Tokyo Olympics 2020 Live: ಟೋಕಿಯೋ ಒಲಿಂಪಿಕ್ಸ್ 2020ಕ್ಕೆ ವಿದ್ಯುಕ್ತ ಚಾಲನೆ: ಭಾರತದ ತ್ರಿವರ್ಣ ಧ್ವಜ ಹಿಡಿದು ಸಾಗಿದ ಮೇರಿ ಕೋಮ್-ಮನ್ಪ್ರೀತ್

| Updated By: Vinay Bhat

Updated on: Jul 23, 2021 | 7:02 PM

Tokyo Olympics 2020-21: ಜಪಾನ್ ರಾಜಧಾನಿಯಲ್ಲಿ 2020ರ ಒಲಿಂಪಿಕ್ಸ್ ಭರ್ಜರಿಯಾಗಿ ಆರಂಭಗೊಂಡಿದೆ. ಮೊನ್ನೆಯೇ ಕೆಲ ಕ್ರೀಡೆಗಳ ಆಟ ಆರಂಭವಾದರೂ ಇಂದು ಒಲಿಂಪಿಕ್ಸ್​ಗೆ ಅಧಿಕೃತ ಚಾಲನೆ ಸಿಕ್ಕಿದೆ. ಭಾರತೀಯ ಕಾಲಮಾನದ ಪ್ರಕಾರ ಸಂಜೆ 4:30ಕ್ಕೆ ಉದ್ಘಾಟನಾ ಸಮಾರಂಭ ಆರಂಭವಾಗಿದೆ.

Tokyo Olympics 2020 Live: ಟೋಕಿಯೋ ಒಲಿಂಪಿಕ್ಸ್ 2020ಕ್ಕೆ ವಿದ್ಯುಕ್ತ ಚಾಲನೆ: ಭಾರತದ ತ್ರಿವರ್ಣ ಧ್ವಜ ಹಿಡಿದು ಸಾಗಿದ ಮೇರಿ ಕೋಮ್-ಮನ್ಪ್ರೀತ್
Olympics 2020

LIVE NEWS & UPDATES

  • 23 Jul 2021 07:02 PM (IST)

    ಭಾರತಕ್ಕೆ ಶನಿವಾರ ಸಾಲು ಸಾಲು ಸವಾಲು

    ಜುಲೈ 24 ರಂದು ನಡೆಯಲಿರುವ ಭಾರತದ ಕ್ರೀಡಾಪಟುಗಳ ವೇಳಾಪಟ್ಟಿ ಹೀಗಿದೆ:

