ತಮ್ಮ ಟ್ವೀಟ್​ ಮತ್ತು ಮೀಮ್ ಮೂಲಕ ಜನರನ್ನು ನಗಿಸುವುದು ವಾಸಿಂ ಜಾಫರ್ ಮುಂದುವರಿಸಿದ್ದಾರೆ

ಜೂನ್​ 18 ರಿಂದ ಇಂಗ್ಲೆಂಡ್​ನ ಸೌಥಾಂಪ್ಟ್​ನಲ್ಲಿ ನಡೆಯಲಿರುವ ಡಬ್ಲ್ಯೂಟಿಸಿ ಪಂದ್ಯವು ಒಂದು ಪಕ್ಷ ಡ್ರಾ ಅಥವಾ ಟೈನಲ್ಲಿ ಮುಕ್ತಾಯಗೊಂಡರೆ ಪ್ರಶಸ್ತಿಯನ್ನು ಎರಡೂ ತಂಡಗಳು ಹಂಚಿಕೊಳ್ಳುತ್ತವೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಶುಕ್ರವಾರದಂದು ಪ್ರಕಟಿಸಿದೆ

ತಮ್ಮ ಟ್ವೀಟ್​ ಮತ್ತು ಮೀಮ್ ಮೂಲಕ ಜನರನ್ನು ನಗಿಸುವುದು ವಾಸಿಂ ಜಾಫರ್ ಮುಂದುವರಿಸಿದ್ದಾರೆ
ವಾಸಿಂ ಜಾಫರ್
ಅರುಣ್​ ಕುಮಾರ್​ ಬೆಳ್ಳಿ

Updated on: May 28, 2021 | 11:41 PM

ಭಾರತದ ಮಾಜಿ ಆರಂಭ ಆಟಗಾರ ವಾಸಿಂ ಅವರ ಹಾಸ್ಯಪ್ರಜ್ಞೆಗೆ ತಲೆದೂಗದವರಿಲ್ಲ. ಕ್ರಿಕೆಟ್​ ಸನ್ನಿವೇಶಗಳನ್ನು ಯಾವುದೋ ಸಿನಿಮಾ ಇಲ್ಲವೇ ರಾಜಕೀಯ ಸನ್ನಿವೇಶಗಳಿಗೆ ಥಳಕು ಹಾಕಿ ಅವರು ಮಾಡುವ ಮೀಮ್​ಗಳು ಬಹಳ ಮೋಜೆನಿಸುತ್ತವೆ. ಆ ಮೀಮ್​ಗಳನ್ನು ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್​ನಲ್ಲಿ ಪೋಸ್ಟ್ ಮಾಡುತ್ತಾರೆ. ಮುಂದಿನ ತಿಂಗಳು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಟೆಸ್ಟ್ ಬಗ್ಗೆ ಅವರು ಒಂದು ಜನಪ್ರಿಯ ಬಾಲಿವುಡ್​ ಚಿತ್ರದ ಸನ್ನಿವೇಶವೊಂದರ ಸ್ಕ್ರೀನ್ ಶಾಟ್​ ತೆಗೆದು ಅದಕ್ಕೆ ರವಿಚಂದ್ರನ್ ಅಶ್ವಿನ್ ಅವರನ್ನು ಟ್ಯಾಗ್ ಮಾಡಿ ಪಂದ್ಯದ ಪ್ಲೇಯಿಂಗ್ ಕಂಡೀಷನ್​ಗಳನ್ನು ವಿವರಿಸುವಂತೆ ಹೇಳಿರುವುದು ನೋಡಿದವರಿಗೆ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತದೆ.

ಜೂನ್​ 18 ರಿಂದ ಇಂಗ್ಲೆಂಡ್​ನ ಸೌಥಾಂಪ್ಟ್​ನಲ್ಲಿ ನಡೆಯಲಿರುವ ಡಬ್ಲ್ಯೂಟಿಸಿ ಪಂದ್ಯವು ಒಂದು ಪಕ್ಷ ಡ್ರಾ ಅಥವಾ ಟೈನಲ್ಲಿ ಮುಕ್ತಾಯಗೊಂಡರೆ ಪ್ರಶಸ್ತಿಯನ್ನು ಎರಡೂ ತಂಡಗಳು ಹಂಚಿಕೊಳ್ಳುತ್ತವೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಶುಕ್ರವಾರದಂದು ಪ್ರಕಟಿಸಿದೆ. ಐಸಿಸಿಯ ಪ್ರಕಟಣೆ ಮತ್ತು ಡಬ್ಲ್ಯೂಟಿಸಿ ಪಂದ್ಯದ ನಿಯಮಗಳ ಕುರಿತು ಅದು ನೀಡಿರುವ ವಿವರಗಳ ಬಗ್ಗೆ ಜಾಫರ್ ಸಂಜಯ ದತ್ ಅವರ ಭಾರೀ ಜನಪ್ರಿಯ ಚಿತ್ರ ‘ಮುನ್ನಾಭಾಯಿ ಎಮ್​ಬಿಬಿಎಸ್’ ಚಿತ್ರದ ಮೀಮ್ ಅನ್ನು ಬಳಸಿದ್ದಾರೆ. ಅಷ್ಟಕ್ಕೇ ನಿಲ್ಲದ ಜಾಫರ್ ಅಶ್ವಿನ್ ಅವರನ್ನು ಟ್ಯಾಗ್ ಮಾಡಿ ನಿಯಮಾವಳಿಗಳನ್ನು ಟೀಮ್ ಇಂಡಿಯಾಗೆ ವಿವರಿಸಿ ಎಂದು ಟ್ವೀಟ್​ನಲ್ಲಿ ಹೇಳಿದ್ದಾರೆ.

