Tokyo olympics: ಸ್ವರ್ಗದಿಂದ ಇದನ್ನು ನೋಡುತ್ತಿರುತ್ತಾರೆ! ಚೊಚ್ಚಲ ಚಿನ್ನದ ಪದಕವನ್ನು ಮಿಲ್ಖಾ ಸಿಂಗ್​ಗೆ ಅರ್ಪಿಸಿದ ನೀರಜ್ ಚೋಪ್ರಾ

| Updated By: ಪೃಥ್ವಿಶಂಕರ

Updated on: Aug 07, 2021 | 8:46 PM

Neeraj Chopra: . ಚಿನ್ನದ ಪದಕ ಗೆದ್ದ ನಂತರ, ನೀರಜ್ ಚೋಪ್ರಾ ಈ ಯಶಸ್ಸನ್ನು ಮಿಲ್ಖಾ ಸಿಂಗ್ ಅವರಿಗೆ ಅರ್ಪಿಸಿದರು. ಈ ಪದಕ ಮಿಲ್ಖಾ ಸಿಂಗ್ ಅವರ ಹೆಸರಿನಲ್ಲಿದೆ ಅವರು ಸ್ವರ್ಗದಿಂದ ಇದನ್ನು ನೋಡುತ್ತಿರುತ್ತಾರೆ ಎಂದರು.

Tokyo olympics: ಸ್ವರ್ಗದಿಂದ ಇದನ್ನು ನೋಡುತ್ತಿರುತ್ತಾರೆ! ಚೊಚ್ಚಲ ಚಿನ್ನದ ಪದಕವನ್ನು ಮಿಲ್ಖಾ ಸಿಂಗ್​ಗೆ ಅರ್ಪಿಸಿದ ನೀರಜ್ ಚೋಪ್ರಾ
ನೀರಜ್ ಚೋಪ್ರಾ
Follow us on

ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ನೀರಜ್ ಚೋಪ್ರಾ ಇತಿಹಾಸ ಸೃಷ್ಟಿಸಿದರು. ಇದು ಅಥ್ಲೆಟಿಕ್ಸ್‌ನಲ್ಲಿ ಭಾರತದ ಮೊದಲ ಪದಕವಾಗಿದೆ. ಚಿನ್ನದ ಪದಕ ಗೆದ್ದ ನಂತರ, ನೀರಜ್ ಚೋಪ್ರಾ ಈ ಯಶಸ್ಸನ್ನು ಮಿಲ್ಖಾ ಸಿಂಗ್ ಅವರಿಗೆ ಅರ್ಪಿಸಿದರು. ಈ ಪದಕ ಮಿಲ್ಖಾ ಸಿಂಗ್ ಅವರ ಹೆಸರಿನಲ್ಲಿದೆ ಅವರು ಸ್ವರ್ಗದಿಂದ ಇದನ್ನು ನೋಡುತ್ತಿರುತ್ತಾರೆ ಎಂದರು. ಇದು ತುಂಬಾ ನಂಬಲಾಗದ ಕ್ಷಣ ಎಂದು ನೀರಜ್ ತಮ್ಮ ಪ್ರದರ್ಶನದ ಬಗ್ಗೆ ಹೇಳಿಕೊಂಡಿದ್ದಾರೆ.