    1. ಈಕ್ವೆಸ್ಟ್ರಿಯನ್: ವೈಯಕ್ತಿಕ ಡ್ರೆಸ್ಸೇಜ್ ಗ್ರ್ಯಾಂಡ್ ಪ್ರಿಕ್ಸ್
    2. ಶೂಟಿಂಗ್ – ಮಹಿಳೆಯರ 10 ಮೀ ಏರ್ ರೈಫಲ್ ಅರ್ಹತಾ ಸುತ್ತು – ಬೆಳಗ್ಗೆ 5:00
    3. ಟೇಬಲ್ ಟೆನಿಸ್ – ಪುರುಷರ ಸಿಂಗಲ್ಸ್ ಪ್ರಾಥಮಿಕ ಸುತ್ತು – ಬೆಳಗ್ಗೆ 5:30
    4. ಟೇಬಲ್ ಟೆನಿಸ್ – ಮಹಿಳಾ ಸಿಂಗಲ್ಸ್ ಪ್ರಾಥಮಿಕ ಸುತ್ತು – ಬೆಳಗ್ಗೆ 5:30
    5. ಬಿಲ್ಲುಗಾರಿಕೆ – ಮಿಕ್ಸ್ಡ್ ಟೀಮ್ – ಬೆಳಗ್ಗೆ 6:00
    6. ಹಾಕಿ – ಪುರುಷರು vs ನ್ಯೂಜಿಲೆಂಡ್ – ಬೆಳಗ್ಗೆ 6.30
    7. ಶೂಟಿಂಗ್ – ಮಹಿಳೆಯರ 10 ಮೀ ಏರ್ ರೈಫಲ್ ಫೈನಲ್ – ಬೆಳಗ್ಗೆ 7:15
    8. ಜೂಡೋ – ಮಹಿಳೆಯರು 48 ಕೆಜಿ, ಎಲ್ಲಾ ಸುತ್ತುಗಳು – ಬೆಳಗ್ಗೆ 7:30
    9. ಟೇಬಲ್ ಟೆನಿಸ್ – ಮಿಶ್ರ ಡಬಲ್ಸ್ 16 ನೇ ಸುತ್ತಿನ ಪಂದ್ಯ – ಬೆಳಗ್ಗೆ 7:45
    10. ರೋಯಿಂಗ್ – ಪುರುಷರ ಲೈಟ್ವೈಟ್ ಡಬಲ್ ಸ್ಕಲ್ಸ್ – ಬೆಳಗ್ಗೆ 7:50
    11. ಬಾಕ್ಸಿಂಗ್ – ಮಹಿಳಾ ವೆಲ್ಟರ್ವೈಟ್ – ಬೆಳಗ್ಗೆ 8:00
    12. ಶೂಟಿಂಗ್ – ಪುರುಷರ 10ಮೀ ಏರ್ ಪಿಸ್ತೂಲ್ ಅರ್ಹತೆ – ಬೆಳಗ್ಗೆ 9:30
    13. ವೇಟ್ಲಿಫ್ಟಿಂಗ್ – ಮಹಿಳೆಯರ 49 ಕೆಜಿ – ಬೆಳಗ್ಗೆ 10:20
    14. ಬಿಲ್ಲುಗಾರಿಕೆ – ಮಿಶ್ರ ತಂಡದ ಪದಕ ಸುತ್ತುಗಳು – ಬೆಳಗ್ಗೆ 10:45
    15. ಶೂಟಿಂಗ್ – ಪುರುಷರ 10 ಮೀ ಏರ್ ಪಿಸ್ತೂಲ್, ಫೈನಲ್ – 12:00 PM
    16. ಬ್ಯಾಡ್ಮಿಂಟನ್ – ಪುರುಷರ ಡಬಲ್ಸ್ – ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ Vs ಲೀ ಯಾಂಗ್ ಮತ್ತು ಚಿ-ಲಿನ್ ವಾಂಗ್ (ತೈಪೆ) – 12:20 PM
    17. ಬ್ಯಾಡ್ಮಿಂಟನ್ – ಪುರುಷರ ಸಿಂಗಲ್ಸ್ – ಬಿ ಸಾಯಿ ಪ್ರಣೀತ್ vs ಮಿಶಾ ಜಿಲ್ಬರ್ಮನ್ (ಇಸ್ರೇಲ್) – 13:00 PM
    18. ಬಾಕ್ಸಿಂಗ್ – 32 ರ ಪುರುಷರ ವೆಲ್ಟರ್ವೈಟ್ ಸುತ್ತು – ವಿಕಾಸ್ ಕ್ರಿಶನ್ vs ಸೆವೊನ್ರೆಟ್ಸ್ ಕ್ವಿನ್ಸಿ ಮೆನ್ಸಾ ಒಕಾಜಾವಾ – 15:54 PM
    19. ಹಾಕಿ – ಭಾರತ ವುಮೆನ್ vs ನೆದರ್ಲ್ಯಾಂಡ್ಸ್ ವುಮೆನ್ – 17.15 PM
  • 23 Jul 2021 06:27 PM (IST)

    ಕುವೈತ್ ಕಮ್​ಬ್ಯಾಕ್

    2015 ರಲ್ಲಿ ನಿಷೇಧಕ್ಕೆ ಒಳಗಾದ ಬಳಿಕ ಮತ್ತೆ ಕಮ್​ಬ್ಯಾಕ್ ಮಾಡಿರುವ ಕುವೈತ್.

     

  • 23 Jul 2021 06:04 PM (IST)

    ಧ್ವಜ ಹಿಡಿದು ಸಾಗುತ್ತಿರುವ ಆಸ್ಟ್ರೇಲಿಯಾ

    ಟೋಕಿಯೋ 2020ಕ್ಕೆ ಚಾಲನೆ ಸಿಕ್ಕ ಬೆನ್ನಲ್ಲೆ ಮಾರ್ಚ್ ಪಾಸ್ಟ್ ನಡೆಯುತ್ತಿದೆ. ಧ್ವಜ ಹಿಡಿದು ಆಸ್ಟ್ರೇಲಿಯಾ ದೇಶದ ಖ್ಯಾತ ಆಟಗಾರರು ಸಾಗುತ್ತಿದ್ದಾರೆ.

