IND vs SL: ಲಂಕಾ ಕೊನೆಯದಾಗಿ ಏಕದಿನ ಸರಣಿ ಗೆದ್ದಾಗ ಭಾರತದ ಈ ಸ್ಟಾರ್ ಪ್ಲೇಯರ್ ಹುಟ್ಟಿಯೇ ಇರಲಿಲ್ಲ!

India vs Sri lanka: ಅಚ್ಚರಿಯ ವಿಚಾರ ಎಂದರೆ 1997ರ ಬಳಿಕ ಶ್ರೀಲಂಕಾ ತಂಡ ಭಾರತ ವಿರುದ್ಧ ಒಂದೇ ಒಂದು ಏಕದಿನ ಸರಣಿಯನ್ನು ವಶಪಡಿಸಿಕೊಂಡಿಲ್ಲ.

IND vs SL: ಲಂಕಾ ಕೊನೆಯದಾಗಿ ಏಕದಿನ ಸರಣಿ ಗೆದ್ದಾಗ ಭಾರತದ ಈ ಸ್ಟಾರ್ ಪ್ಲೇಯರ್ ಹುಟ್ಟಿಯೇ ಇರಲಿಲ್ಲ!
Team india
Follow us
TV9 Web
| Updated By: Vinay Bhat

Updated on: Jul 18, 2021 | 10:20 AM

ಭಾರತ ಹಾಗೂ ಶ್ರೀಲಂಕಾ ನಡುವಣ ಏಕದಿನ ಸರಣಿ ಆರಂಭಕ್ಕೆ ಕ್ಷಣಕಣನೆ ಶುರುವಾಗಿದೆ. ಇಂದು ಮಧ್ಯಾಹ್ನ ಕೊಲಂಬೋದ ಆರ್‌ ಪ್ರೇಮದಾಸ್‌ ಕ್ರೀಡಾಗಣದಲ್ಲಿ ಉಭಯ ತಂಡಗಳು ಮೊದಲನೇ ಏಕದಿನ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಉಭಯ ತಂಡಗಳಲ್ಲಿ ಸಾಕಷ್ಟು ಹೊಸ ಯುವ ಆಟಗಾರರೇ ತುಂಬಿರುವುದರಿಂದ ಪಂದ್ಯ ಕುತೂಹಲ ಕೆರಳಿಸಿದ. ಮೇಲ್ನೋಟಕ್ಕೆ ಧವನ್ ನೇತೃತ್ವದ ಟೀಮ್ ಇಂಡಿಯಾವೇ ಬಲಿಷ್ಠವಾಗಿ ಕಂಡರೂ ಸತತ ಸೋಲುಗಳಿಂದ ಕಂಗೆಟ್ಟಿರುವ ಲಂಕಾವನ್ನು ಕಡೆಗಣಿಸುವಂತಿಲ್ಲ.

ಈ ಸರಣಿ ಟೀಮ್ ಇಂಡಿಯಾದ ದೇವದತ್ ಪಡಿಕ್ಕಲ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಸೇರಿದಂತೆ ಪದಾರ್ಪಣೆ ಮಾಡಲಿರುವ ಆಟಗಾರರಿಗೆ ಉತ್ತಮ ವೇದಿಕೆಯಾಗಿದೆ. ಇದರ ಜೊತೆಗೆ ಮನೀಶ್ ಪಾಂಡೆ, ಕುಲ್ದೀಪ್ ಯಾದವ್, ಕ್ರುನಾಲ್ ಪಾಂಡ್ಯ ಹಾಗೂ ಪೃಥ್ವಿ ಶಾಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಕೊನೆಯ ಅವಕಾಶ ಎಂದೇ ಹೇಳಬಹುದು. ಹೀಗಾಗಿ ಭಾರತ ತಂಡಕ್ಕೆ ಪ್ರೆಶರ್ ಅಂತೂ ಕಂಡಿತ ಇದೆ.

ಉಭಯ ತಂಡಗಳು ಈವರೆಗೆ ಏಕದಿನ ಕ್ರಿಕೆಟ್​ನಲ್ಲಿ 159 ಬಾರಿ ಮುಖಾಮುಖಿ ಆಗಿದೆ. ಇದರಲ್ಲಿ ಭಾರತ 91 ಪಂದ್ಯಗಳಲ್ಲಿ ಗೆದ್ದರೆ, ಲಂಕಾ 56 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಒಂದು ಪಂದ್ಯ ಟೈ ಆಗಿದೆ. ಭಾರತ ಸತತವಾಗಿ ಲಂಕಾ ವಿರುದ್ಧ 10 ಸರಣಿ ಗೆದ್ದ ಸಾಧನೆ ಮಾಡಿದೆ.