ಚೋಪ್ರಾ ಮೂರು ದಿನಗಳ ಹಿಂದೆ ಫೈನಲ್​ಗೆ ಅರ್ಹತೆ ಗಳಿಸಿದ್ದರು. ಜೊತೆಗೆ ಫೈನಲ್‌ನಲ್ಲಿ ಇನ್ನೂ ಉತ್ತಮ ಪ್ರದರ್ಶನ ನೀಡಿದ್ದರು, 87.58 ಮೀಟರ್‌ಗಳ ಅತ್ಯುತ್ತಮ ಪ್ರಯತ್ನದೊಂದಿಗೆ ಪ್ರಥಮ ಸ್ಥಾನ ಪಡೆದರು. ಇದು ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಟ್ರ್ಯಾಕ್ ಮತ್ತು ಫೀಲ್ಡ್ ಈವೆಂಟ್‌ಗಳಲ್ಲಿ ದೇಶದ ಮೊದಲ ಪದಕವಾಗಿದೆ. 23 ವರ್ಷದ ಚೋಪ್ರಾ ಐತಿಹಾಸಿಕ ಚಿನ್ನದ ಪದಕ ಗೆದ್ದ ನಂತರ, ನನಗೆ ನಂಬಲಾಗುತ್ತಿಲ್ಲ. ಅಥ್ಲೆಟಿಕ್ಸ್​ನಲ್ಲಿ ಭಾರತ ಚಿನ್ನದ ಪದಕ ಗೆದ್ದಿರುವುದು ಇದೇ ಮೊದಲು, ಹಾಗಾಗಿ ನನಗೆ ತುಂಬಾ ಸಂತೋಷವಾಗಿದೆ. ಇತರ ಕ್ರೀಡೆಗಳಲ್ಲಿ ನಾವು ಕೇವಲ ಒಂದು ಒಲಿಂಪಿಕ್ ಚಿನ್ನವನ್ನು ಹೊಂದಿದ್ದೇವೆ. ಅಥ್ಲೆಟಿಕ್ಸ್‌ನಲ್ಲಿ ಇದು ನಮ್ಮ ಮೊದಲ ಒಲಿಂಪಿಕ್ ಪದಕವಾಗಿದೆ. ಇದು ನನಗೆ ಮತ್ತು ದೇಶಕ್ಕೆ ಹೆಮ್ಮೆಯ ಕ್ಷಣ ಎಂದರು.

ನೀರಜ್ ಚಿನ್ನ ನಿರೀಕ್ಷಿಸಿರಲಿಲ್ಲ
ಜರ್ಮನಿಯ ಶ್ರೇಷ್ಠ ಅಥ್ಲೀಟ್ ಜೊಹಾನ್ಸ್ ವೆಟ್ಟರ್ ಅವರನ್ನೂ ಸೋಲಿಸಿ ಚಿನ್ನದ ಪದಕ ಗೆದ್ದಾಗ ಆಶ್ಚರ್ಯವಾಗಿದೆಯೇ ಎಂದು ಕೇಳಿದಾಗ ಅವರು, ನಾನು ಅರ್ಹತಾ ಸುತ್ತಿನಲ್ಲಿ ಉತ್ತಮ ಎಸೆತವನ್ನು ಎಸೆದಿದ್ದೇನೆ ಹಾಗಾಗಿ ಫೈನಲ್‌ನಲ್ಲಿ ನಾನು ಉತ್ತಮವಾಗಿ ಮಾಡಬಹುದು ಎಂದು ನನಗೆ ತಿಳಿದಿತ್ತು. ಆದರೆ ಅದು ಚಿನ್ನವಾಗುತ್ತದೆಯೇ ಎಂದು ನನಗೆ ಗೊತ್ತಿರಲಿಲ್ಲ ಆದರೆ ನನಗೆ ತುಂಬಾ ಸಂತೋಷವಾಗಿದೆ. ಒಲಿಂಪಿಕ್ಸ್ ನಂತಹ ಹಂತದಲ್ಲಿ ಚೋಪ್ರಾ ಪ್ರಾಬಲ್ಯ ಸಾಧಿಸಿ ಚಿನ್ನದ ಪದಕ ಗೆಲ್ಲುತ್ತಾನೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಪದಕ ಗೆದ್ದ ನಂತರ, ಪದಕ ಭಾರವಾಗಿದೆಯೇ ಎಂದು ಕೇಳಿದಾಗ, ಅವರು 10 ಕೆಜಿ ಇದ್ದರೂ ಅದು ಹಗುರವಾಗಿರುತ್ತಿತ್ತು ಎಂದು ಹೇಳಿದರು.