  • 23 Jul 2021 05:42 PM (IST)

    ಉದ್ಘಾಟನಾ ಕಾರ್ಯಕ್ರಮದ ಕೆಲವು ಫೋಟೋ

    ಭಾರತದ ಬಾಕ್ಸಿಂಗ್ ತಾರೆ ಮೇರಿ ಕೋಮ್ ಹಾಗೂ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಭಾರತದ ಧ್ವಜವನ್ನು ಹಿಡಿದು ಮಾರ್ಚ್ ಪಾಸ್ಟ್ ಮಾಡುತ್ತಿರುವ ಫೋಟೋ.

  • 23 Jul 2021 05:30 PM (IST)

    ಭಾರತದ ತ್ರಿವರ್ಣ ಧ್ವಜ ಹಿಡಿದು ಸಾಗಿದ ಮೇರಿ ಕೋಮ್-ಮನ್​ಪ್ರೀತ್

    ಭಾರತದ ಬಾಕ್ಸಿಂಗ್ ತಾರೆ ಮೇರಿ ಕೋಮ್ ಹಾಗೂ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಭಾರತದ ಧ್ವಜವನ್ನು ಹಿಡಿಯುವ ಗೌರವ ಪಡೆದುಕೊಂಡರು. ಸ್ಟೇಡಿಯಂನಲ್ಲಿ ಜಪಾನಿ ಅಕ್ಷರಾನುಕ್ರಮದ ಪ್ರಕಾರ ನಡೆದ ಮಾರ್ಚ್ ಪಾಸ್ಟ್ ಭಾರತ ಸಂಖ್ಯೆ 21 ಆಗಿತ್ತು.

     

  • 23 Jul 2021 05:25 PM (IST)

    ಒಲಿಂಪಿಕ್ ಪೆರೇಡ್

    ಅರ್ಜೆಂಟಿನಾ, ಗ್ರೀಕ್ ಸೇರಿದಂತೆ ಕೆಲವು ದೇಶಗಳು ಧ್ವಜ ಹಿಡಿದು ಸಾಗುತ್ತಿದ್ದು, ಇನ್ನೇನು ಭಾರತದ ಮೇರಿ ಕೋಮ್‌ ಮತ್ತು ಮನ್‌ಪ್ರೀತ್ ಸಿಂಗ್ ಭಾರತದ ತ್ರಿವರ್ಣ ಧ್ವಜ ಹಿಡಿದು ಬರಲಿದ್ದಾರೆ.

  • 23 Jul 2021 05:17 PM (IST)

    ಧ್ವಜ ಹಿಡಿದು ಸಾಗುತ್ತಿರುವ ಗ್ರೀಕ್

    ಟೋಕಿಯೋ 2020ಕ್ಕೆ ಚಾಲನೆ ಸಿಕ್ಕ ಬೆನ್ನಲ್ಲೆ ಈಗ ಮಾರ್ಚ್ ಪಾಸ್ಟ್ ಆರಂಭವಾಗಿದ್ದು, ಮೊದಲನೆಯದಾಗಿ ಧ್ವಜ ಹಿಡಿದು ಗ್ರೀಕ್ ದೇಶದ ಖ್ಯಾತ ಆಟಗಾರರು ಸಾಗುತ್ತಿದ್ದಾರೆ. ಮಾರ್ಚ್ ಪಾಸ್ಟ್ ಭಾರತ ಸಂಖ್ಯೆ 21 ಆಗಿದೆ.

     

  • 23 Jul 2021 04:54 PM (IST)

    ಸ್ಟೇಡಿಯಂನಲ್ಲಿ ಬೆಳಕಿನ ಕಲರವ

    ಟೋಕಿಯೋ ಒಲಿಂಪಿಕ್ಸ್​ 2020ಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಜಪಾನ್‌ ಕ್ಯಾಪಿಟಲ್ ಸಿಟಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ಎಲ್ಲ ದೇಶದ ಆಟಗಾರರು ಧ್ವಜವನ್ನು ಹಿಡಿದು ಸಾಗುತ್ತಿದ್ದರೆ ಇತ್ತ ಬಣ್ಣ ಬಣ್ಣದ ಬೆಳಕು ಇದಕ್ಕೆ ಮತ್ತಷ್ಟು ಮೆರಗು ನೀಡಿತು.

