ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್‌ನಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ನಡೆಯುತ್ತಿರುವ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ (Amazon Great Republic Day Sale) ಇಂದು ಕೊನೇ ದಿನವಾಗಿದೆ. ಈ ಪ್ರಯುಕ್ತ ಸ್ಮಾರ್ಟ್ಫೋನ್ಗಳ ಮೇಲೆ ಬಂಪರ್ ಡಿಸ್ಕೌಂಟ್ ಘೋಷಿಸಲಾಗಿದೆ. ಐಕ್ಯೂ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು 8,000ರೂ. ವರೆಗೆ ರಿಯಾಯಿತಿ ಪಡೆದುಕೊಂಡಿರುವುದು ವಿಶೇಷ. ಹಾಗೆಯೇ ಆ್ಯಪಲ್ ಕಂಪನಿಯ ಐಫೋನ್ (Apple iPhone), ಶವೋಮಿ, ಸ್ಯಾಮ್‌ಸಂಗ್ ಮೊಬೈಲ್ಗಳ ಮೇಲೂ ಆಕರ್ಷಕ ರಿಯಾಯಿತಿ ನೀಡಲಾಗಿದೆ. ಎಕ್ಸ್‌ಚೆಂಜ್ ಆಫರ್, ನೋ ಕಾಸ್ಟ್ ಇಎಮ್‌ಐ, ಕೊಪನ್ನಂತಹ ಕೊಡುಗೆಗಳು ಚಾಲ್ತಿಯಲ್ಲಿವೆ. ಇದರೊಂದಿಗೆ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಖರೀದಿಸುವ ಗ್ರಾಹಕರಿಗೆ ಶೇ. 10% ತ್ವರಿತ ರಿಯಾಯಿತಿ ಇದೆ. ಹಾಗಾದರೇ ಅಮೆಜಾನ್‌ನ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಆಕರ್ಷಕ ಡಿಸ್ಕೌಂಟ್‌ನಲ್ಲಿ ಕಾಣಿಸಿಕೊಂಡ ಬೆಸ್ಟ್ ಸ್ಮಾರ್ಟ್‌ಫೋನ್ ಬಗ್ಗೆ ಮಾಹಿತಿ ಇಲ್ಲಿದೆ.
ಅಮೆಜಾನ್‌ನಲ್ಲಿ ಐಫೋನ್ 12 14% ಡಿಸ್ಕೌಂಟ್ ಪಡೆದಿದೆ. ಇದರಿಂದ 64GB ಸ್ಟೋರೆಜ್ ಸಾಮರ್ಥ್ಯದ ಫೋನ್ ಇದೀಗ ಕೇವಲ 52,999 ರೂ. ಗೆ ಖರೀದಿಸಬಹುದು. 128GB ಸ್ಟೋರೆಜ್ ರೂಪಾಂತರಕ್ಕೆ 61,999 ರೂ. ಇದೆ. ಇದರ ಜೊತೆಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ M32 (12,999 ರೂ. ) ಮತ್ತು M32 5G ಫೋನ್ (18,999 ರೂ.) ಆಕರ್ಷಕ ಡಿಸ್ಕೌಂಟ್‌ನಲ್ಲಿ ಸಿಗುತ್ತಿದೆ. ಗ್ಯಾಲಕ್ಸಿ S20 FE ಈಗ ಕೇವಲ 36,990 ರೂ. ಗೆ ಮಾರಾಟ ಆಗುತ್ತಿದೆ.
