
ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಹಾಗೂ ವ್ಯವಹಾರದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಕ್ರಿಕೆಟ್ ಬ್ಯಾಟ್ ತಯಾರಕ ಅಶ್ರಫ್ ಚೌಧರಿಗೆ ಸಚಿನ್ ತೆಂಡೂಲ್ಕರ್ ಆರ್ಥಿಕ ಸಹಾಯ ಮಾಡಿದ್ದಾರೆ.
ಬಾಲಿವುಡ್ ನಟ ಸೋನು ಸೂದ್ ಕೂಡ ಸಹಾಯ ಮಾಡಲು ಮುಂದೆ ಬಂದಿದ್ದು ಸೋಮವಾರ ಟ್ವಿಟ್ಟರ್ ನಲ್ಲಿ ಅಭಿಮಾನಿಗಳಿಂದ ಅಶ್ರಫ್ ಚೌಧರಿಯವರ ವಿಳಾಸವನ್ನು ಕೇಳಿದ್ದರು. ಈಗ ಸಚಿನ್ ಸಹ ಅನಾರೋಗ್ಯ ಪೀಡಿತ ಬ್ಯಾಟ್ ತಯಾರಕನಿಗೆ ಸಹಾಯ ಮಾಡಿದ್ದಾರೆ.
ಚೌಧರಿ ಅವರ ಆಪ್ತ ಸ್ನೇಹಿತ ಪ್ರಶಾಂತ್ ಜೇಠ್ಮಲಾನಿ ಕೂಡ ಕ್ರಿಕೆಟಿಗರು ಮತ್ತು ಇತರರಿಗೆ ದೇಣಿಗೆ ನೀಡುವಂತೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಸಚಿನ್, ಅಶ್ರಫ್ ಚೌಧರಿಯೊಂದಿಗೆ ಮಾತನಾಡಿದ್ದಾರೆ ಮತ್ತು ಆರ್ಥಿಕವಾಗಿ ಸಹಾಯ ಮಾಡಿದ್ದಾರೆ ಎಂದು ಜೇಠ್ಮಲಾನಿ ತಿಳಿಸಿದ್ದಾರೆ.