Tokyo Olympics 2020 Opening Ceremony: ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್​ 2020ಕ್ಕೆ ಮನರಂಜನಾ ಸಮಾರಂಭದ ಮೂಲಕ ವಿದ್ಯುಕ್ತ ಚಾಲನೆ

| Updated By: Vinay Bhat

Updated on: Jul 23, 2021 | 5:15 PM

ಭಾರತದ ಬಾಕ್ಸಿಂಗ್ ತಾರೆ ಮೇರಿ ಕೋಮ್ ಹಾಗೂ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಭಾರತದ ಧ್ವಜವನ್ನು ಹಿಡಿಯುವ ಗೌರವ ಪಡೆದುಕೊಂಡರು.

Tokyo Olympics 2020 Opening Ceremony: ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್​ 2020ಕ್ಕೆ ಮನರಂಜನಾ ಸಮಾರಂಭದ ಮೂಲಕ ವಿದ್ಯುಕ್ತ ಚಾಲನೆ
Tokyo Olympics 2020
Follow us on

ಸಾವಿರಾರು ಖಾಲಿ ಆಸನಗಳ ಮುಂದೆ ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ 2020ಕ್ಕೆ (Tokyo Olympics 2020) ಅಧಿಕೃತ ಚಾಲನೆ ದೊರೆತಿದೆ. ಭಾರತದ ಕಾಲಮಾನದ ಪ್ರಕಾರ ಇಂದು ಸಂಜೆ 4:30ಕ್ಕೆ ಜಪಾನ್ ರಾಜಧಾನಿಯಲ್ಲಿ ಉದ್ಘಾಟನಾ ಸಮಾರಂಭ ನೆರವೇರಿತು. ಈ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಪರವಾಗಿ ಕೇವಲ 19 ಅಥ್ಲೀಟ್‌ಗಳು ಮಾತ್ರವೇ ಭಾಗಿಯಾದರು. ಇವರ ಜೊತೆಗೆ 6 ಅಧಿಕಾರಿಗಳು ಕೂಡ ಸಾಥ್ ನೀಡದರು. ಕೊರೊನಾ ವೈರಸ್‌ನ ಆತಂಕ ಹಾಗೂ ನಾಳೆ ಶನಿವಾರ ಸಾಕಷ್ಟು ಕ್ರೀಡೆಗಳು ನಡೆಯಲಿರುವ ಕಾರಣ ಉಳಿದ ಅಥ್ಲೀಟ್‌ಗಳು ಉದ್ಘಾಟನಾ ಸಮಾರಂಭದಿಂದ ದೂರವುಳಿದಿದ್ದರು.

ಜಪಾನ್‌ರ ದೊರೆ ನುರುಹಿಟೊ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಿದರು. ಫ್ರಾನ್ಸ್‌ನ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರೊನ್‌, ಅಮೆರಿಕ ಅಧ್ಯಕ್ಷ ಜೋ ಬೈಡನ್‌ರ ಪತ್ನಿ ಜಿಲ್‌ ಬೈಡನ್‌ ಸೇರಿದಂತೆ ಕೆಲ ರಾಜಕೀಯ ನಾಯಕರು ಉಪಸ್ಥಿತರಿದ್ದರು. ಕೋವಿಡ್‌ ಭೀತಿ ಕಾರಣ ಹೆಚ್ಚು ಜನ ಸೇರಬಾರದು ಎನ್ನುವ ಕಾರಣಕ್ಕೆ ಈ ಬಾರಿ ದೊಡ್ಡ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರಲಿಲ್ಲ.

ಮೊದಲನೆಯವರಾಗಿ ಜಪಾನ್ ದೇಶದ ಖ್ಯಾತ ಅಥ್ಲೀಟ್​ಗಳು ತಮ್ಮ ಧ್ವಜವನ್ನು ಹಿಡಿದು ಮೈದಾನದ ಸುತ್ತ ಸಾಗಿದರು. ಇದರ ಜೊತೆಗೆ ಜಪಾನ್‌ ಕ್ಯಾಪಿಟಲ್ ಸಿಟಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ಎಲ್ಲ ದೇಶದ ಆಟಗಾರರು ಧ್ವಜವನ್ನು ಹಿಡಿದು ಸಾಗುತ್ತಿದ್ದರೆ ಇತ್ತ ಬಣ್ಣ ಬಣ್ಣದ ಬೆಳಕು ಇದಕ್ಕೆ ಮತ್ತಷ್ಟು ಮೆರಗು ನೀಡಿತು.

 

ಭಾರತದ ಬಾಕ್ಸಿಂಗ್ ತಾರೆ ಮೇರಿ ಕೋಮ್ ಹಾಗೂ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಭಾರತದ ಧ್ವಜವನ್ನು ಹಿಡಿಯುವ ಗೌರವ ಪಡೆದುಕೊಂಡರು. ಸ್ಟೇಡಿಯಂನಲ್ಲಿ ಜಪಾನಿ ಅಕ್ಷರಾನುಕ್ರಮದ ಪ್ರಕಾರ ನಡೆದ ಮಾರ್ಚ್ ಪಾಸ್ಟ್ ಭಾರತ ಸಂಖ್ಯೆ 21 ಆಗಿತ್ತು.

