ಐಪಿಎಲ್​​ ಟಿಕೆಟ್ ಖರೀದಿಸಲು ಹೋಗಿ 86 ಸಾವಿರ ಕಳೆದುಕೊಂಡ ಮಹಿಳೆ, ಟಿಕೆಟ್​ ವಂಚನೆಗೆ ಇಲ್ವಾ ಕಡಿವಾಣ?

|

Updated on: Apr 16, 2024 | 5:28 PM

ಐಪಿಎಲ್ ಶುರುವಾಗಿದ್ದೇ ತಡ ಆರ್​ಸಿಬಿ ಫ್ಯಾನ್​ಗಳು ಟಿಕೆಟ್ ಎಷ್ಟೇ ಕಾಸ್ಟ್ಲಿ ಇರಲಿ ಟಿಕೆಟ್ ಖರೀದಿಸಿ ಸ್ಟೇಡಿಯಂನಲ್ಲೇ ಮ್ಯಾಚ್ ನೋಡ್ತೀವಿ ಎಂದು ಮುಗಿಬೀಳ್ತಾರೆ. ಸೋತರೂ-ಗೆದ್ದರೂ ಆರ್​ಸಿಬಿ ಕ್ರೇಜ್ ಮಾತ್ರ ಕೊಂಚವೂ ಇಳಿದಿಲ್ಲ. ಅದೇ ರೀತಿ ಇಲ್ಲೊಬ್ರು ಆರ್​ಸಿಬಿ ಅಭಿಮಾನಿ ತನ್ನ ಕುಟುಂಬ ಮತ್ತು ಸ್ನೇಹಿತರ ಜೊತೆ ಪಂದ್ಯ ನೋಡೋಣ ಎಂದು 20 ಟಿಕೆಟ್​ಗಳನ್ನು ಬುಕ್ ಮಾಡಲು ಹೋಗಿ 86 ಸಾವಿರಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ.

ಐಪಿಎಲ್​​ ಟಿಕೆಟ್ ಖರೀದಿಸಲು ಹೋಗಿ 86 ಸಾವಿರ ಕಳೆದುಕೊಂಡ ಮಹಿಳೆ, ಟಿಕೆಟ್​ ವಂಚನೆಗೆ ಇಲ್ವಾ ಕಡಿವಾಣ?
ಐಪಿಎಲ್ ಟಿಕೆಟ್ಸ್
Follow us on

ಡಿಜಿಟಲ್ ಯುಗ ಬಂದು ಕೈ ಬೆರಳಲ್ಲೇ ಎಲ್ಲವೂ ಸಿಗುವಂತಾಗಿದೆ. ಒಂದೇ ಒಂದು ಕ್ಲಿಕ್​ನಲ್ಲಿ ಅಡಗಿದೆ ಸಾವಿರಾರು ರೂಪಾಯಿಯ ವ್ಯವಹಾರ. ಹೌದು ಇದು ಡಿಜಿಟಲ್ ಯುಗ ಮನೆಗೆ ಸಾಮಾನು ತರುವುದರಿಂದ ಹಿಡಿದು ಕರೆಂಟ್ ಬಿಲ್, ವಾಟರ್ ಬಿಲ್, ಸಿನಿಮಾ ಟಿಕೆಟ್ ಅಷ್ಟೇ ಯಾಕೆ 5 ರೂ ಚಾಕಲೇಟ್​ಗೂ ಗೂಗಲ್ ಪೇ, ಫೂನ್ ಪೇ ಮೊರೆ ಹೋಗುವಂತಾಗಿದೆ. ನಗರಗಳಲ್ಲಿ 90 ಪರ್ಸೆಂಟ್ ಜನ ಹಣ ಡ್ರಾ ಮಾಡಲ್ಲ. ತೀರ ಮುಖ್ಯ ಅನಿಸಿದಾಗ ಮಾತ್ರ ಹಣ ಡ್ರಾ ಮಾಡ್ತಾರೆ. ಇಲ್ಲ, ಗೂಗಲ್ ಪೇ, ಫೂನ್ ಪೇ, ಕಾರ್ಡ್​ಗಳ ಮೂಲಕವೇ ಜೀವನ ನಡೆಸಿಬಿಡ್ತಾರೆ. ಇದು ಒಂದು ಕಡೆಯಾದ್ರೆ ಮತ್ತೊಂದು ಕಡೆ ಡಿಜಿಟಲ್ ಯುಗ ಬೆಳೆಯುತ್ತಿದ್ದಂತೆ ಸೈಬರ್ ಖದೀಮರು ಕೂಡ ಚುರುಕಾಗುತ್ತಿದ್ದಾರೆ. ಯಾವ ರೀತಿಯಲ್ಲೇ ವಂಚನೆ ಮಾಡಬಹುದು ಎಂದು ಹೊಂಚು ಹಾಕುತ್ತಿದ್ದಾರೆ. ದುನಿಯಾ ಸ್ಮಾರ್ಟ್​ ಆದಂತೆಲ್ಲ ವಂಚಕರ ಜಾಲ ದೊಡ್ಡದಾಗುತ್ತಿದೆ. ವಂಚಕರ ನಯವಾದ ಮಾತಿಗೆ ಸೋತು ಮೋಸ ಹೋಗುವವರು ಹೆಚ್ಚಾಗುತ್ತಿದ್ದಾರೆ. ಐಪಿಎಲ್ ಟಿಕೆಟ್, ಸಿನಿಮಾ ಟಿಕೆಟ್​ಗಳನ್ನು ಬುಕ್ ಮಾಡಲು ಹೋಗಿ ಪಂಗನಾಮ ಹಾಕಿಸಿಕೊಂಡ ಪ್ರಕರಣಗಳು ಸಾವಿರಾರು. ಹಾಗಾದ್ರೆ ಯಾಕೆ ಸಂಬಂಧಪಟ್ಟ ಸಂಸ್ಥೆಗಳು ಈ ಬಗ್ಗೆ ಎಚ್ಚರ ವಹಿಸುತ್ತಿಲ್ಲ. ಟಿಕೆಟ್​​ಗಳು ಕಾಳಸಂತೆಯಲ್ಲಿ ಮಾರಾಟವಾಗುವ ಅವಶ್ಯಕತೆಯಾದರೂ ಏನಿದೆ ಎಂಬ ಮಾಹಿತಿ ಇಲ್ಲಿ ತಿಳಿಯಿರಿ. ಅದೊಂದು ಕಾಲವಿತ್ತು. ಕಣ್ಣು ಕಾಣದ ಮನುಷ್ಯ ನೋಟನ್ನು ಕೈಯಲ್ಲಿಡಿದು ಸ್ಪರ್ಶಿಸಿದರೆ ಸಾಕು ಎಷ್ಟು ರೂಪಾಯಿ ಎಂದು ಹೇಳಿಬಿಡುತ್ತಿದ್ದ. ಆದರೆ ಈಗಿನ ಜನ ಹಣದ ಸ್ಪರ್ಶವನ್ನೇ ಮರೆತಿದ್ದಾರೆ. ಆನ್​ಲೈನ್​ ಪಾವತಿಯಿಂದಾಗಿ 10 ರೂಪಾಯಿಯ ನೋಟು ಹೇಗೆ ಕಾಣುತ್ತೆ ಎಂಬುವುದು ಕೂಡ ಅನೇಕರಿಗೆ...

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