AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರ್ನಾಲ್ಕು ಜನರಿಗಷ್ಟೇ ಗೊತ್ತಿತ್ತು:ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿಕೆ ಶಿವಕುಮಾರ್

ಮೂರ್ನಾಲ್ಕು ಜನರಿಗಷ್ಟೇ ಗೊತ್ತಿತ್ತು:ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿಕೆ ಶಿವಕುಮಾರ್

ರಮೇಶ್ ಬಿ. ಜವಳಗೇರಾ
|

Updated on: Jun 22, 2026 | 10:37 PM

Share

ದರ್ಗಾಗಳ ಧರ್ಮಗುರುಗಳ ನಿಯೋಗ ಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದು, ಈ ವೇಳೆ ಅಧಿಕಾರ ಹಂಚಿಕೆ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ನಿಮ್ಮ ಮನವಿ ವರಿಷ್ಠರ​ ಗಮನಕ್ಕೆ ತರುತ್ತೇನೆ. ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಬಂದಿತ್ತು. ವರಿಷ್ಠರು ನನ್ನನ್ನೇ ಸಿಎಂ ಮಾಡುತ್ತಾರೆ ಅಂದುಕೊಂಡಿದ್ದೆ. ಆದ್ರೆ, ಸಿದ್ದರಾಮಯ್ಯಗೂ ಅವಕಾಶ ಕೊಡೋಣ ಅಂದರು. ಅಲ್ಲದೇ ಅಂದು ಇಬ್ಬರು ಶೇರ್ ಮಾಡಿಕೊಳ್ಳಿ ಎಂದು ಪಕ್ಷ ಹೇಳಿತ್ತು. ಅಂದು ಈ ನಿರ್ಧಾರವಾಗಿತ್ತು, ಅದರ ಬಗ್ಗೆ ಎಲ್ಲೂ ಹೇಳಲಿಲ್ಲ. ಅಧಿಕಾರ ಹಂಚಿಕೆ ವಿಚಾರ 3ರಿಂದ 4 ಜನರಿಗಷ್ಟೇ ಗೊತ್ತಿತ್ತು. ಆದ್ರೆ ಈಗ ಪಕ್ಷ ನನಗೂ ಅವಕಾಶ ಮಾಡಿಕೊಟ್ಟಿದೆ ಎಂದಿದ್ದಾರೆ.

ಬೆಂಗಳೂರು, (ಜೂನ್ 22): ಸಿದ್ದರಾಮಯ್ಯನವರು (Siddaramaiah) ಸಿಎಂ ಕುರ್ಚಿ ಬಿಟ್ಟಾಗಿದೆ. ಮುಖ್ಯಮಂತ್ರಿಯಾಗುವ ಹಠಕ್ಕೆ ಬಿದ್ದಿದ್ದ ಡಿಕೆ ಶಿವಕುಮಾರ್  (CM DK Shivakumar) ಅಂತಿಮವಾಗಿ ಕುರ್ಚಿ ಮೇಲೆ ಕುಳಿತಾಗಿದೆ. ಆದ್ರೆ, ಇದೀಗ ಈ ಹಿಂದೆ ಹೈಕಮಾಂಡ್ ಮಟ್ಟದಲ್ಲಿ ನಡೆದಿದ್ದ ಅಧಿಕಾರ ಹಂಚಿಕೆ ಗುಟ್ಟನ್ನು ಇದೇ ಮೊದಲ ಬಾರಿಗೆ ಬಹಿರಂಗವಾಗಿ ಬಿಚ್ಚಿಟ್ಟಿದ್ದಾರೆ. ಹೌದು…ಪರಿಷತ್ ಸದಸ್ಯ ಸಲೀಂ ಅಹ್ಮದ್​ಗೆ ಸಚಿವ ಸ್ಥಾನ ನೀಡಬೇಕೆಂದು ದರ್ಗಾಗಳ ಧರ್ಮಗುರುಗಳ ನಿಯೋಗ ಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದು, ಈ ವೇಳೆ ಅಧಿಕಾರ ಹಂಚಿಕೆ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ನಿಮ್ಮ ಮನವಿ ವರಿಷ್ಠರ​ ಗಮನಕ್ಕೆ ತರುತ್ತೇನೆ. ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಬಂದಿತ್ತು. ವರಿಷ್ಠರು ನನ್ನನ್ನೇ ಸಿಎಂ ಮಾಡುತ್ತಾರೆ ಅಂದುಕೊಂಡಿದ್ದೆ. ಆದ್ರೆ, ಸಿದ್ದರಾಮಯ್ಯಗೂ ಅವಕಾಶ ಕೊಡೋಣ ಅಂದರು. ಅಲ್ಲದೇ ಅಂದು ಇಬ್ಬರು ಶೇರ್ ಮಾಡಿಕೊಳ್ಳಿ ಎಂದು ಪಕ್ಷ ಹೇಳಿತ್ತು. ಅಂದು ಈ ನಿರ್ಧಾರವಾಗಿತ್ತು, ಅದರ ಬಗ್ಗೆ ಎಲ್ಲೂ ಹೇಳಲಿಲ್ಲ. ಅಧಿಕಾರ ಹಂಚಿಕೆ ವಿಚಾರ 3ರಿಂದ 4 ಜನರಿಗಷ್ಟೇ ಗೊತ್ತಿತ್ತು. ಆದ್ರೆ ಈಗ ಪಕ್ಷ ನನಗೂ ಅವಕಾಶ ಮಾಡಿಕೊಟ್ಟಿದೆ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow Us