     

  • 23 Jul 2021 04:50 PM (IST)

    ಧ್ವಜ ಹಿಡಿದು ಸಾಗುತ್ತಿರುವ ಜಪಾನ್ ಅಥ್ಲೀಟ್​ಗಳು

    ಜಪಾನ್ ದೇಶದ ಖ್ಯಾತ ಅಥ್ಲೀಟ್​ಗಳು ತಮ್ಮ ಧ್ವಜವನ್ನು ಹಿಡಿದು ಸಾಗುತ್ತಿದ್ದಾರೆ.

     

  • 23 Jul 2021 04:44 PM (IST)

    ಸಣ್ಣ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ

    ಟೋಕಿಯೋ ಒಲಿಂಪಿಕ್ಸ್ 2020ಕ್ಕೆ ಚಾಲನೆ ಸಿಕ್ಕಿದೆ. ಪ್ರತಿಬಾರಿಯಂತೆ ಈ ಬಾರಿ ದೊಡ್ಡ ಮಟ್ಟದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಿಲ್ಲ.

     

  • 23 Jul 2021 04:41 PM (IST)

    ಟೋಕಿಯೋ ಒಲಿಂಪಿಕ್ಸ್ 2020ಕ್ಕೆ ಚಾಲನೆ

    ಟೋಕಿಯೋ ಒಲಿಂಪಿಕ್ಸ್ 2020ಕ್ಕೆ ಈಗ ಅಧಿಕೃತವಾಗಿ ಚಾಲನೆ ಸಿಕ್ಕಿದೆ.

     

  • 23 Jul 2021 04:38 PM (IST)

    ಉದ್ಘಾಟನಾ ಸಮಾರಂಭ ಆರಂಭ

    ಕೊರೊನಾ ವೈರಸ್ ನಡುವೆಯೇ ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ 2020 ಉದ್ಘಾಟನಾ ಸಮಾರಂಭ ಆರಂಭವಾಗಿದೆ.

     

  • 23 Jul 2021 04:21 PM (IST)

    ದೊಡ್ಡ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬ್ರೇಕ್

    ಕೋವಿಡ್‌ ಭೀತಿ ಕಾರಣ ಹೆಚ್ಚು ಜನ ಸೇರಬಾರದು ಎನ್ನುವ ಕಾರಣಕ್ಕೆ ಈ ಬಾರಿ ಟೋಕಿಯೋ ಒಲಿಂಪಿಕ್ಸ್​ನಲ್ಲಿ ದೊಡ್ಡ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ ಎಂದು ಹೇಳಲಾಗಿದೆ.

  • 23 Jul 2021 04:02 PM (IST)

    ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕೆ ಕೆಲವೇ ನಿಮಿಷಗಳು ಬಾಕಿ

    ಜಪಾನಿನ ರಾಜಧಾನಿ ಟೋಕಿಯೋದ ರಾಷ್ಟ್ರೀಯ ಮೈದಾನದಲ್ಲಿ ಒಲಿಂಪಿಕ್ಸ್ 2020 ಉದ್ಘಾಟನಾ ಸಮಾರಂಭಕ್ಕೆ ಕೆಲವೇ ನಿಮಿಷಗಳು ಬಾಕಿಯಿವೆ. ಈ ಸಮಾರಂಭದಲ್ಲಿ ಭಾರತದಿಂದ 25 ಸದಸ್ಯರು ಪಾಲ್ಗೊಳ್ಳಲಿದ್ದಾರಷ್ಟೆ.

  • 23 Jul 2021 03:53 PM (IST)

    ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ ಶುಭಹಾರೈಕೆ

    ಇಂದಿನಿಂದ ಆರಂಭವಾಗಲಿರುವ ಟೋಕಿಯೋ ಒಲಿಂಪಿಕ್ಸ್ 2020ಕ್ಕೆ ಭಾರತದ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಗಣ್ಯರು ಶುಭ ಹಾರೈಸಿದ್ದಾರೆ. ಪ್ರಧಾನಿ ಮೋದಿ ಅವರು, ಟೋಕಿಯೋ ಒಲಿಂಪಿಕ್ಸ್ 2020 ಹಿನ್ನೆಲೆಯಲ್ಲಿ ಜಪಾನ್‌ಗೆ ಅಭಿನಂದನೆಗಳು. ವಿಶ್ವದ ಅತ್ಯುತ್ತಮ ಕ್ರೀಡಾಪಟುಗಳ ಅದ್ಭುತ ಪ್ರದರ್ಶನ‌ಗಳನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.

