BCCI ಹಾದಿ ಸುಗಮ.. UAEನಲ್ಲಿ IPL ಹಂಗಾಮ?

| Updated By:

Updated on: Jul 23, 2020 | 2:50 PM

BCCIನಿಂದ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಈ ಬಾರಿ ಕೊರೊನಾ ವೈರಸ್ ಕೋಲಾಹಲದಿಂದಾಗಿ IPL ನಡೆಯುತ್ತೋ ಇಲ್ವೋ ಅನ್ನೋ ಆತಂಕದಲ್ಲಿದ್ರು. ಆದರೆ ಈಗ ಅದು ದೂರವಾಗಿದ್ದು, ಇನ್ನೇನು IPL ಸುಗ್ಗಿ ಕಣ್ತುಂಬಿಸಿಕೊಳ್ಳೋದಕ್ಕೆ ಕಾತುರದಿಂದ ಕಾಯ್ತಿದ್ದಾರೆ. ಮಹಾಮಾರಿ ಆರ್ಭಟಕ್ಕೆ ಬೆಚ್ಚಿಬಿದ್ದಿರೋ ICC ನಿನ್ನೆಯಷ್ಟೇ ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ T20 ವಿಶ್ವಕಪ್​ನ ಮುಂದೂಡಿದೆ. ಅಲ್ಲಿಗೆ BCCIಗೆ IPL ಆಯೋಜಿಸೋದಕ್ಕೆ ಇದ್ದ ದೊಡ್ಡ ಕಂಟಕ ದೂರವಾಗಿದೆ. ಅಲ್ಲಿಗೆ ICC ನಿರ್ಧಾರವನ್ನ ಜಾತಕ ಪಕ್ಷಿಯಂತೆ ಕಾಯುತ್ತಿದ್ದ BCCIಗೆ IPL […]

BCCI ಹಾದಿ ಸುಗಮ.. UAEನಲ್ಲಿ IPL ಹಂಗಾಮ?
ಪ್ರಾತಿನಿಧಿಕ ಚಿತ್ರ
Follow us on

BCCIನಿಂದ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಈ ಬಾರಿ ಕೊರೊನಾ ವೈರಸ್ ಕೋಲಾಹಲದಿಂದಾಗಿ IPL ನಡೆಯುತ್ತೋ ಇಲ್ವೋ ಅನ್ನೋ ಆತಂಕದಲ್ಲಿದ್ರು. ಆದರೆ ಈಗ ಅದು ದೂರವಾಗಿದ್ದು, ಇನ್ನೇನು IPL ಸುಗ್ಗಿ ಕಣ್ತುಂಬಿಸಿಕೊಳ್ಳೋದಕ್ಕೆ ಕಾತುರದಿಂದ ಕಾಯ್ತಿದ್ದಾರೆ.

ಮಹಾಮಾರಿ ಆರ್ಭಟಕ್ಕೆ ಬೆಚ್ಚಿಬಿದ್ದಿರೋ ICC ನಿನ್ನೆಯಷ್ಟೇ ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ T20 ವಿಶ್ವಕಪ್​ನ ಮುಂದೂಡಿದೆ. ಅಲ್ಲಿಗೆ BCCIಗೆ IPL ಆಯೋಜಿಸೋದಕ್ಕೆ ಇದ್ದ ದೊಡ್ಡ ಕಂಟಕ ದೂರವಾಗಿದೆ. ಅಲ್ಲಿಗೆ ICC ನಿರ್ಧಾರವನ್ನ ಜಾತಕ ಪಕ್ಷಿಯಂತೆ ಕಾಯುತ್ತಿದ್ದ BCCIಗೆ IPL ಆಯೋಜಿಸಲು ಹಾದಿ ಸುಗಮವಾಗಿದೆ.

ಇತ್ತೀಚೆಗಷ್ಟೇ BCCI ಅಧ್ಯಕ್ಷ ಸೌರವ್ ಗಂಗೂಲಿ ಭಾರತದಲ್ಲಿ IPL ನಡೆಸೋದಕ್ಕೆ ಸಾಧ್ಯವಾಗದಿದ್ರೆ, ವಿದೇಶದಲ್ಲಿ ಆಯೋಜಿಸೋ ಸೂಚನೆ ನೀಡಿದ್ರು. ದಾದಾ ಈ ಸುಳಿವು ನೀಡುತ್ತಿದ್ದಂತೆ, ದುಬೈ ಸ್ಪೋರ್ಟ್ಸ್ ಸಿಟಿಯ ಕ್ರಿಕೆಟ್ ಮತ್ತು ಈವೆಂಟ್‌ಗಳ ಮುಖ್ಯಸ್ಥ ಸಲ್ಮಾನ್ ಹನೀಫ್ ತಮ್ಮ ನದರದಲ್ಲಿ IPL ಪಂದ್ಯಾವಳಿ ನಡೆಯುವ ಸಾಧ್ಯತೆ ಹೆಚ್ಚಾಗಿರೋದ್ರಿಂದ ಎಲ್ಲಾ ಸೌಲಭ್ಯಗಳನ್ನು ಸಿದ್ಧಪಡಿಸಿಕೊಳ್ಳುತ್ತಿರೋದಾಗಿ ಹೇಳಿಕೊಂಡಿದ್ರು.

UAEನಲ್ಲಿ IPL ಹಂಗಾಮ?
ಈ ಮಧ್ಯೆ IPL ಆಡಳಿತ ಸಮಿತಿ ಮುಖ್ಯಸ್ಥ ಬ್ರಿಜೇಷ್ ಪಟೇಲ್ ಮುಂದಿನ 10 ದಿನಗಳಲ್ಲಿ ಆಡಳಿತ ಮಂಡಿಯ ಸಭೆ ಕರೆದು ಫ್ರಾಂಚೈಸಿ ಜೊತೆ ಚರ್ಚಿಸಿ ಪಂದ್ಯಗಳ ವೇಳಾಪಟ್ಟಿಯನ್ನ ಸಿದ್ಧಪಡಿಸೋದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲ. ಪಂದ್ಯಾವಳಿಯನ್ನು ಭಾರತದಲ್ಲಿ ಅಥವಾ UAEನಲ್ಲಿ ಆಯೋಜಿಸಬೇಕೋ ಅನ್ನೋದನ್ನ ಅಂದಿನ ಸಭೆಯಲ್ಲೇ ನಿರ್ಧರಿಸುತ್ತೇವೆ ಎಂದಿದ್ದಾರೆ. ಅಲ್ಲಿಗೆ ಸೆಪ್ಟಂಬರ್ ನವೆಂಬರ್​ನಲ್ಲಿ IPL ಪಂದ್ಯಾವಳಿ ನಡೆಯಲಿದ್ದು UAE ಅದರ ಆತಿಥ್ಯವಹಿಸೋದು ಬಹುತೇಖ ಫಿಕ್ಸ್​ ಆಗಿದೆ.

Published On - 1:39 pm, Wed, 22 July 20