ಧೋನಿ ಜೊತೆಗೆ ಸುರೇಶ್‌ ರೈನಾ ಕೂಡಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ

|

Updated on: Aug 15, 2020 | 11:39 PM

ಟೀಮ್‌ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್‌ ದೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಣೆ ಮಾಡುತ್ತಿದ್ದಂತೆ, ಧೋನಿಯ ಆಪ್ತ ಕ್ರಿಕೆಟರ್‌ ಸುರೇಶ್‌ ರೈನಾ ಕೂಡಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ರಿಟೈರ್‌ಮೆಂಟ್‌ ಬಗ್ಗೆ ಘೋಷಣೆ ಮಾಡಿರುವ ರೈನಾ, ಧೋನಿಯ ಜೊತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ್ದಕ್ಕೆ ಹೆಮ್ಮೆಯಿಂದ, ನಾನೂ ಕೂಡಾ ನಿಮ್ಮ ಜೊತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತಿದ್ದೇನೆ ಎಂದು ಅನೌನ್ಸ್‌ ಮಾಡಿದ್ದಾರೆ. ಉತ್ತರ ಪ್ರದೇಶದವರಾಗಿರುವ ಸುರೇಶ್‌ ರೈನಾ ತಮ್ಮ 13 ವರ್ಷಗಳ ಕ್ರಿಕೆಟ್‌ನಲ್ಲಿ 18 […]

ಧೋನಿ ಜೊತೆಗೆ ಸುರೇಶ್‌ ರೈನಾ ಕೂಡಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ
Follow us on

ಟೀಮ್‌ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್‌ ದೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಣೆ ಮಾಡುತ್ತಿದ್ದಂತೆ, ಧೋನಿಯ ಆಪ್ತ ಕ್ರಿಕೆಟರ್‌ ಸುರೇಶ್‌ ರೈನಾ ಕೂಡಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ರಿಟೈರ್‌ಮೆಂಟ್‌ ಬಗ್ಗೆ ಘೋಷಣೆ ಮಾಡಿರುವ ರೈನಾ, ಧೋನಿಯ ಜೊತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ್ದಕ್ಕೆ ಹೆಮ್ಮೆಯಿಂದ, ನಾನೂ ಕೂಡಾ ನಿಮ್ಮ ಜೊತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತಿದ್ದೇನೆ ಎಂದು ಅನೌನ್ಸ್‌ ಮಾಡಿದ್ದಾರೆ.

ಉತ್ತರ ಪ್ರದೇಶದವರಾಗಿರುವ ಸುರೇಶ್‌ ರೈನಾ ತಮ್ಮ 13 ವರ್ಷಗಳ ಕ್ರಿಕೆಟ್‌ನಲ್ಲಿ 18 ಟೆಸ್ಟ್, 226 ಏಕದಿನ ಹಾಗೂ 78ಟಿ20 ಪಂದ್ಯಗಳನ್ನಾಡಿದ್ದಾರೆ. ಇದುವರೆಗೆ ರೈನಾ ತಾವಾಡಿರುವ 226ಏಕದಿನ ಪಂದ್ಯಗಳಲ್ಲಿ 5615 ರನ್‌ , 18ಟೆಸ್ಟ್‌ನಲ್ಲಿ 768ರನ್‌ ಹಾಗೂ 78ಟಿ20 ಪಂದ್ಯಗಳಲ್ಲಿ 1605 ಗಳಿಸಿದ್ದಾರೆ.

ಐಪಿಎಲ್‌ ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಆಡುವ ರೈನಾ ತಮ್ಮ ಐಪಿಎಲ್‌ ಜರ್ನಿಯನ್ನು ಧೋನಿಯೊಂದಿಗೆ ಮುಂದುವರಿಸಲಿದ್ದಾರೆ.