ಮಹಾಮಾರಿ ಕೊರೊನಾ ವೈರಸ್ನಿಂದ ಸೆಲೆಬ್ರೆಟಿಗಳೆಲ್ಲಾ ಹೆಚ್ಚಿನ ಸಮಯವನ್ನು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಲಾಕ್ಡೌನ್ನಿಂದ ಬೇರೆ ಆಯ್ಕೆಗಳಿಲ್ಲದೆ ನಟ, ನಟಿಯರು, ಕ್ರೀಡಾ ತಾರೆಯರು ತಮ್ಮ ಮನೆಯವರ ಜೊತೆಯೇ ಸಂತೋಷದಿಂದ ಸಮಯವನ್ನು ದೂಡುತ್ತಿದ್ದಾರೆ.
ವರ್ಕೌಟ್ ಮಾಡಬೇಕಾದ್ರೆ ತನ್ನ ಮುದ್ದಾದ ತಮ್ಮ ಹೇಗೆ ಸಹಾಯ ಮಾಡುತ್ತಾನೆಂದು ಸ್ವಲ್ಪ ದಿನದ ಹಿಂದೆ ನಟಿ ಶ್ವೇತಾ ತಿವಾರಿ ಪುತ್ರಿ ಪಾಲಕ್ ತಿವಾರಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಂಡಿದ್ದರು. ಹಾಗಾಗಿ ಇತ್ತೀಚೆಗೆ ಸಾನಿಯಾ ಮಿರ್ಜಾ ಸಹ ತನ್ನ ಮಗುವಿನ ಜೊತೆ ವ್ಯಾಯಾಮ ಮಾಡುತ್ತಿರುವ ಫೋಟೋ ಹಾಕಿದ್ದಾರೆ. ಇದಕ್ಕೂ ಮುಂಚೆ ಸಾನಿಯಾ ಪುತ್ರ ಟೆನ್ನಿಸ್ ಆಡುವುದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದನ್ನು ನೋಡಿದಾಗ ಆ ಮಗುವೇ ಸಾನಿಯಾಗೆ ವ್ಯಾಯಾಮ ಹೇಳಿಕೊಡುತ್ತಿರುವ ಆಗಿದೆ. ಅಮ್ಮನಿಗೆ ಮಗನೇ ಗುರು, ಸ್ಪೂರ್ತಿಯಾಗಿ ಪರಿಣಮಿಸಿರುವುದು ಗೋಚರವಾಗುತ್ತಿದೆ.
ಪೋಷಕರು ಮತ್ತು ಮಕ್ಕಳು ಫಿಟ್ ಆಗಿರಲು ಪರಸ್ಪರ ಹೇಗೆ ಸಹಕಾರ ನೀಡುತ್ತಾರೆ ಎಂಬುದನ್ನು ಲಾಕ್ಡೌನ್ ಸಂದರ್ಭದಲ್ಲಿ ನೋಡಬಹುದಾಗಿದೆ. ಅಲ್ಲದೆ ಮಕ್ಕಳಿಗೆ ಚಿಕ್ಕಂದಿನಿಂದಲೇ ಪೋಷಕರು ಸ್ಫೂರ್ತಿಯಾಗಿದ್ದು, ಅವರು ತಮ್ಮ ಮಕ್ಕಳಲ್ಲಿ ಉತ್ತಮ ಅಭ್ಯಾಸವನ್ನು ಬೆಳೆಸುತ್ತಿದ್ದಾರೆ. ಸಾನಿಯಾ ಮಿರ್ಜಾ ಅಂತೂ ತಮ್ಮ ಮಗುವಿನ ಜೊತೆಗಿನ ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಲೇ ಇದ್ದಾರೆ.
Published On - 7:32 pm, Sun, 3 May 20