ಅಚ್ಚರಿಯ ವಿಚಾರ ಎಂದರೆ 1997ರ ಬಳಿಕ ಶ್ರೀಲಂಕಾ ತಂಡ ಭಾರತ ವಿರುದ್ಧ ಒಂದೇ ಒಂದು ಏಕದಿನ ಸರಣಿಯನ್ನು ವಶಪಡಿಸಿಕೊಂಡಿಲ್ಲ. ಅಂದರೆ ಇಂದಿನ ಪಂದ್ಯದಲ್ಲಿ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಲಿರುವ ಪೃಥ್ವಿ ಶಾ ಅವರು ಲಂಕಾ ಕೊನೆಯದಾಗಿ ಭಾರತ ವಿರುದ್ಧ ಓಡಿಐ ಗೆದ್ದಾಗ ಹುಟ್ಟಟಿಯೇ ಇರಲಿಲ್ಲ.

ಇನ್ನೂ ಲಂಕಾ ಪ್ರವಾಸದಲ್ಲಿ ಭಾರತದ ನಾಯಕತ್ವ ವಹಿಸಿಕೊಂಡಿರುವ ಶಿಖರ್ ಧವನ್ ಇನ್ನು 23 ರನ್ ಬಾರಿಸಿದರೆ ಏಕದಿನದಲ್ಲಿ 6000 ರನ್ ಪೂರ್ಣಗೊಳಿಸಲಿದ್ದಾರೆ. ಈ ದಾಖಲೆಯೊಂದಿಗೆ ಧವನ್ ಏಕದಿನ ಕ್ರಿಕೆಟ್​ನಲ್ಲಿ 6000 ರನ್ ಬಾರಿಸಿದ ಐದನೇ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಗುರುತಿಸಿಕೊಳ್ಳಲಿದ್ದಾರೆ. ಜೊತೆಗೆ ಕೇವಲ 17 ರನ್ ಬಾರಿಸಿದರೆ ಧವನ್ ಶ್ರೀಲಂಕಾ ವಿರುದ್ಧ ಏಕದಿನದಲ್ಲಿ 1000 ರನ್ ಬಾರಿಸಿದಂತಾಗುತ್ತದೆ.

ಇದರ ಜೊತೆಗೆ ಯುಜುವೇಂದ್ರ ಚಹಾಲ್ ಇನ್ನು 8 ವಿಕೆಟ್‌ಗಳು ಕಿತ್ತರೆ ಏಕದಿನ ಕ್ರಿಕೆಟ್‌ನಲ್ಲಿ 100 ವಿಕೆಟ್‌ ಪಡೆದ ದಾಖಲೆ ಮಾಡಲಿದ್ದಾರೆ. ಉಪನಾಯಕ ಭುವನೇಶ್ವರ್ ಕುಮಾರ್‌ಗೆ ಇನ್ನು 12 ವಿಕೆಟ್‌ಗಳು ಸಿಕ್ಕರೆ ಏಕದಿನದಲ್ಲಿ 150 ವಿಕೆಟ್‌ಗಳ ಸಾಧನೆಗೆ ಕಾರಣರಾಗಲಿದ್ದಾರೆ.

ಪಂದ್ಯ ಆರಂಭ:

ದಿನಾಂಕ, ಸಮಯ: ಜುಲೈ 18, ಭಾನುವಾರ- ಮಧ್ಯಾಹ್ನ 3:00

ಸ್ಥಳ: ಆರ್‌ ಪ್ರೇಮದಾಸ್‌ ಕ್ರೀಡಾಂಗಣ, ಕೊಲಂಬೊ

ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್‌ ನೆಟ್‌ವರ್ಕ್

ಭಾರತ-ಶ್ರೀಲಂಕಾ ಮೊದಲ ಏಕದಿನ ಪಂದ್ಯ ಎಲ್ಲಿ?, ಯಾವುದರಲ್ಲಿ ನೇರಪ್ರಸಾರ?, ಎಷ್ಟು ಗಂಟೆಗೆ?, ಇಲ್ಲಿದೆ ಮಾಹಿತಿ

ಇಂದು ಲಂಕಾ ವಿರುದ್ಧ ಮೊದಲ ಏಕದಿನ: ಭಾರತ ಪರ ಪದಾರ್ಪಣೆ ಮಾಡಲಿದ್ದಾರೆ ಈ ಆಟಗಾರ?

(Prithvi shaw not yet born when Sri Lanka won ODI Series against India for the last time)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