ಫಾರ್ಮುಲಾ-1 ರೇಸ್ಗೂ ತಟ್ಟಿದ ಯುದ್ಧದ ಬಿಸಿ!
Formula 1: ಮಾರ್ಚ್ 29 ರಂದು ನಡೆಯುವ ಜಪಾನ್ ಜಿಪಿ ನಂತರ, ಮೇ 3 ರಂದು ನಡೆಯುವ ಮಿಯಾಮಿ ಜಿಪಿ ವರೆಗೆ ಸುಮಾರು 35 ದಿನಗಳ ಕಾಲ ಯಾವುದೇ ರೇಸ್ ಇರುವುದಿಲ್ಲ. ಅಲ್ಲದೆ ಡಿಸೆಂಬರ್ನಲ್ಲಿ ನಡೆಯಲಿರುವ ಅಬುಧಾಬಿ ಗ್ರ್ಯಾಂಡ್ ಪ್ರಿಕ್ಸ್ ರೇಸ್ನೊಂದಿಗೆ ಈ ವರ್ಷದ ಫಾರ್ಮುಲಾ-1 ಸೀಸನ್ ಕೂಡ ಮುಗಿಯಲಿದೆ. ಅಂದರೆ ಎರಡು ರೇಸ್‌ಗಳ ರದ್ದತಿಯೊಂದಿಗೆ ಈ ಬಾರಿ 22 ರೇಸ್‌ಗಳ ಲೆಕ್ಕಾಚಾರ ಇರಲಿದೆ.
ಬಹ್ರೇನ್ ಮತ್ತು ಸೌದಿ ಅರೇಬಿಯಾ ಗ್ರ್ಯಾಂಡ್ ಪ್ರಿಕ್ಸ್ ರೇಸ್‌ಗಳು ಏಪ್ರಿಲ್ ತಿಂಗಳಲ್ಲಿ ನಡೆಯುವುದಿಲ್ಲ ಎಂದು ಫಾರ್ಮುಲಾ ಒನ್ ಮ್ಯಾನೇಜ್ಮೆಂಟ್ (FOM) ಮತ್ತು ಇಂಟರ್ನ್ಯಾಷನಲ್ ಆಟೋಮೊಬೈಲ್ ಫೆಡರೇಶನ್ (FIA) ಅಧಿಕೃತವಾಗಿ ಘೋಷಿಸಿವೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಕ್ಷಿಪಣಿ ದಾಳಿಗಳ ಭೀತಿಯಿಂದಾಗಿ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಫ್ಐಎ ತಿಳಿಸಿದೆ.
ಇತ್ತ ಎರಡು ರೇಸ್‌ಗಳು ಕ್ಯಾನ್ಸಲ್ ಆದರೂ ಬದಲಿಗೆ ಈ ಸೀಸನ್‌ನಲ್ಲಿ ಯಾವುದೇ ಹೊಸ ರೇಸ್‌ಗಳನ್ನು ಸೇರಿಸಲಾಗುತ್ತಿಲ್ಲ ಎಂಬುದನ್ನು ಸಹ ಸ್ಪಷ್ಟಪಡಿಸಲಾಗಿದೆ. ಇದರಿಂದಾಗಿ 2026ರ ಸೀಸನ್ 24 ರೇಸ್‌ಗಳ ಬದಲಿಗೆ 22 ರೇಸ್‌ಗಳಿಗೆ ಸೀಮಿತವಾಗಲಿದೆ.
ಇನ್ನು ಮಾರ್ಚ್ 29 ರಂದು ನಡೆಯುವ ಜಪಾನ್ ಜಿಪಿ ನಂತರ, ಮೇ 3 ರಂದು ನಡೆಯುವ ಮಿಯಾಮಿ ಜಿಪಿ ವರೆಗೆ ಸುಮಾರು 35 ದಿನಗಳ ಕಾಲ ಯಾವುದೇ ರೇಸ್ ಇರುವುದಿಲ್ಲ. ಅಲ್ಲದೆ ಡಿಸೆಂಬರ್ನಲ್ಲಿ ನಡೆಯಲಿರುವ ಅಬುಧಾಬಿ ಗ್ರ್ಯಾಂಡ್ ಪ್ರಿಕ್ಸ್ ರೇಸ್ನೊಂದಿಗೆ ಈ ವರ್ಷದ ಫಾರ್ಮುಲಾ-1 ಸೀಸನ್ ಕೂಡ ಮುಗಿಯಲಿದೆ. ಅಂದರೆ ಎರಡು ರೇಸ್‌ಗಳ ರದ್ದತಿಯೊಂದಿಗೆ ಈ ಬಾರಿ 22 ರೇಸ್‌ಗಳ ಲೆಕ್ಕಾಚಾರ ಇರಲಿದೆ.
ಫಾರ್ಮುಲಾ 1 (F1) ನಲ್ಲಿ ಫೈನಲ್ ಚಾಂಪಿಯನ್ ಅನ್ನು ಪಾಯಿಂಟ್ಸ್ ಸಿಸ್ಟಮ್ ಆಧಾರದ ಮೇಲೆ ಘೋಷಿಸಲಾಗುತ್ತದೆ. ಇಡೀ ಸೀಸನ್‌ನಲ್ಲಿ (ಈ ಬಾರಿ 22 ರೇಸ್‌ಗಳು) ಯಾರು ಅತಿ ಹೆಚ್ಚು ಪಾಯಿಂಟ್ಸ್ ಗಳಿಸುತ್ತಾರೋ ಅವರು ಚಾಂಪಿಯನ್ ಆಗಲಿದ್ದಾರೆ.
ಹೀಗಾಗಿ ಈ ಬಾರಿಯ ರೇಸಿಂಗ್ನಲ್ಲಿ ಮ್ಯಾಕ್ಸ್ ವರ್ಸ್ಟಪ್ಪನ್ (ರೆಡ್ ಬುಲ್), ಲೂಯಿಸ್ ಹ್ಯಾಮಿಲ್ಟನ್ (ಫೆರಾರಿ), ಚಾರ್ಲ್ಸ್ ಲೆಕ್ಲರ್ಕ್ (ಫೆರಾರಿ), ಲ್ಯಾಂಡೊ ನಾರಿಸ್ (ಮೆಕ್ಲಾರೆನ್) ನಡುವೆ ಮತ್ತಷ್ಟು ಪೈಪೋಟಿಯನ್ನು ನಿರೀಕ್ಷಿಸಬಹುದು.
