ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ BCCI ಬಿಗ್ಬಾಸ್ ಆಗಿರುವ ಸೌರವ್ ಗಂಗೂಲಿಗೂ ಕೊರೊನಾ ತೆಕ್ಕೆಗೆ ಬೀಳ್ತಿನಿ ಅನ್ನೋ ಭಯ ಶುರುವಾಗಿದೆ. ಇದಕ್ಕೆ ಕಾರಣ ದಾದಾರ ಹಿರಿಯಣ್ಣ ಸ್ನೇಹಾಶೀಷ್ ಗಂಗೂಲಿಗೆ ಸೋಂಕು ದೃಢಪಟ್ಟಿರುವುದು.
ಹೌದು, ಸೌರವ್ ಹಿರಿಯ ಸಹೋದರ ಮತ್ತು ಬೆಂಗಾಲ್ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಸ್ನೇಹಾಶೀಷ್ ಗಂಗೂಲಿಗೆ ಕೊರೊನಾ ಪಾಸಿಟಿವ್ ಎಂದು ವರದಿಯಾಗಿದೆ. ಹೀಗಾಗಿ, ಸದ್ಯಕ್ಕೆ ಸೌರವ್ಗೆ ಹೋಂ ಕ್ವಾರಂಟೈನ್ ಆಗುವಂತೆ ಸೂಚನೆ ನೀಡಲಾಗಿದೆ. ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಸ್ನೇಹಾಶೀಷ್ ಗಂಗೂಲಿ, ಕೊವಿಡ್ ಪರೀಕ್ಷೆ ಮಾಡಿಸಿಕೊಂಡಿದ್ರು. ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸದ್ಯ Belle Vue ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಅಚ್ಚರಿಯೆಂದರೆ, ಕೆಲವು ದಿನಗಳ ಹಿಂದೆಯಷ್ಟೇ ಸೌರವ್ ತನ್ನ ಅಣ್ಣ ಸ್ನೇಹಾಶೀಷ್ ಕೊರೊನಾ ಬಿಕ್ಕಟ್ಟಿನ ನಡುವೆಯೂ ತಮ್ಮ ಫ್ಯಾಕ್ಟರಿಗೆ ಹೋಗಿ ಬರುತ್ತಿದ್ದಾರೆ. ಹೀಗಾಗಿ, ಅವರು ಅಪಾಯದ ಅಂಚಿನಲ್ಲಿದ್ದಾರೆ ಅಂತಾ ಹೇಳಿದ್ರು. ಇದೀಗ ಸೌರವ್ ನುಡಿದ ಭವಿಷ್ಯ ನಿಜವಾಗಿದೆ ಎಂದು ಭಾಸವಾಗುತ್ತದೆ.
ಸದ್ಯಕ್ಕೆ ದಾದಾ ಹೋಂ ಕ್ವಾರಂಟೈನ್ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಹಾಗೆಯೇ, ತಮ್ಮ ಕುಟುಂಬದವರಿಗೂ ಸೋಂಕಿನ ವಿಚಾರದಲ್ಲಿ ಎಚ್ಚರ ವಹಿಸಲು ತಾಕೀತು ಮಾಡಿದ್ದಾರೆ.