  • 23 Jul 2021 03:23 PM (IST)

    ತಯಾರಾದ ಮೇರಿ ಕೋಮ್‌-ಮನ್‌ಪ್ರೀತ್ ಸಿಂಗ್

    ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ಸಾಗುವ ಗೌರವ ಮೇರಿ ಕೋಮ್‌-ಮನ್‌ಪ್ರೀತ್ ಸಿಂಗ್ ಅವರಿಗೆ ಸಿಕ್ಕಿದ್ದು ಸ್ಟೇಡಿಯಂನಲ್ಲಿ ತಯಾರಾಗಿ ನಿಂತಿದ್ದಾರೆ.

     

  • 23 Jul 2021 03:18 PM (IST)

    ನಾಳೆ ಕಣಕ್ಕಿಳಿಯಲಿದೆ ಭಾರತದ ಹಾಕಿ ತಂಡ

    10 ಸ್ಪರ್ಧೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಕಣಕ್ಕೆ

    ಒಲಿಂಪಿಕ್ಸ್ ಕ್ರೀಡಾಕೂಟದ ಎರಡನೇ ದಿನ ನಾಳೆ ಭಾರತದ ಕ್ರೀಡಾಪಟು ಸಾಕಷ್ಟು ಸ್ಪರ್ಧೆಗಳನ್ನು ಎದುರಿಸಲಿದ್ದಾರೆ. ಸುಮಾರು 10 ಸ್ಪರ್ಧೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಕಣಕ್ಕಿಳಿಯಲಿದ್ದಾರೆ. ಇವುಗಳಲ್ಲಿ ಶನಿವಾರ ಭಾರತದ ಪಾಲಿಗೆ ಶೂಟಿಂಗ್ ಪ್ರಮುಖ ಸ್ಪರ್ಧೆಯಾಗಿರಲಿದೆ. ಜೊತೆಗೆ ಭಾರತ ಹಾಕಿ ತಂಡವು ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯವನ್ನು ಆಡಲಿ.

  • 23 Jul 2021 02:32 PM (IST)

    ದೀಪಿಕಾಗೆ 9ನೇ ಸ್ಥಾನ

    ಮಹಿಳಾ ಆರ್ಚರಿಯಲ್ಲಿ ಭಾರತದ ದೀಪಿಕಾ ಕುಮಾರಿಗೆ ಮಿಶ್ರಫಲ ಸಿಕ್ಕಿತು. 64 ಮಂದಿ ಇದ್ದ ಸ್ಪರ್ಧಾಕಣದಲ್ಲಿ ಅಗ್ರಶ್ರೇಯಾಂಕದ ದೀಪಿಕಾ ಕುಮಾರಿ ಹಲವು ಏರಿಳಿತಗಳನ್ನ ಕಂಡು ಅಂತಿಮವಾಗಿ 9ನೇ ಸ್ಥಾನ ಕಂಡುಕೊಂಡರು. ಇದು ರ್ಯಾಂಕಿಂಗ್ ಸುತ್ತು ಮಾತ್ರ ಆಗಿದೆ.

  • 23 Jul 2021 02:17 PM (IST)

    ಉದ್ಘಾಟನಾ ಸಮಾರಂಭದಲ್ಲಿ ಭಾರತದ ಮೇರಿ ಕೋಮ್-ಮನ್​ಪ್ರೀತ್ ಸಿಂಗ್

    ಬಹು ನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ ಇಂದು ಉದ್ಘಾಟನೆಯಾಗಲಿದ್ದು, ಭಾರತದ ಪರವಾಗಿ ಈ ಬಾರಿ ಕೇವಲ 19 ಅಥ್ಲೀಟ್‌ಗಳು ಮಾತ್ರವೇ ಭಾಗಿಯಾಗಲಿದ್ದಾರೆ.ಭಾರತದ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಮತ್ತು ಬಾಕ್ಸಿಂಗ್ ತಾರೆ ಮೇರಿ ಕೋಮ್ ರಾಷ್ಟ್ರಧ್ವಜ ಹಿಡಿಯುವ ಗೌರವ ಪಡೆದುಕೊಂಡಿದ್ದಾರೆ.