ಅಮೆಜಾನ್ ಸೇಲ್‌ನಲ್ಲಿ ಐಕ್ಯೂ Z5 ಸ್ಮಾರ್ಟ್‌ಫೋನ್ ನಿಮಗೆ ಕೇವಲ 23,990ರೂ.ಗಳಿಗೆ ಲಭ್ಯವಾಗಲಿದೆ. ಇದರ ಮೂಲಬೆಲೆ 29,990ರೂ ಆಗಿದ್ದು, 20% ಡಿಸ್ಕೌಂಟ್ ಪಡೆದುಕೊಂಡಿದೆ. ಇದಲ್ಲದೆ ಅಮೆಜಾನ್ ಡಿಸ್ಕೌಂಟ್ ಕೂಪನ್ ಮೂಲಕ ಹೆಚ್ಚುವರಿಯಾಗಿ 2,000ರೂ.ಗಳ ರಿಯಾಯಿತಿ ಕೂಡ ದೊರೆಯಲಿದೆ. ಹಾಗೆಯೇ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 2,000ರೂ. ಆಫರ್ ಕೂಡ ದೊರೆಯಲಿದೆ. ಇದೆಲ್ಲದರ ಪರಣಾಮ ಈ ಸ್ಮಾರ್ಟ್‌ಫೋನ್ ನಿಮಗೆ ಕೇವಲ 19,990ರೂ.ಗಳಿಗೆ ದೊರೆಯಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ ಮೇಲೆ 21,000 ರೂ.ಗಳವರೆಗೆ ಎಕ್ಸ್‌ಚೇಂಜ್ ಆಫರ್ ಕೂಡ ಲಭ್ಯವಿದೆ. ಇನ್ನು ನೋ ಕಾಸ್ಟ್ EMI ಆಯ್ಕೆಯ ಮೂಲಕ ಉಚಿತ ಸ್ಕ್ರೀನ್ ರಿಪ್ಲೇಸ್‌ಮೆಂಟ್‌ನ ಬಂಡಲ್ ಆಫರ್‌ಗಳನ್ನು ಪಡೆದುಕೊಳ್ಳ ಬಹುದಾಗಿದೆ.
ಒನ್‌ಪ್ಲಸ್ 9R ಸ್ಮಾರ್ಟ್‌ಫೋನ್ ಅಮೆಜಾನ್‌ನಲ್ಲಿ 8% ಡಿಸ್ಕೌಂಟ್ ಪಡೆದುಕೊಂಡಿದೆ. ಇದರಿಂದ 39,999 ರೂ. ಬದಲಿಗೆ 36,999 ರೂ.ಬೆಲೆಗೆ ಲಭ್ಯವಾಗಲಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ M12 ಸ್ಮಾರ್ಟ್‌ಫೋನ್ ಅಮೆಜಾನ್‌ನಲ್ಲಿ 27% ಡಿಸ್ಕೌಂಟ್ ಪಡೆದುಕೊಂಡಿದೆ. ಈ ಸ್ಮಾರ್ಟ್ ಅನ್ನು ನೀವು ಇದೀಗ 12,959 ರೂ. ಬದಲಿಗೆ 9,499 ರೂ.ಗಳಿಗೆ ಖರೀದಿಸಬಹುದಾಗಿದೆ. ಅಂತೆಯೆ ಶವೋಮಿ ಕಂಪನಿಯ ರೆಡ್ಮಿ ನೋಟ್ 10S ಶೇ. 19 ರಷ್ಟು ರಿಯಾಯಿತಿ ಪಡೆದುಕೊಂಡಿದ್ದರೆ, ರೆಡ್ಮಿ ನೋಟ್ 10 ಪ್ರೊ ಶೇ. 14 ರಷ್ಟು ಡಿಸ್ಕೌಂಟ್‌ನಲ್ಲಿ ಸಿಗುತ್ತಿದೆ. ರೆಡ್ಮಿ ನೋಟ್ 10 5G ಬೆಲೆ 13,999 ರೂ. ಗೆ ನಿಮ್ಮದಾಗಿಸಬಹುದು. ಎಂಐ 11X 5G ಕೇವಲ 27,999 ರೂ. ಗೆ ಸೇಲ್ ಕಾಣುತ್ತಿದೆ. ಈ ಎಲ್ಲ ಆಫರ್ ಇಂದು ಅಂತ್ಯ ಕಾಣಲಿದೆ.
Realme 9i: ಭಾರತದಲ್ಲಿ ರಿಯಲ್‌ಮಿ 9i ಸ್ಮಾರ್ಟ್‌ಫೋನ್ ಬಿಡುಗಡ: ಬಜೆಟ್ ಪ್ರಿಯರು ಫುಲ್ ಫಿದಾ