ಟೋಕಿಯೊ ಒಲಿಂಪಿಕ್ಸ್ (Tokyo Olympics) ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಆದರೆ ಅತಿ ದೊಡ್ಡ ಕ್ರೀಡಾಕೂಟಕ್ಕೆ ಕೊರೊನಾ (Corona) ಕರಿ ನೆರಳು ಮತ್ತೆ ಆವರಿಸಿದೆ. ಕ್ರೀಡಾಪ್ರದೇಶದಲ್ಲಿ ಇಬ್ಬರು ಅಥ್ಲೀಟ್ಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅಧಿಕಾರಿಗಳು ಈ ವಿಚಾರವನ್ನು ಖಾತರಿಪಡಿಸಿದ್ದಾರೆ.
ಕ್ರೀಡಾ ಪ್ರದೇಶದಲ್ಲಿ ಸೋಂಕು ಪತ್ತೆಯಾದ ಮೊದಲ ಪ್ರಕರಣ ಇದಾಗಿದ್ದು ಟೋಕಿಯೊ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮತ್ತೋರ್ವ ಕ್ರೀಡಾಪಟುವಿಗೂ ಕೋವಿಡ್ ಸೋಂಕು ದೃಢವಾಗಿದೆ. ಆದರೆ ಆತ ಕ್ರೀಡಾ ಪ್ರದೇಶ ಪ್ರವೇಶಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಲಿಂಪಿಕ್ಸ್ ಸಂಘಟಕರು ಶನಿವಾರ ಕ್ರೀಡಾಪಟುಗಳ ಹಳ್ಳಿಯಲ್ಲಿ ಕೋವಿಡ್ -19 ರ ಮೊದಲ ಪ್ರಕರಣವನ್ನು ವರದಿ ಮಾಡಿದ್ದರು.
ಕೋವಿಡ್-19 ಸೋಂಕು ಪಾಸಿಟಿವ್ ಬಂದಿರುವ ಇಬ್ಬರಲ್ಲಿ ಒಬ್ಬರು ಸೌತ್ ಕೊರಿಯಾದ ಇಂಟರ್ ನ್ಯಾಷನಲ್ ಒಲಿಂಪಿಕ್ ಕಮಿಟಿ (ಐಒಸಿ) ಸದಸ್ಯ ಎಂದು ತಿಳಿದು ಬಂದಿದೆ. ಸೋಂಕಿಗೀಡಾಗಿರುವವರು ಈಗ ಐಸೊಲೇಶನ್ನಲ್ಲಿದ್ದಾರೆ. ಮುಂದಿನ ವಾರ ಪ್ರಾರಂಭವಾಗುವ ಕ್ರೀಡಾಕೂಟಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 14 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸುರಕ್ಷಿತ ಒಲಿಂಪಿಕ್ನ ಭರವಸೆಗಳ ಬಗ್ಗೆ ಅನುಮಾನ ಮೂಡುತ್ತಿದೆ.
ಟೋಕಿಯೊ ಒಲಿಂಪಿಕ್ಸ್ ಮೇಲೆ ಕೊರೊನಾ ವೈರಸ್ ಪರಿಣಾಮ ಬೀರುತ್ತಲೇ ಇದೆ. ಕಳೆದ ವರ್ಷವೂ ಕೊರೊನಾದಿಂದಾಗಿ ಈ ಆಟಗಳನ್ನು ಒಂದು ವರ್ಷ ಮುಂದೂಡಲಾಯಿತು. ಈ ವರ್ಷ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ, ಆದರೆ ಕೊರೊನಾಂತಕ ಕಡಿಮೆಯಾಗಿಲ್ಲ.
ಈ ಮೊದಲು ಘಾನಾದ ಆಟಗಾರ ಕೊರೊನಾ ಪಾಸಿಟಿವ್ ಎಂಬ ಸುದ್ದಿ ಬಂದಿತ್ತು. ಅದೇ ಸಮಯದಲ್ಲಿ, ಒಲಿಂಪಿಕ್ ನಿರಾಶ್ರಿತರ ತಂಡವು ಕೊರೊನಾ ಸೋಂಕಿಗೆ ಒಳಗಾದ ಸುದ್ದಿ ಕೂಡ ಕೇಳಿ ಬಂದಿತ್ತು. ಟೋಕಿಯೊಗೆ ತೆರಳುವ ಮೊದಲು, ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ನಿರಾಶ್ರಿತರ ತಂಡದ ಅಧಿಕಾರಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಕಂಡುಬಂದಿತ್ತು.
IND vs SL: ಲಂಕಾ ಕೊನೆಯದಾಗಿ ಏಕದಿನ ಸರಣಿ ಗೆದ್ದಾಗ ಭಾರತದ ಈ ಸ್ಟಾರ್ ಪ್ಲೇಯರ್ ಹುಟ್ಟಿಯೇ ಇರಲಿಲ್ಲ!
(Tokyo Games Two Athletes Positive For COVID-19 In Olympic Village Say Officials)