     

  • 23 Jul 2021 01:57 PM (IST)

    ಪುರುಷರ ಆರ್ಚರಿಯಲ್ಲಿ ಭಾರತಕ್ಕೆ ನಿರಾಸೆ

    ಇಂದು ನಡೆದ ಭಾರತದ ಪುರುಷರ ಆರ್ಚರಿಯಲ್ಲಿ ಭಾರತಕ್ಕೆ ಮೊದಲ ದಿನವೇ ಭಾರೀ ನಿರಾಸೆ ಉಂಟಾಗಿದೆ. ಪ್ರವೀಣ್ ಜಾಧವ್ 31ನೇ ಸ್ಥಾನ ಪಡೆದುಕೊಂಡಿದ್ದರೆ, ಭರವಸೆ ಮೂಡಿಸಿದ್ದ ಅತನು ದಾಸ್ 35ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಇನ್ನೂ ತರುಣ್‌ದೀಪ್ ರಾಯ್ 37ನೇ ಸ್ಥಾನ ಸಂಪಾದಿಸಿದ್ದಾರೆ.

  • 23 Jul 2021 01:35 PM (IST)

    ಮೊದಲ ದಿನದ ಆಟಗಳತ್ತ ಭಾರತೀಯರ ಚಿತ್ತ

    ಒಲಿಂಪಿಕ್ಸ್ 2020 ಕ್ರೀಡಾಕೂಟದ ಮೊದಲ ದಿನವಾದ ಇಂದು ಬಿಲ್ಲುಗಾರಿಕೆ (ಆರ್ಚರಿ), ಈಕ್ವೆಸ್ಟ್ರಿಯನ್, ರೋವಿಂಗ್ (ದೋಣಿ ಸ್ಪರ್ಧೆ) ಮತ್ತು ಶೂಟಿಂಗ್ ಸ್ಪರ್ಧೆಗಳು ನಡೆಯುತ್ತಿವೆ. ಈ ನಾಲ್ಕೂ ಕ್ರೀಡೆಗಳಲ್ಲಿ ಭಾರತದ ಕ್ರೀಡಾಪಟುಗಳು ಸ್ಪರ್ಧಿಸಿದ್ದಾರೆ. ಹೀಗಾಗಿ, ಮೊದಲ ದಿನದ ಆಟಗಳತ್ತ ಭಾರತೀಯರ ಚಿತ್ತ ನೆಟ್ಟಿದೆ.

  • 23 Jul 2021 12:58 PM (IST)

    ಬಹುನಿರೀಕ್ಷಿತ ಒಲಿಂಪಿಕ್ಸ್ ಕ್ರೀಡಾಕೂಟ ಉದ್ಘಾಟನೆಗೆ ಕ್ಷಣಗಣನೆ

    ಭಾರತೀಯ ಕಾಲಮಾನದ ಪ್ರಕಾರ ಸಂಜೆ 4:30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ.

    ಬಹುನಿರೀಕ್ಷಿತ ಒಲಿಂಪಿಕ್ಸ್ ಕ್ರೀಡಾಕೂಟ ಉದ್ಘಾಟನೆಗೆ ಕ್ಷಣಗಣನೆ.

Tokyo Olympics 2020 Live: ಕೊರೊನಾ ವೈರಸ್ ನಡುವೆಯೇ ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ 2020ಕ್ಕೆ (Tokyo Olympics 2020) ಅಧಿಕೃತ ಚಾಲನೆ ದೊರೆತಿದೆ. ಭಾರತದ ಕಾಲಮಾನದ ಪ್ರಕಾರ ಇಂದು ಸಂಜೆ 4:30ಕ್ಕೆ ಜಪಾನ್ ರಾಜಧಾನಿಯಲ್ಲಿ ಉದ್ಘಾಟನಾ ಸಮಾರಂಭ ನೆರವೇರಿತು.

Published On - 12:50 pm, Fri, 23 July 21

Follow us on