ಶರ್ಮಾ, ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ, ರಿಹ್ಯಾಬ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ರು. ಆದ್ರೆ ಕೊರೊನಾದಿಂದಾಗಿ ದೇಶವ್ಯಾಪಿ ಲಾಕ್ಡೌನ್ ಘೋಷಿಸುತ್ತಿದ್ದಂತೆ ರೋಹಿತ್ ಶರ್ಮಾ ಮುಂಬೈಗೆ ತೆರಳಿದ್ರು.
ರೋಹಿತ್ ಅಂತರಾಷ್ಟ್ರೀಯ ಕ್ರಿಕೆಟ್ಗೆ ಕಮ್ಬ್ಯಾಕ್:
‘‘ ಲಾಕ್ಡೌನ್ ಮುಗಿದ ಬಳಿಕ ನಾನು ಮೊದಲು ಹೋಗದೇ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಗೆ. ಅಲ್ಲಿ ನನ್ನ ಫಿಟ್ನೆಸ್ ಪರೀಕ್ಷೆಯನ್ನ ಎದುರಿಸಲಿದ್ದೇನೆ. ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾದ ಬಳಿಕ ನಾನು ಟೀಮ್ ಇಂಡಿಯಾವನ್ನ ಸೇರಿಕೊಂಡು ನನ್ನ ಕರ್ತವ್ಯವನ್ನ ನಿಭಾಯಿಸುತ್ತೇನೆ.’’ ಎಂದು ರೋಹಿತ್ ಶರ್ಮಾ ಉತ್ಸಾಹದಿಂದ ಹೇಳಿಕೊಂಡಿದ್ದಾರೆ.
Published On - 2:58 pm, Tue, 26 May 20