AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tokyo olympics: ಸ್ವರ್ಗದಿಂದ ಇದನ್ನು ನೋಡುತ್ತಿರುತ್ತಾರೆ! ಚೊಚ್ಚಲ ಚಿನ್ನದ ಪದಕವನ್ನು ಮಿಲ್ಖಾ ಸಿಂಗ್​ಗೆ ಅರ್ಪಿಸಿದ ನೀರಜ್ ಚೋಪ್ರಾ

Neeraj Chopra: . ಚಿನ್ನದ ಪದಕ ಗೆದ್ದ ನಂತರ, ನೀರಜ್ ಚೋಪ್ರಾ ಈ ಯಶಸ್ಸನ್ನು ಮಿಲ್ಖಾ ಸಿಂಗ್ ಅವರಿಗೆ ಅರ್ಪಿಸಿದರು. ಈ ಪದಕ ಮಿಲ್ಖಾ ಸಿಂಗ್ ಅವರ ಹೆಸರಿನಲ್ಲಿದೆ ಅವರು ಸ್ವರ್ಗದಿಂದ ಇದನ್ನು ನೋಡುತ್ತಿರುತ್ತಾರೆ ಎಂದರು.

Tokyo olympics: ಸ್ವರ್ಗದಿಂದ ಇದನ್ನು ನೋಡುತ್ತಿರುತ್ತಾರೆ! ಚೊಚ್ಚಲ ಚಿನ್ನದ ಪದಕವನ್ನು ಮಿಲ್ಖಾ ಸಿಂಗ್​ಗೆ ಅರ್ಪಿಸಿದ ನೀರಜ್ ಚೋಪ್ರಾ
ನೀರಜ್ ಚೋಪ್ರಾ
TV9 Web
| Edited By: |

Updated on: Aug 07, 2021 | 8:46 PM

Share

ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ನೀರಜ್ ಚೋಪ್ರಾ ಇತಿಹಾಸ ಸೃಷ್ಟಿಸಿದರು. ಇದು ಅಥ್ಲೆಟಿಕ್ಸ್‌ನಲ್ಲಿ ಭಾರತದ ಮೊದಲ ಪದಕವಾಗಿದೆ. ಚಿನ್ನದ ಪದಕ ಗೆದ್ದ ನಂತರ, ನೀರಜ್ ಚೋಪ್ರಾ ಈ ಯಶಸ್ಸನ್ನು ಮಿಲ್ಖಾ ಸಿಂಗ್ ಅವರಿಗೆ ಅರ್ಪಿಸಿದರು. ಈ ಪದಕ ಮಿಲ್ಖಾ ಸಿಂಗ್ ಅವರ ಹೆಸರಿನಲ್ಲಿದೆ ಅವರು ಸ್ವರ್ಗದಿಂದ ಇದನ್ನು ನೋಡುತ್ತಿರುತ್ತಾರೆ ಎಂದರು. ಇದು ತುಂಬಾ ನಂಬಲಾಗದ ಕ್ಷಣ ಎಂದು ನೀರಜ್ ತಮ್ಮ ಪ್ರದರ್ಶನದ ಬಗ್ಗೆ ಹೇಳಿಕೊಂಡಿದ್ದಾರೆ.

