ಇದು ನನ್ನ ಕನಸು. ಆದರೆ, 37 ವರ್ಷದಿಂದ ಅಪೂರ್ಣವಾಗಿ ಉಳಿದ ಕನಸು. ಅದನ್ನು ಪರಿಪೂರ್ಣಗೊಳಿಸಿದ ನಿನಗೆ ಶುಭಾಶಯಗಳು. ಧನ್ಯವಾದಗಳು ಮಗನೇ ಎಂದು ಹೃದಯತುಂಬಿ ಶುಭಹಾರೈಸಿದ್ದು ಮತ್ಯಾರೂ ಅಲ್ಲ. ಭಾರತದ ಚಿನ್ನದ ಹುಡುಗಿ ಎಂದು ಹೆಸರು ಪಡೆದ, ಭಾರತದ ಹೆಮ್ಮೆಯ ಒಲಿಂಪಿಯನ್, ಅಥ್ಲೀಟ್ ಪಿ.ಟಿ ಉಷಾ. ಇದು 37 ವರ್ಷಗಳ ಅಪೂರ್ಣ ಕನಸು ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಅದನ್ನು ನೀನು ನಿಜ ಮಾಡಿದ್ದೀಯಾ ಮಗು. ನಿನಗೆ ಧನ್ಯವಾದಗಳು ಎಂದಿದ್ದಾರೆ.
ಪಿಟಿ ಉಷಾ ಹೀಗೆ ಹೇಳಲು ಕಾರಣವೇನು ಎಂದು ನೀವು ಅಂದುಕೊಳ್ಳಬಹುದು. ಪಿಟಿ ಉಷಾ ಭಾರತದ ಓಟದ ರಾಣಿ ಎಂದೇ ಕರೆಸಿಕೊಂಡವರು. ಅವರು ಈಗಕ್ಕೆ 37 ವರ್ಷಗಳ ಹಿಂದೆ, ಅಂದರೆ 1984ರ ಲಾಸ್ ಏಂಜಲಿಸ್ ಸಮ್ಮರ್ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ್ದರು. ಆ ಒಲಿಂಪಿಕ್ನಲ್ಲಿ ಭಾರತ ಪದಕ ಗೆದ್ದಿರಲಿಲ್ಲ. ಆದರೆ, ಭಾರತ ಮಹಿಳಾ ಅಥ್ಲೀಟ್ಗಳನ್ನು ಒಲಿಂಪಿಕ್ಸ್ನ ವೇದಿಕೆಗೆ ತಂದಿದ್ದಕ್ಕೆ ಪ್ರಶಂಸೆ ವ್ಯಕ್ತವಾಗಿತ್ತು.
ಆ ಒಲಿಂಪಿಕ್ಸ್ನಲ್ಲಿ ಪಿಟಿ ಉಷಾ, 400 ಮೀಟರ್ ಹರ್ಡಲ್ಸ್ನಲ್ಲಿ ಕಂಚಿನ ಪದಕವನ್ನು ಗೆಲ್ಲುವ ಅವಕಾಶ ಸ್ವಲ್ಪದರಲ್ಲೇ ತಪ್ಪಿಹೋಗಿತ್ತು. 1984 ಒಲಿಂಪಿಕ್ಸ್ ಆಗಿ ಈಗ 37 ವರ್ಷವಾಗಿದೆ. ಅಥ್ಲೀಟ್ ಒಬ್ಬಾತ ಇಂದು ಭಾರತಕ್ಕೆ ಚಿನ್ನ ತಂದಕೊಟ್ಟಿದ್ದಾನೆ. ಅಥ್ಲೆಟಿಕ್ ಪಂದ್ಯವೊಂದರಲ್ಲಿ ಭಾರತೀಯರಿಗೆ ಮೊತ್ತಮೊದಲ ಬಾರಿಗೆ ಒಲಿಂಪಿಕ್ ಚಿನ್ನದ ಪದಕ ಲಭಿಸಿದೆ. ಹಾಗೂ ಅಭಿನವ್ ಬಿಂದ್ರಾ ಬಳಿಕ ವೈಯಕ್ತಿಕ ಸ್ಪರ್ಧೆಯೊಂದರಲ್ಲಿ ಎರಡನೇ ಬಾರಿಗೆ ಒಲಿಂಪಿಕ್ ಚಿನ್ನದ ಪದಕವನ್ನು ನೀರಜ್ ಚೋಪ್ರಾ ಪಡೆದಿದ್ದಾರೆ. ಆ ಮೂಲಕ, ಟ್ರಾಕ್ ಮತ್ತು ಫೀಲ್ಡ್ ಅಥ್ಲೀಟ್ ಒಬ್ಬ ಒಲಿಂಪಿಕ್ಸ್ನಲ್ಲಿ ಚಿನ್ನ ಗೆಲ್ಲುವ ಕನಸು ಇಂದು ಪೂರ್ಣವಾಗಿದೆ.
ಈ ಸಂಭ್ರಮದ ಕಾರಣಕ್ಕೆ ಟ್ವೀಟ್ ಮಾಡಿದ ಪಿಟಿ ಉಷಾ
Realised my unfinished dream today after 37 years. Thank you my son @Neeraj_chopra1 ???#Tokyo2020 pic.twitter.com/CeDBYK9kO9
— P.T. USHA (@PTUshaOfficial) August 7, 2021
ಚೋಪ್ರಾ ಗೆದ್ದ ಈ ಮೊದಲ ಪದಕಗಳಿವು
ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಚೊಚ್ಚಲ ಚಿನ್ನ ತಂದುಕೊಟ್ಟ ಚೋಪ್ರಾ, 2017ರ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದಿದ್ದರು. 2018ರ ಏಷ್ಯನ್ ಗೇಮ್ಸ್ನಲ್ಲಿ ಕೂಡ ಚಿನ್ನದ ಪದಕ ಗೆದ್ದಿದ್ದರು. ಚೋಪ್ರಾ 2018ರ ಕಾಮನ್ವೆಲ್ತ್ ಗೇಮ್ಸ್ನಲ್ಲೂ ಚಿನ್ನದ ಪದಕ ಪಡೆದಿದ್ದರು. ಅಥ್ಲೆಟಿಕ್ ಪಂದ್ಯವೊಂದರಲ್ಲಿ ಭಾರತೀಯ ಒಬ್ಬರಿಗೆ ಮೊತ್ತಮೊದಲ ಬಾರಿಗೆ ಒಲಿಂಪಿಕ್ ಚಿನ್ನದ ಪದಕ ಇಂದು ಲಭ್ಯವಾಗಿದೆ. ಅಭಿನವ್ ಬಿಂದ್ರಾ ಬಳಿಕ ವೈಯಕ್ತಿಕ ಸ್ಪರ್ಧೆಯೊಂದರಲ್ಲಿ ಎರಡನೇ ಬಾರಿಗೆ ಒಲಿಂಪಿಕ್ ಚಿನ್ನದ ಪದಕವನ್ನು ನೀರಜ್ ಚೋಪ್ರಾ ಪಡೆದಿದ್ದಾರೆ.
ಇದನ್ನೂ ಓದಿ: Neeraj Chopra: ಚಿನ್ನದ ಹುಡುಗ ‘ಸುಬೇದಾರ್ ನೀರಜ್ ಚೋಪ್ರಾ’ ಬಗ್ಗೆ ನಿಮಗೆಷ್ಟು ಗೊತ್ತು?
(Realised my unfinished dream after 37 years PT Usha congratulates Neeraj Chopra)