“Indian team to @ashwinravi99 right now #FirstBencher #WTCFinal,” ಅಂತ ಜಾಫರ್ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಏತನ್ಮಧ್ಯೆ, ಅಶ್ವಿನ್ ಟೀಮ್ ಇಂಡಿಯಾದ ಇತರ ಸದಸ್ಯರೊಂದಿಗೆ ಮುಂಬೈನಲ್ಲಿದ್ದಾರೆ. ಟೀಮಿನ ಎಲ್ಲ ಸದಸ್ಯರನ್ನು ಮೇ19 ರಂದು ಆರಂಭಗೊಂಡ 14-ದಿನಗಳ ಕಡ್ಡಾಯ ಕ್ವಾರಂಟೀನ್​ಗೆ ಒಳಪಡಿಸಲಾಗಿದೆ. ಕ್ವಾರಂಟೀನ್ ಅವಧಿ ಮುಗಿದ ನಂತರವೇ ಭಾರತ ತಂಡ ಇಂಗ್ಲೆಂಡ್​ ಪ್ರವಾಸ ಬೆಳಸಲಿದೆ. ಇಂಗ್ಲೆಂಡ್​ಗೆ ಹೋದ ನಂತರವೂ ಟೀಮ್ ಇಂಡಿಯಾದ ಸದಸ್ಯರು ಕ್ವಾರಂಟೀನ್​ಗೊಳಗಾಗಲಿದ್ದಾರೆ.
ಡಬ್ಲ್ಯೂಟಿಸಿ ನಂತರ ಬಾರತ ಮತ್ತು ಇಂಗ್ಲೆಂಡ್ 5-ಪಂದ್ಯಗಳ ಟೆಸ್ಟ್​ ಸರಣಿ ಆಡಲಿವೆ.

2019ರ ವಿಶ್ವಕಪ್​ ಪೈನಲ್​ನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಪಂದ್ಯ ಸೂಪರ್​ ಓವರ್​ನಲ್ಲೂ ಟೈನಲ್ಲಿ ಮುಕ್ತಾಯಗೊಂಡಾಗ ವಿಜೇತರನ್ನು ನಿರ್ಧರಿಸಲು ಜಾಸ್ತಿ ಬೌಂಡರಿ ಬಾರಿಸಿದ ತಂಡವನ್ನು ವಿಜಯೀ ಎಂದು ಪರಿಗಣಿಸುವ ಭಾರೀ ವಿವಾದಾತ್ಮಕ ಪದ್ಧತಿಯನ್ನು ಐಸಿಸಿ ಅನುಸರಿಸಿತ್ತು.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಪಂದ ಡ್ರಾ ಇಲ್ಲವೇ ಟೈನಲ್ಲಿ ಕೊನೆಗೊಂಡರೆ ಎರಡೂ ಟೀಮುಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುವುದು ಅಂತ ಐಸಿಸಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಈ ಪಂದ್ಯಕ್ಕೆ ಡ್ಯೂಕ್ಸ್ ಚೆಂಡುಗಳನ್ನು ಉಪಯೋಗಿಸಲಾಗುವುದೆಂದು ಸಹ ಐಸಿಸಿ ಹೇಳಿದೆ. ಐದು ದಿನಗಳ ಆಟ ಸಂಪೂರ್ಣವಾಗಿ ನಡೆಯುವುದನ್ನು ಖಾತ್ರಿಪಡಿಸುವುದಕ್ಕೋಸ್ಕರ ಒಂದು ದಿನವನ್ನು ರಿಸರ್ವ್ ದಿನವಾಗಿಡಲಾಗಿದೆ ಅಂತಲೂ ಐಸಿಸಿ ಹೇಳಿದೆ.

ಟೆಸ್ಟ್ ಪಂದ್ಯ ನಡೆಯುವ ಸಂದರ್ಭದಲ್ಲಿ ಮಳೆ ಇಲ್ಲವೇ ಇನ್ಯಾವುದೋ ಕಾರಣಕ್ಕೆ ಒಂದು ದಿನದಾಟದಲ್ಲಿ 90 ಓವರ್​ಗಳ ಆಟ ನಡೆಯದೆ ಹೋದರೆ ಮಾತ್ರ ರಿಸರ್ವ್ ದಿನವನ್ನು ಬಳಸಿಕೊಳ್ಳಲಾಗುವುದು ಎಂದು ಐಸಿಸಿ ಹೇಳಿದೆ.

‘ಐದು ದಿನಗಳ ಕಾಲ ಆಟ ಸಂಪೂರ್ಣವಾಗಿ ನಡೆದು ಪಂದ್ಯದಲ್ಲಿ ಪಾಸಿಟಿವ್ ಫಲಿತಾಂಶ ಬಾರದೇ ಹೋದರೆ, ಹೆಚ್ಚುವರಿಯಾಗಿ ರಿಸರ್ವ್ ದಿನವನ್ನು ಬಳಸಿಕೊಳ್ಳಲಾಗದು. ಹಾಗೊಂದು ವೇಳೆ ಪಂದ್ಯದಲ್ಲಿ ಫಲಿತಾಂಶ ಬಾರದೇ ಹೋದರೆ ಅದನ್ನು ಡ್ರಾ ಎಂದು ಪರಿಗಣಿಸಲಾಗುವುದು,’ ಎಂದು ಐಸಿಸಿ ಹೇಳಿದೆ.

ಇದನ್ನೂ ಓದಿ: WTC Final: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ಗಾಗಿ ಕೊಹ್ಲಿ ಬದಲಾಗಲೇಬೇಕು; ವಿರಾಟ್​ಗೆ ಬುದ್ಧಿ ಹೇಳಿದ ಕಪಿಲ್ ದೇವ್

ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Loading...
Unable to load recommendations.
Follow Us