ಚೋಪ್ರಾ ಮೂರು ದಿನಗಳ ಹಿಂದೆ ಫೈನಲ್​ಗೆ ಅರ್ಹತೆ ಗಳಿಸಿದ್ದರು. ಜೊತೆಗೆ ಫೈನಲ್‌ನಲ್ಲಿ ಇನ್ನೂ ಉತ್ತಮ ಪ್ರದರ್ಶನ ನೀಡಿದ್ದರು, 87.58 ಮೀಟರ್‌ಗಳ ಅತ್ಯುತ್ತಮ ಪ್ರಯತ್ನದೊಂದಿಗೆ ಪ್ರಥಮ ಸ್ಥಾನ ಪಡೆದರು. ಇದು ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಟ್ರ್ಯಾಕ್ ಮತ್ತು ಫೀಲ್ಡ್ ಈವೆಂಟ್‌ಗಳಲ್ಲಿ ದೇಶದ ಮೊದಲ ಪದಕವಾಗಿದೆ. 23 ವರ್ಷದ ಚೋಪ್ರಾ ಐತಿಹಾಸಿಕ ಚಿನ್ನದ ಪದಕ ಗೆದ್ದ ನಂತರ, ನನಗೆ ನಂಬಲಾಗುತ್ತಿಲ್ಲ. ಅಥ್ಲೆಟಿಕ್ಸ್​ನಲ್ಲಿ ಭಾರತ ಚಿನ್ನದ ಪದಕ ಗೆದ್ದಿರುವುದು ಇದೇ ಮೊದಲು, ಹಾಗಾಗಿ ನನಗೆ ತುಂಬಾ ಸಂತೋಷವಾಗಿದೆ. ಇತರ ಕ್ರೀಡೆಗಳಲ್ಲಿ ನಾವು ಕೇವಲ ಒಂದು ಒಲಿಂಪಿಕ್ ಚಿನ್ನವನ್ನು ಹೊಂದಿದ್ದೇವೆ. ಅಥ್ಲೆಟಿಕ್ಸ್‌ನಲ್ಲಿ ಇದು ನಮ್ಮ ಮೊದಲ ಒಲಿಂಪಿಕ್ ಪದಕವಾಗಿದೆ. ಇದು ನನಗೆ ಮತ್ತು ದೇಶಕ್ಕೆ ಹೆಮ್ಮೆಯ ಕ್ಷಣ ಎಂದರು.

ನೀರಜ್ ಚಿನ್ನ ನಿರೀಕ್ಷಿಸಿರಲಿಲ್ಲ ಜರ್ಮನಿಯ ಶ್ರೇಷ್ಠ ಅಥ್ಲೀಟ್ ಜೊಹಾನ್ಸ್ ವೆಟ್ಟರ್ ಅವರನ್ನೂ ಸೋಲಿಸಿ ಚಿನ್ನದ ಪದಕ ಗೆದ್ದಾಗ ಆಶ್ಚರ್ಯವಾಗಿದೆಯೇ ಎಂದು ಕೇಳಿದಾಗ ಅವರು, ನಾನು ಅರ್ಹತಾ ಸುತ್ತಿನಲ್ಲಿ ಉತ್ತಮ ಎಸೆತವನ್ನು ಎಸೆದಿದ್ದೇನೆ ಹಾಗಾಗಿ ಫೈನಲ್‌ನಲ್ಲಿ ನಾನು ಉತ್ತಮವಾಗಿ ಮಾಡಬಹುದು ಎಂದು ನನಗೆ ತಿಳಿದಿತ್ತು. ಆದರೆ ಅದು ಚಿನ್ನವಾಗುತ್ತದೆಯೇ ಎಂದು ನನಗೆ ಗೊತ್ತಿರಲಿಲ್ಲ ಆದರೆ ನನಗೆ ತುಂಬಾ ಸಂತೋಷವಾಗಿದೆ. ಒಲಿಂಪಿಕ್ಸ್ ನಂತಹ ಹಂತದಲ್ಲಿ ಚೋಪ್ರಾ ಪ್ರಾಬಲ್ಯ ಸಾಧಿಸಿ ಚಿನ್ನದ ಪದಕ ಗೆಲ್ಲುತ್ತಾನೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಪದಕ ಗೆದ್ದ ನಂತರ, ಪದಕ ಭಾರವಾಗಿದೆಯೇ ಎಂದು ಕೇಳಿದಾಗ, ಅವರು 10 ಕೆಜಿ ಇದ್ದರೂ ಅದು ಹಗುರವಾಗಿರುತ್ತಿತ್ತು ಎಂದು ಹೇಳಿದರು.

Follow Us
TV9 Web
TV9 Web

TV9 Kannada

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