ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಯಾವುದೇ ವಿವಾದಗಳಿಲ್ಲ ಎಂದು ಯೋಚಿಸುವುದು ಕೆಲವೊಮ್ಮೆ ವಿಚಿತ್ರವಾಗಿದೆ. ಏಕೆಂದರೆ ಕೆಲವೊಮ್ಮೆ ಆಟಗಾರರು ಕೆಲವು ವಿವಾದಗಳಲ್ಲಿ ಸಿಲುಕಿದರೆ ಮತ್ತೊಮ್ಮೆ ಆಡಳಿತ ಮಂಡಳಿಯೇ ವಿವಾದ ಸುಳಿಗೆ ಸಿಲುಕಿ ಬಿಡುತ್ತದೆ. ಇತ್ತೀಚಿನ ವಿವಾದದ ಬಗ್ಗೆ ನಾವು ಮಾತನಾಡಿದರೆ, ಅದು ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಅಮೀರ್ ಅವರೊಂದಿಗೆ ಸಂಬಂಧ ಹೊಂದಿದೆ. ಅಮೀರ್ 2020 ರ ಡಿಸೆಂಬರ್‌ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು, ಆದರೆ ಅಂದಿನಿಂದ ಇಂದಿನವರೆಗೂ ಅವರ ವಿವಾದಾತ್ಮಕ ಹೇಳಿಕೆಗಳಿಂದಾಗಿ ಅವರು ಸದಾ ಸುದ್ದಿಯಲ್ಲಿದ್ದಾರೆ. ನಂತರ ತಂಡದ ಆಡಳಿತ ಮಂಡಳಿ ನನ್ನ ನಿವೃತ್ತಿ ಕಾರಣ ಎಂದು ದೂರಿದ್ದರು. ಆದರೆ, ಈಗ ಪಾಕಿಸ್ತಾನದ ಮಾಜಿ ಬೌಲರ್ ಶೋಯೆಬ್ ಅಖ್ತರ್, ಮೊಹಮ್ಮದ್ ಅಮೀರ್ ಅವರನ್ನು ದೂಷಿಸಿದ್ದಾರೆ. ಪಿಟಿವಿಯೊಂದಿಗಿನ ಸಂಭಾಷಣೆಯಲ್ಲಿ, ಅಖ್ತರ್ ಅಮೀರ್‌ಗೆ ಬೆಳೆಯಲು ಸಲಹೆ ನೀಡಿದರು ಮತ್ತು ಆಟಗಾರನು ತನ್ನ ಪ್ರದರ್ಶನದ ಮೂಲಕ ಮಾತ್ರ ತನ್ನನ್ನು ತಾನು ಸಾಬೀತುಪಡಿಸಬಹುದು ಎಂದು ಹೇಳಿದರು.
ಪಾಪಾ ಮಿಕ್ಕಿ ಆರ್ಥರ್ ಯಾವಾಗಲೂ ರಕ್ಷಿಸಲು ಸಾಧ್ಯವಾಗುವುದಿಲ್ಲ
ರಾವಲ್ಪಿಂಡಿ ಎಕ್ಸ್‌ಪ್ರೆಸ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಶೋಯೆಬ್ ಅಖ್ತರ್ ಮಾತನಾಡಿ, ಕೆಲವೊಮ್ಮೆ ನಿಮಗೆ ಒಳ್ಳೆಯ ದಿನಗಳು ಬರುತ್ತವೆ ಮತ್ತು ಕೆಲವೊಮ್ಮೆ ಕೆಟ್ಟ ದಿನಗಳ ಬರುತ್ತವೆ. ಪಾಪಾ ಮಿಕ್ಕಿ ಆರ್ಥರ್ ಯಾವಾಗಲೂ ಅವರನ್ನು ರಕ್ಷಿಸಲು ಸಾಧ್ಯವಾಗುವುದಿಲ್ಲ ಎಂದು ಅಮೀರ್ ಅರ್ಥಮಾಡಿಕೊಳ್ಳಬೇಕು. ಕೆಲವೊಮ್ಮೆ ನೀವೇ ಬೆಳೆಯಬೇಕು. ನೀವು ಹಿರಿಯರಂತೆ ವರ್ತಿಸಬೇಕು. ನನ್ನ ಇಚ್ಚೆಯಂತೆ ಆಡಳಿತ ಮಂಡಳಿ ಕಾರ್ಯನಿರ್ವಹಿಸುವುದಿಲ್ಲ ಎಂದು ಅರ್ಥಮಾಡಿಕೊಳ್ಳಲು ನೀವು ಸಾಕಷ್ಟು ಪ್ರಬುದ್ಧರಾಗಿರಬೇಕು. ಹಾಗಾಗಿ ನನ್ನ ಕಠಿಣ ಪರಿಶ್ರಮದಿಂದ ನನ್ನ ಕಾರ್ಯಕ್ಷಮತೆಯ ಮಟ್ಟವನ್ನು ಹೆಚ್ಚಿಸಬೇಕು. ಅಮೀರ್‌ಗೆ ತಂಡದ ತರಬೇತುದಾರ ಮಿಸ್ಬಾ-ಉಲ್-ಹಕ್ ಎಂಬುದು ಇನ್ನು ಅರ್ಥ ಆಗಿಲ್ಲ ಎಂದು ತೋರುತ್ತದೆ. ಅಮೀರ್ ಇನ್ನೂ ಕೂಡ ಮಿಕ್ಕಿ ಆರ್ಥರ್ ಅವರೇ ತಂಡದ ಕೋಚ್ ಎಂದು ಬಾವಿಸಿದ್ದಾರೆ. ಆದರೆ ಮಿಕ್ಕಿ ಆರ್ಥರ್ 2016 ರಿಂದ 2019 ರವರೆಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಆಗಿದ್ದರು. ಪ್ರಸ್ತುತ, ಅವರು 2020 ರ ಡಿಸೆಂಬರ್‌ನಿಂದ ಇಲ್ಲಿಯವರೆಗೆ ಶ್ರೀಲಂಕಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಯನ್ನು ಅಲಂಕರಿಸಿದ್ದಾರೆ ಎಂಬುದನ್ನು ಅಮೀರ್ ಅರ್ಥ ಮಾಡಿಕೊಳ್ಳಲ್ಲಿ.
ಅಮೀರ್ ಹಫೀಜ್ ಅವರಿಂದ ಪಾಠ ಕಲಿಯಲಿ
ಶೋಯೆಬ್ ಅಖ್ತರ್ ಅನುಭವಿ ಬ್ಯಾಟ್ಸ್‌ಮನ್ ಮೊಹಮ್ಮದ್ ಹಫೀಜ್ ಅವರ ಉದಾಹರಣೆಯನ್ನು ನೀಡಿದರು ಮತ್ತು ಅಮೀರ್ ಹಫೀಜ್ ಅವರಿಂದ ಕಲಿಯಬೇಕು ಎಂದು ಹೇಳಿದರು. ಅಖ್ತರ್ ಪ್ರಕಾರ, ತಂಡದ ನಿರ್ವಹಣೆ ಕೂಡ ಮೊಹಮ್ಮದ್ ಹಫೀಜ್ ವಿರುದ್ಧವಾಗಿತ್ತು. ಆದರೆ ಈ ಸಂದರ್ಭಗಳಿಂದ ಹೊರಬರಲು ಹಫೀಜ್ ಇನ್ನೊಂದು ಮಾರ್ಗವನ್ನು ಆರಿಸಿಕೊಂಡರು. ಅವರು ಕೇವಲ ಆಟದ ಮೇಲೆ ಗಮನ ನೀಡಿ ರನ್ ಗಳಿಸುತ್ತಾ ಹೋದರು. ಅವರು ಆಡಳಿತ ಮಂಡಳಿಗೆ ಹಣ ತುಂಬಿದ ಯಾವುದೇ ಲಕೋಟೆಯನ್ನು ನೀಡಲಿಲ್ಲ. ಅಮೀರ್ ಪ್ರಸ್ತುತ ಲಂಡನ್‌ನಲ್ಲಿ ವಾಸಿಸುತ್ತಿದ್ದು, ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಕರಾಚಿ ಕಿಂಗ್ಸ್ ಪರ ಆಡಲಿದ್ದಾರೆ. ಇದರ ನಂತರ, ಅವರು ಟಿ 20 ಬ್ಲಾಸ್ಟ್ನಲ್ಲಿ ಕೆಂಟ್ಗಾಗಿ ಮೈದಾನಕ್ಕಿಳಿಯಲ್ಲಿದ್ದಾರೆ. ಅಮೀರ್ ಪಾಕಿಸ್ತಾನ ಪರ 36 ಟೆಸ್ಟ್, 61 ಏಕದಿನ ಮತ್ತು 50 ಟಿ 20 ಪಂದ್ಯಗಳನ್ನು ಆಡಿದ್ದಾರೆ.