 

ಇನ್ನೂ ಒಲಿಂಪಿಕ್ಸ್ 2020 ಆರಂಭವಾಗುತ್ತಿರುವ ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಗಣ್ಯರು ಶುಭ ಹಾರೈಸಿದ್ದಾರೆ. ಪ್ರಧಾನಿ ಮೋದಿ ಅವರು, ಟೊಕಿಯೋ ಒಲಿಂಪಿಕ್ಸ್ 2020 ಹಿನ್ನೆಲೆಯಲ್ಲಿ ಜಪಾನ್‌ಗೆ ಅಭಿನಂದನೆಗಳು. ವಿಶ್ವದ ಅತ್ಯುತ್ತಮ ಕ್ರೀಡಾಪಟುಗಳ ಅದ್ಭುತ ಪ್ರದರ್ಶನ‌ಗಳನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.

 


ಭಾರತದಿಂದ ಒಟ್ಟು 125 ಅಥ್ಲೀಟ್​ಗಳು ಒಲಿಂಪಿಕ್ಸ್​ನಲ್ಲಿ ಭಾಗಿಯಾಗಲಿದ್ದಾರೆ. ಕೋಚ್, ಸಿಬ್ಬಂದಿ ಸೇರಿ ಒಟ್ಟು 228 ಜನರ ತಂಡ ಒಲಿಂಪಿಕ್ಸ್​ನಲ್ಲಿ ಭಾಗಿಯಾಗಲು ಟೋಕಿಯೋದಲ್ಲಿ ಬೀಡುಬಿಟ್ಟಿವೆ.

ಕ್ರೀಡಾಕೂಟಕ್ಕೆ ಇಂದು ಅಧಿಕೃತ ಚಾಲನೆ ಸಿಕ್ಕಿತಾದರೂ ಮೊನ್ನೆಯೇ ಕೆಲ ಕ್ರೀಡೆಗಳ ಆಟ ಆರಂಭವಾಗಿದೆ. ಇಂದಿನ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಭಾರತದ ಕ್ರೀಡಾಪಟುಗಳು ಆರ್ಚರಿ ಶ್ರೇಯಾಂಕ ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಮೊದಲ ದಿನವಾದ ಇಂದು ಬಿಲ್ಲುಗಾರಿಕೆ (ಆರ್ಚರಿ), ಈಕ್ವೆಸ್ಟ್ರಿಯನ್, ರೋವಿಂಗ್ (ದೋಣಿ ಸ್ಪರ್ಧೆ) ಮತ್ತು ಶೂಟಿಂಗ್ ಸ್ಪರ್ಧೆಗಳು ನಡೆದಿವೆ. ಈ ನಾಲ್ಕೂ ಕ್ರೀಡೆಗಳಲ್ಲಿ ಭಾರತದ ಕ್ರೀಡಾಪಟುಗಳು ಸ್ಪರ್ಧಿಸಿದ್ದು, ಪುರುಷರು ಭಾರೀ ನಿರಾಸೆ ಅನುಭವಿಸಿದ್ದಾರೆ.

ಪುರುಷರ ಆರ್ಚರಿಯಲ್ಲಿ ಪ್ರವೀಣ್ ಜಾಧವ್ 31ನೇ ಸ್ಥಾನ ಪಡೆದುಕೊಂಡಿದ್ದರೆ, ಭರವಸೆ ಮೂಡಿಸಿದ್ದ ಅತನು ದಾಸ್ 35ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಇನ್ನೂ ತರುಣ್‌ದೀಪ್ ರಾಯ್ 37ನೇ ಸ್ಥಾನ ಸಂಪಾದಿಸಿದ್ದಾರೆ.

ಆದರೆ, ಇತ್ತ ಮಹಿಳಾ ಆರ್ಷರಿಯಲ್ಲಿ ಭಾರತದ ದೀಪಿಕಾ ಕುಮಾರಿಗೆ ಮಿಶ್ರಫಲ ಸಿಕ್ಕಿತು. 64 ಮಂದಿ ಇದ್ದ ಸ್ಪರ್ಧಾಕಣದಲ್ಲಿ ಅಗ್ರಶ್ರೇಯಾಂಕದ ದೀಪಿಕಾ ಕುಮಾರಿ ಹಲವು ಏರಿಳಿತಗಳನ್ನ ಕಂಡು ಅಂತಿಮವಾಗಿ 9ನೇ ಸ್ಥಾನ ಕಂಡುಕೊಂಡರು. ಇದು ರ್ಯಾಂಕಿಂಗ್ ಸುತ್ತು ಮಾತ್ರ ಆಗಿದೆ. ಮುಂದೆ ನಾಕೌಟ್ ಹಂತಗಳಿವೆ. ಮೊದಲ ಸ್ಥಾನ ಪಡೆದವರು ಈ ಸುತ್ತಿನಲ್ಲಿ 64ನೇ ಸ್ಥಾನ ಗಳಿಸಿದವರನ್ನ ಎದುರಿಸುತ್ತಾರೆ. ಅದರಂತೆ 9ನೇ ಸ್ಥಾನ ಗಳಿಸಿದ ದೀಪಿಕಾ ಕುಮಾರಿ ಅವರು ಈ ಹಂತದಲ್ಲಿ ಭೂತಾನ್ ದೇಶದ ಆಟಗಾರ್ತಿ ಕರ್ಮಾ ಅವರನ್ನ ಎದುರಿಸಲಿದ್ದಾರೆ. ಈ ನಾಕೌಟ್ ಹಂತಗಳು ನಾಳೆ ನಡೆಯಲಿವೆ.

Tokyo Olympics 2020 Live:

Published On - 5:10 pm, Fri, 23 July 21