ರೆಟ್ರೋ ಸ್ಟೈಲ್​ನಲ್ಲಿ ಕಾಣಿಸಿಕೊಂಡ ಕಿಂಗ್ ಕೊಹ್ಲಿ!

| Updated By:

Updated on: Jul 25, 2020 | 8:19 PM

ಟೀಮ್ ಇಂಡಿಯಾದಲ್ಲಿ ಯಾರಾದ್ರೂ ತಮ್ಮ ಡಿಫರೆಂಟ್ ಹೇರ್​ಸ್ಟೈಲ್​ನಿಂದ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡ್ತಾರೆ ಅಂದ್ರೆ, ಅದು ಒನ್ ಅಂಡ್ ಓನ್ಲೀ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮಾತ್ರ. ಆದ್ರೀಗ ಕೊರೊನಾ ಕೋಲಾಹಲದಿಂದಾಗಿ ಕ್ರಿಕೆಟ್ ಪಂದ್ಯಾವಳಿ ಇಲ್ಲದೇ ಇದ್ರೂ, ವಿರಾಟ್ ಕೊಹ್ಲಿ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಬಿಸಿಸಿಐ ಟ್ವಿಟರ್​ನಲ್ಲಿ ಶೇರ್ ಮಾಡಿರೋ ವೀಡಿಯೋದಲ್ಲಿ ಕೊಹ್ಲಿ ಟೀಮ್ ಇಂಡಿಯಾದ ಇನ್ನೋರ್ವ ಆಟಗಾರ ಕನ್ನಡಿಗ ಮಯಾಂಕ್ ಅಗರ್ವಾಲ್ ಜೊತೆ ವೀಡಿಯೋ ಚಿಟ್ ಚಾಟ್ ಮಾಡ್ತಿದ್ದಾರೆ. ಈ ವಿಡಿಯೋದಲ್ಲಿ ವಿರಾಟ್ ಕಣ್ಣಿಗೆ […]

ರೆಟ್ರೋ ಸ್ಟೈಲ್​ನಲ್ಲಿ ಕಾಣಿಸಿಕೊಂಡ ಕಿಂಗ್ ಕೊಹ್ಲಿ!
Follow us on

ಟೀಮ್ ಇಂಡಿಯಾದಲ್ಲಿ ಯಾರಾದ್ರೂ ತಮ್ಮ ಡಿಫರೆಂಟ್ ಹೇರ್​ಸ್ಟೈಲ್​ನಿಂದ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡ್ತಾರೆ ಅಂದ್ರೆ, ಅದು ಒನ್ ಅಂಡ್ ಓನ್ಲೀ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮಾತ್ರ. ಆದ್ರೀಗ ಕೊರೊನಾ ಕೋಲಾಹಲದಿಂದಾಗಿ ಕ್ರಿಕೆಟ್ ಪಂದ್ಯಾವಳಿ ಇಲ್ಲದೇ ಇದ್ರೂ, ವಿರಾಟ್ ಕೊಹ್ಲಿ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ.

ಬಿಸಿಸಿಐ ಟ್ವಿಟರ್​ನಲ್ಲಿ ಶೇರ್ ಮಾಡಿರೋ ವೀಡಿಯೋದಲ್ಲಿ ಕೊಹ್ಲಿ ಟೀಮ್ ಇಂಡಿಯಾದ ಇನ್ನೋರ್ವ ಆಟಗಾರ ಕನ್ನಡಿಗ ಮಯಾಂಕ್ ಅಗರ್ವಾಲ್ ಜೊತೆ ವೀಡಿಯೋ ಚಿಟ್ ಚಾಟ್ ಮಾಡ್ತಿದ್ದಾರೆ. ಈ ವಿಡಿಯೋದಲ್ಲಿ ವಿರಾಟ್ ಕಣ್ಣಿಗೆ ಗ್ಲಾಸ್ ಹಾಕಿಕೊಂಡು ಪಕ್ಕಾ ರೆಟ್ರೋ ಸ್ಟೈಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕೊಹ್ಲಿಯ ಈ ಹೊಸ ಸ್ಟೈಲ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

#ಯಾರು ರೆಟ್ರೋಗೆ ಹೋಗಿದ್ದಾರೆಂದು ನೋಡಿ. ಕಿಂಗ್ ಕೊಹ್ಲಿ ಮಯಾಂಕ್ ಜೊತೆಗೆ ಓಪನ್ ನೆಟ್ಸ್ ವಿಥ್ ಈ ಎಪಿಸೋಡ್ ಸಧ್ಯದಲ್ಲೇ ಬರಲಿದೆ.” ಎಂದು ಬಿಸಿಸಿಐ ಟ್ವಿಟ್ ಮಾಡಿದೆ.

ಕೊರೋನಾ ಲಾಕ್​ಡೌನ್ ಇರುವ ಕಾರಣ ಕಳೆದ ನಾಲ್ಕು ತಿಂಗಳಿನಿಂದ ವಿರಾಟ್ ಕೊಹ್ಲಿ ಮನೆಯಲ್ಲೇ ಇದ್ದಾರೆ. ಆಗಾಗ ಸೋಷಿಯಲ್ ಮೀಡಿಯಾದಲ್ಲಿ ದೇಶ ವಿದೇಶದ ಕ್ರಿಕೆಟಿಗರ ಜೊತೆ ಚಾಟ್ ಮಾಡೋ ಮೂಲಕ ತಮ್ಮ ನೆನಪಿನಾಳವನ್ನ ಬಿಚ್ಚಿಡ್ತಿದ್ರು. ಆದ್ರೀಗ ವಿರಾಟ್ ಸಡನ್ ಆಗಿ ತಮ್ಮ ರೆಟ್ರೋ ಸ್ಟೈಲ್ ಲುಕ್​ನಿಂದ ಅಭಿಮಾನಿಗಳನ್ನ ನಿಬ್ಬೆರಗಾಗಿಸಿದ್ದಾರೆ.

Published On - 2:56 pm, Fri, 24 July 20