ಕ್ರಿಕೆಟ್ ದಂತಕತೆ ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಮಗನ ಹೆಸರು ರೋಹನ್ ಗವಾಸ್ಕರ್ ಅನ್ನೋದು ನಿಮಗೆ ಗೊತ್ತೇ ಇದೆ. ಆದ್ರೆ ಗವಾಸ್ಕರ್ ಯಾಕೆ ತಮ್ಮ ಮಗನಿಗೆ ರೋಹನ್ ಅಂತಾ ಹೆಸರಿಟ್ಟಿದ್ದಾರೆ ಅಂತಾ ಗೊತ್ತಾ? ಬನ್ನಿ ಹಾಗಾದ್ರೆ ರೋಹನ್ ಗವಾಸ್ಕರ್ ಹೆಸರಿನ ಹಿಂದಿರೋ ರೋಚಕ ಸ್ಟೋರಿ ಇಲ್ಲಿದೆ.
ಒಂದೇ ತಂಡದ ಆಟಗಾರರು ಪರಸ್ಪರ ಉತ್ತಮ ಆಟವಾಡುವಂತೆ ಪ್ರೇರೇಪಿಸೋದು ಕಾಮನ್ ಬಿಡಿ. ಅದ್ರಲ್ಲೇನು ವಿಶೇಷತೆಯಿಲ್ಲ. ಆದ್ರೆ ಎದುರಾಳಿ ತಂಡದ ಆಟಗಾರನೊಬ್ಬ ಬ್ಯಾಟಿಂಗ್ ಮಾಡುತ್ತಿದ್ದಾಗ, ಶತಕ ಸಿಡಿಸುವಂತೆ ಸಲಹೆ ನೀಡೋದನ್ನ ನೀವೆಲ್ಲಾದ್ರೂ ಕೇಳಿದ್ದೀರಾ? ಇದೇ ಸ್ಟೋರಿಯಲ್ಲೇ ರೋಹನ್ ಗವಾಸ್ಕರ್ ಹೆಸರಿನ ರಹಸ್ಯ ಅಡಗಿರೋದು.
ಸುನಿಲ್ ಗವಾಸ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದು 1971ರಲ್ಲಿ. ಈ ಸರಣಿ ವೇಳೆ ವೆಸ್ಟ್ ಇಂಡೀಸ್ ತಂಡದಲ್ಲಿದ್ದ ಭಾರತೀಯ ಮೂಲದ ರೋಹನ್ ಕನ್ಹೈ ಅನ್ನೋ ಆಟಗಾರ, ಗವಾಸ್ಕರ್ಗೆ ನೆರವಾಗಿದ್ರು. ರೋಹನ್ ಕನ್ಹೈ ಅವತ್ತು ತನಗೆ ಹೇಗೆ ನೆರವಾಗಿದ್ರು ಅನ್ನೋದನ್ನ ಗವಾಸ್ಕರ್ ಇತ್ತಿಚೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ನಾನು ತಪ್ಪು ಮಾಡಿದಾಗ ರೋಹನ್ ಪಿಸುಗುಡುತ್ತಿದ್ದ:
ನಾನು ಬ್ಯಾಟಿಂಗ್ ಮಾಡುವಾಗ ತಪ್ಪು ಶಾಟ್ಗಳನ್ನು ಹೊಡೆಯುತ್ತಿದ್ದೆ. ಆಗ ಸ್ಲಿಪ್ನಲ್ಲಿದ್ದ ರೋಹನ್, ಯಾರಿಗೂ ಕೇಳದಂತೆ ನನ್ನ ಕಿವಿಯಲ್ಲಿ ಪಿಸುಗುಟ್ಟುತ್ತಿದ್ದರು. ಆಟದ ಮೇಲೆ ಗಮನವಹಿಸು, ಶ್ರದ್ಧೆವಹಿಸು, ನಿನಗೆ ಏನಾಗಿದೆ? ಶತಕ ಸಿಡಿಸೋದು ಬೇಕಿಲ್ವಾ ನಿನಗೆ? ಎನ್ನುತ್ತಿದ್ದ. ಒಬ್ಬ ಎದರಾಳಿ ಆಟಗಾರ ಹೀಗೆ ಹುರಿದುಂಬಿಸುವುದು ನನಗೆ ನಂಬಲಾಗಲಿಲ್ಲ. ರೋಹನ್ ಅವರ ವ್ಯಕ್ತಿತ್ವ ನನಗೆ ಬೆರಗು ತರಿಸಿತ್ತು ಅಂತಾ ಗವಾಸ್ಕರ್ ಹೇಳಿಕೊಂಡಿದ್ದಾರೆ.
ಅವರ ಬ್ಯಾಟ್ಸ್‌ಮನ್‌ಶಿಪ್‌ನ ಹೊರತಾಗಿ, ನಾನು ರೋಹನ್ ಕನ್ಹೈ ಅವರನ್ನು ಯಾಕೆ ಗೌರವಿಸಿದ್ದೇನೆಂದರೆ, ಹೇಗೆ ಅವರು ನನ್ನನ್ನು ರಹಸ್ಯವಾಗಿ ಪ್ರೋತ್ಸಾಹಿಸಿದರು. ಗಯಾನಾದ ಟ್ರಿನಿಡಾಡ್‌ನಲ್ಲಿ ಆಫ್ರಿಕನ್ ಮೂಲದ ಜನರು ಮತ್ತು ಭಾರತೀಯ ಮೂಲದ ಜನರ ನಡುವೆ ಈ ವಿಷಯವಾಗೇ ವಿವಾದಗಳಿರುತ್ತೆ. ಮೈದಾನದಿಂದ ಹೊರಗೆ, ನಾನು ಭೇಟಿಯಾದ ಉತ್ತಮ ವ್ಯಕ್ತಿಗಳಲ್ಲಿ ರೋಹನ್ ಕನ್ಹೈ ಒಬ್ಬರು. ಹೀಗಾಗಿ ನಾನು ನನ್ನ ಮಗನಿಗೆ ರೋಹನ್ ಎಂದು ಹೆಸರಿಟ್ಟೆ ಎಂದು ಗವಾಸ್ಕರ್ ಹೇಳಿಕೊಂಡಿದ್ದಾರೆ.
ರೋಹನ್ ಕನ್ಹೈ ವೆಸ್ಟ್ ಇಂಡೀಸ್ ತಂಡದ ಪರ 79 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. 15 ಶತಕಗಳೊಂದಿಗೆ 6,227 ರನ್ ಗಳಿಸಿದ್ದಾರೆ.